12 ಹುಡ್ಗಿಯರು ರಿಜೆಕ್ಟ್ ಮಾಡಿದಕ್ಕೆ ಪಕ್ಕದ್ಮನೆ ಆಂಟಿಯನ್ನು ಕೊಂದೇಬಿಟ್ಟ!

ರಾಯ್‍ಪುರ್: 12 ಯುವತಿಯರು ಮದುವೆಯನ್ನು ರಿಜೆಕ್ಟ್ ಮಾಡಿದಕ್ಕೆ ಯುವಕನೊಬ್ಬ ಪಕ್ಕದ್ಮನೆ ಆಂಟಿಯನ್ನು ಕೊಂದ ಘಟನೆ ಛತ್ತೀಸ್‍ಗಢದ ರಾಯ್‍ಪುರ್ ನಲ್ಲಿ ನಡೆದಿದೆ.

ಪಿಂಟು ಕೊಲೆ ಮಾಡಿದ ಆರೋಪಿ. ಪಿಂಟು ಮೂಲತಃ ಮೂರೇಠಿ ಗ್ರಾಮದವನಾಗಿದ್ದು, ಪಕ್ಕದ್ಮನೆ ಮಹಿಳೆ ವಾಮಾಚಾರ ಮಾಡಿಸಿದ್ದರಿಂದ ತನಗೆ ಮದುವೆಯಾಗಿಲ್ಲ ಎಂದು ಭಾವಿಸಿ ಆಕೆಯನ್ನು ಕೊಂದಿದ್ದಾನೆ.

ಪಿಂಟು ಕುಟುಂಬದವರು ಇದೂವರೆಗೆ 12 ಮಂದಿ ಯುವತಿಯರ ಪೋಷಕರ ಜೊತೆ ಮದುವೆ ಮಾತುಕತೆ ನಡೆಸಿದ್ದಾರೆ. ಅದರಲ್ಲಿ ಕೆಲವು ಸಂಬಂಧಗಳಲ್ಲಿ ಆತನ ನಿಶ್ಚಿತಾರ್ಥ ಕೂಡ ಆಗಿತ್ತು. ನಂತರ ಅದು ಕೂಡ ಮುರಿದುಬೀಳುತ್ತಿತ್ತು. ಸಂಬಂಧ ಮುರಿದು ಬೀಳುವನ್ನು ನೋಡಿ ಪಿಂಟು ಹಾಗೂ ಆತನ ಕುಟುಂಬದ ಭಾರೀ ಚಿಂತೆಗೆ ಈಡಾಗಿತ್ತು.

ಯಾಕೆ ಸಂಬಂಧ ಮುರಿದು ಬೀಳುತ್ತಿದೆ ಎಂದು ಪಿಂಟು ಆಲೋಚಿಸುತ್ತಿದ್ದಾಗ ಆತನಿಗೆ ಪಕ್ಕದ ಮನೆಯಲ್ಲಿ ವಾಸವಿರುವ ಮಹಿಳೆ ಅಮೆರಿಕ ಪಟೇಲ್ ಮೇಲೆ ಅನುಮಾನಗೊಂಡಿದ್ದಾನೆ. ಆಕೆ ವಾಮಾಚಾರ ಮಾಡಿಸಿದ್ದಕ್ಕೆ ನನಗೆ ಮದುವೆಯಾಗುತ್ತಿಲ್ಲ ಎಂದು ಭಾವಿಸಿ ಆಕೆಯ ವಿರುದ್ಧ ದ್ವೇಷ ಸಾಧಿಸಲು ಮುಂದಾಗಿದ್ದಾನೆ.

ಏಪ್ರಿಲ್ 1 ರಂದು ಅಮೇರಿಕಾ ಪಟೇಲ್ ತನ್ನ ಮನೆಯಲ್ಲಿ ಒಬ್ಬಳೇ ಇದ್ದು, ಆಕೆಯ ತಾಯಿ ತರಕಾರಿ ತರಲು ಮಾರ್ಕೆಟ್‍ಗೆ ಹೋಗಿದ್ದರು. ಈ ವೇಳೆ ಏಕಾಏಕಿ ಪಿಂಟು ಅಮೆರಿಕ ಮನೆಗೆ ನುಗ್ಗಿ ಆಕೆಯ ಮೇಲೆ ಲಾಠಿ ಹಾಗೂ ಕೋಲಿನಿಂದ ಹಲ್ಲೆ ನಡೆಸಿದ್ದಾನೆ. ನಂತರ ದುಪ್ಪಟ್ಟಾದಿಂದ ಆಕೆ ಕುತ್ತಿಗೆಯನ್ನು ಬಿಗಿದ್ದು ಕೊಲೆ ಮಾಡಿದ್ದಾನೆ. ಕೊಲೆ ಮಾಡಿ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾಗ ಗ್ರಾಮಸ್ಥರು ಆತನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಆರೋಪಿ ಪಿಂಟು ಎರಡನೇ ವರ್ಷದ ಬಿಎ ಓದುತ್ತಿದ್ದು, ಆತನ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *