ಬೆಂಗಳೂರು: ಕುಡಿದ ಮತ್ತಿನಲ್ಲಿದ್ದ ಮಗ ತನ್ನ ಹೆತ್ತ ತಾಯಿಯನ್ನೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರು ಹೊರವಲಯ ಟಿ.ದಾಸರಹಳ್ಳಿಯ ಮಲ್ಲಸಂದ್ರ ದಲ್ಲಿ ನಡೆದಿದೆ.

55 ವರ್ಷದ ಮುನಿಯಮ್ಮ ಮಗನಿಂದಲೇ ಕೊಲೆಯಾದ ದುರ್ದೈವಿ. ಕುಡಿದ ಮತ್ತಿನಲ್ಲಿದ್ದ ಮಗ ಸಂತೋಷ್, ಮರದ ರಿಪೀಸ್‍ನಿಂದ ಬಡಿದು ತಾಯಿಯನ್ನು ಹತ್ಯೆಗೈದಿದ್ದಾನೆ. ಕೆಲಸವಿಲ್ಲದ ಸಂತೋಷ್ ಆಗಾಗ ಕುಡಿಯಲು ತಾಯಿ ಬಳಿ ಹಣಕ್ಕಾಗಿ ಪೀಡಿಸುತಿದ್ದ. ಹಣಕ್ಕಾಗಿ ಪ್ರತಿದಿನ ಇಬ್ಬರ ನಡುವೆ ಗಲಾಟೆ ನಡೆಯುತ್ತಿತ್ತು. ಸೋಮವಾರ ರಾತ್ರಿ ಸಂತೋಷ್ ಮದ್ಯದ ನಶೆಯಲ್ಲಿ ಮರದ ರಿಪೀಸ್‍ನಿಂದ ಬಡಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಬಾಗಲಗುಂಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಸಂತೋಷ್ ನನ್ನು ವಶಕ್ಕೆ ಪಡೆದಿದ್ದಾರೆ.





Leave a Reply