ಪತ್ನಿಯನ್ನು ಮದ್ವೆಯಾಗಲು ಸ್ನೇಹಿತನನ್ನೇ ಕೊಂದ ವ್ಯಕ್ತಿ ಅರೆಸ್ಟ್

ನವದೆಹಲಿ: ಸ್ನೇಹಿತನ ಪತ್ನಿಯನ್ನು ಮದುವೆಯಾಗಲು ಆತನನ್ನೇ ಕೊಲೆ ಮಾಡಿದ ವ್ಯಕ್ತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಗುಲ್ಕೇಶ್ ಕೊಲೆ ಮಾಡಿದ ವ್ಯಕ್ತಿ. ಗುಲ್ಕೇಶ್ ತನ್ನ ಸ್ನೇಹಿತ ದಲ್ಬೀರ್ ಪತ್ನಿಯನ್ನು ಮದುವೆ ಆಗಲು ಬಯಸಿದ್ದನು. ಅಲ್ಲದೆ ಗುಲ್ಕೇಶ್‍ಗೆ ದಲ್ಬೀರ್ ಪತ್ನಿ ಜೊತೆ ಅನೈತಿಕ ಸಂಬಂಧ ಇತ್ತು. ಹೀಗಾಗಿ ಅವನು ತನ್ನ ಸ್ನೇಹಿತನನ್ನೇ ಕೊಲೆ ಮಾಡಿದ್ದಾನೆ.

ಜೂನ್ 25ರ ನಸುಕಿನ ಜಾವದಂದು ಗುಲ್ಕೇಶ್ ತನ್ನ ಗೆಳೆಯ ದಲ್ಬೀರ್ ನನ್ನು ದೆಹಲಿಯ ಜಾಕೀರ್ ಬಳಿಯಿರುವ ರೈಲ್ವೆ ಹಳಿ ಬಳಿ ಕರೆಸಿಕೊಂಡಿದ್ದನು. ದಲ್ಬೀರ್ ಅಲ್ಲಿ ಬರುತ್ತಿದ್ದಂತೆ ಗುಲ್ಕೇಶ್ ಇಟ್ಟಿಗೆಯಿಂದ ಆತನ ತಲೆಗೆ ಹೊಡೆದಿದ್ದಾನೆ. ಗುಲ್ಕೇಶ್ ಹೊಡೆತದಿಂದ ದಲ್ಬೀರ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ದಲ್ಬೀರ್ ಮೃತದೇಹ ಛಿದ್ರವಾಗಲೆಂದು ಎಂದು ಗುಲ್ಕೇಶ್ ಆತನ ಮೃತದೇಹವನ್ನು ರೈಲ್ವೇ ಹಳಿ ಮೇಲೆ ಬಿಸಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗುಲ್ಕೇಶ್ ಕೊಲೆ ಮಾಡಿದ ಬಳಿಕ ಪೊಲೀಸರಿಗೆ ಕರೆ ಮಾಡಿ ರೈಲ್ವೆ ಹಳಿ ಮೇಲೆ ಮೃತದೇಹ ಬಿದ್ದಿದೆ ಎಂದು ಹೇಳಿದ್ದಾನೆ. ಅಲ್ಲದೆ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾಗ ಗುಲ್ಕೇಶ್ ಅವರ ದಾರಿಯನ್ನು ತಪ್ಪಿಸಿದ್ದಾನೆ. ಪೊಲೀಸರು ಗುಲ್ಕೇಶ್ ಕಾಲ್ ರೆಕಾರ್ಡ್ ಚೆಕ್ ಮಾಡಿದ್ದಾರೆ. ಅದರಲ್ಲಿ ಗುಲ್ಕೇಶ್ ತನ್ನ ಸ್ನೇಹಿತ ದಲ್ಬೀರ್ ಗೆ ಕರೆ ಮಾಡಿದ್ದು ಪೊಲೀಸರಿಗೆ ತಿಳಿದು ಬಂತು. ಬಳಿಕ ವಿಚಾರಣೆ ನಡೆಸಿದ್ದಾಗ ಗುಲ್ಕೇಶ್, ದಿಲ್ಬೀರ್ ಪತ್ನಿ ಜೊತೆ ಅಕ್ರಮ ಸಂಬಂಧ ಇರುವುದನ್ನು ಪೊಲೀಸರ ಬಳಿ ಹೇಳಿಕೊಂಡಿದ್ದಾನೆ.

ನನಗೆ ದಲ್ಬೀರ್ ಪತ್ನಿ ಜೊತೆ ಅಕ್ರಮ ಸಂಬಂಧ ಇದೆ. ನಾನು ಆಕೆಯನ್ನು ಮದುವೆ ಆಗಬೇಕು ಎಂದುಕೊಂಡಿದ್ದೆ. ಹಾಗಾಗಿ ದಲ್ಬೀರ್ ನನ್ನು ಕೊಲೆ ಮಾಡಿರುವುದಾಗಿ ಗುಲ್ಕೇಶ್ ಹೇಳಿದ್ದಾನೆ. ಸದ್ಯ ಪೊಲೀಸರು ದಲ್ಬೀರ್ ಪತ್ನಿ ಹಾಗೂ ಈ ಪ್ರಕರಣಕ್ಕೆ ಸಂಬಂಧಪಟ್ಟವರನ್ನು ವಿಚಾರಣೆ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *