ಸುತ್ತಿಗೆಯಿಂದ ಹೊಡೆದು ತಂದೆಯ ಕೊಲೆ – ಶವವನ್ನು ಪೀಸ್ ಪೀಸ್ ಮಾಡಿ ಸೂಟ್‍ಕೇಸ್‍ನಲ್ಲಿ ತುಂಬಿದ ಪಾಪಿ ಮಗ

ಲಕ್ನೋ: ಆಸ್ತಿ ವಿವಾದಕ್ಕಾಗಿ ವ್ಯಕ್ತಿಯೊಬ್ಬ ತನ್ನ ತಂದೆಯನ್ನು ಸುತ್ತಿಗೆಯಿಂದ (Hammer) ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದ (Uttar Pradesh) ಗೋರಖ್‍ಪುರದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಸೂರಜ್ ಕುಂಡ್ ಕಾಲೋನಯಲ್ಲಿ ಈ ಘಟನೆ ನಡೆದಿದೆ. ಮುರುಳಿಧರ್ ಗುಪ್ತ (62) ಮೃತ ವ್ಯಕ್ತಿ ಹಾಗೂ ಆರೋಪಿಯನ್ನು ಸಂತೋಷ್ ಕುಮಾರ್ ಗುಪ್ತಾ ಅಲಿಯಾಸ್ ಪ್ರಿನ್ಸ್ (30) ಎಂದು ಗುರುತಿಸಲಾಗಿದೆ.

ಆಸ್ತಿ ಕುರಿತು ತಂದೆ ಹಾಗೂ ಮಗನ ನಡುವೆ ಜಗಳ ನಡೆದಿದೆ. ಈ ವೇಳೆ ಮುರುಳಿಧರ್ ಒಬ್ಬನೇ ಇದ್ದುದ್ದನ್ನು ನೋಡಿದ ಸಂತೋಷ್ ಸುತ್ತಿಗೆಯಿಂದ ಹಲ್ಲೆ ನಡೆಸಿದ್ದಾನೆ. ಪರಿಣಾಮ ಮುರುಳಿಧರ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅದಾದ ಬಳಿಕ ಮುರುಳಿಧರ್‌ನ ದೇಹವನ್ನು ವಿಲೇವಾರಿ ಮಾಡಲು ದೇಹವನ್ನು ತುಂಡಾಗಿ ಕತ್ತರಿಸಿದ್ದಾನೆ. ನಂತರ ಸಂತೋಷ್ ಸಹೋದರನ ಕೊಠಡಿಯಿಂದ ಸೂಟ್‍ಕೇಸ್ (Suitcase) ಅನ್ನು ತಂದು ಶವದ ತುಂಡುಗಳನ್ನು ಅದರಲ್ಲಿ ಹಾಕಿದ್ದಾನೆ. ಸೂಟ್‍ಕೇಸ್‍ನ್ನು ಮನೆಯ ಹಿಂದಿನ ರಸ್ತೆಯಲ್ಲಿ ಬಚ್ಚಿಟ್ಟಿದ್ದಾನೆ.

ಘಟನೆಗೆ ಸಂಬಂಧಿಸಿ ಆರೋಪಿ ಸಂತೋಷ್‍ನ ಸಹೋದರ ಪ್ರಶಾಂತ್ ಗುಪ್ತಾ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಕುಮಟಳ್ಳಿಗೆ ಗೋಕಾಕ್ ಕ್ಷೇತ್ರ ಬಿಟ್ಟುಕೊಡಲಿ- ರಮೇಶ್ ಜಾರಕಿಹೊಳಿಗೆ ಸವದಿ ಪುತ್ರ ಸವಾಲ್

ಆರೋಪಿಯ ಸಹೋದರನ ಮಾಹಿತಿಯ ಮೇರೆಗೆ, ಪೊಲೀಸರು ದೇಹದ ಭಾಗಗಳನ್ನು ವಶಪಡಿಸಿಕೊಂಡರು ಮತ್ತು ಅವುಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ ಎಂದು ಅಧಿಕಾರಿ ಹೇಳಿದರು. ಇದನ್ನೂ ಓದಿ: ಮೋದಿ ಸ್ವಾಗತ ವೇಳೆ ಫೈಟರ್ ರವಿ- ಪ್ರಧಾನಿ ಹುದ್ದೆಗೆ ಕಳಂಕವೆಂದು ಕುಟುಕಿದ ಕಾಂಗ್ರೆಸ್

Comments

Leave a Reply

Your email address will not be published. Required fields are marked *