ಸ್ನಾನ ಮಾಡುವಾಗ ಫೋಟೋ ಕ್ಲಿಕ್ಕಿಸಿ ಸೆಕ್ಸ್ ಗೆ ಒತ್ತಾಯ- ವ್ಯಕ್ತಿ ರುಂಡ, ಮುಂಡ ಕತ್ತರಿಸಿದ ಪೋಷಕರು

ಚಿಕ್ಕಮಗಳೂರು: ಪಕ್ಕದ ಮನೆಯವರ ಸ್ನೇಹ ಮಾಡಿಕೊಂಡು ಆಕೆ ಸ್ನಾನ ಮಾಡುವಾಗ ಫೋಟೋ ಕ್ಲಿಕ್ಕಿಸಿ ದೈಹಿಕ ಸಂಪರ್ಕ ಬೆಳೆಸು ಎಂದು ಪೀಡಿಸುತ್ತಿದ್ದವ ಕೊಲೆಯಾಗಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ರುದ್ರಸ್ವಾಮಿ(32) ಕೊಲೆಯಾದ ದುರ್ದೈವಿ. ರುದ್ರಸ್ವಾಮಿ ಮೂಲತಃ ದಾವಣಗೆರೆಯವನಾಗಿದ್ದು, ಬೆಂಗಳೂರಲ್ಲಿ ಐಶ್ವರ್ಯ ಕನ್ಸಲ್ಟೆನ್ಸ್ ಇಟ್ಟುಕೊಂಡು ಖಾಸಗಿ ಕೆಲಸ ಕೊಡಿಸುತ್ತಿದ್ದ. ನೆರೆಯ ಆಶಾ ಎಂಬವಳ ಸ್ನೇಹ ಮಾಡಿಕೊಂಡು, ಆಕೆ ಸ್ನಾನ ಮಾಡುವಾಗ ಫೋಟೋ ತೆಗೆದುಕೊಂಡು ಹಣ ಹಾಗೂ ದೈಹಿಕ ಸುಖಕ್ಕೆ ಪೀಡಿಸುತ್ತಿದ್ದ.

ಊರಿಗೆ ಬಂದ ಆಶಾ ಈ ವಿಷಯವನ್ನು ಹೆತ್ತವರಿಗೆ ಮುಟ್ಟಿಸಿದ್ದಳು. ಅಪ್ಪನ ಮಾತು ಕೇಳಿ ಆಶಾ ರುದ್ರಸ್ವಾಮಿಯನ್ನು ಊರಿಗೆ ಬಾ ಅಂತ ಕರೆದಳು. ಆಗ ರುದ್ರಸ್ವಾಮಿ ಶಾಂತನಾಗಿ ದಾವಣಗೆರೆಯತ್ತ ಕಾರಿನಲ್ಲಿ ಹೊರಟ್ಟನು. ರುದ್ರನ ದಾರಿ ಕಾದಿದ್ದ ಆಶಾ ಕುಟುಂಬ ಬಂದವನನ್ನು ಎಳನೀರು ಕುಡಿಯೋಕೆಂದು ತೋಟಕ್ಕೆ ಕರೆತಂದಿದ್ದಾರೆ. ಆತ ಗಳದಿಂದ ಎಳನೀರು ಕೀಳುವಾಗ ಆಶಾ, ಅಪ್ಪ-ಅಮ್ಮ ಹಾಗೂ ಸಹೋದರ ಸೇರಿ ಆತನನ್ನು ಕೊಲೆ ಮಾಡಿದ್ದಾರೆ.

ಈ ಕೊಲೆಯನ್ನು ಮುಚ್ಚಿ ಹಾಕೋಕೆ ಮತ್ತೊಂದು ಧೈರ್ಯ ಮಾಡಿದ್ದರು. ಸತ್ತ ಕುರಿ ಕತ್ತು ಸೀಳುವಂತೆ ಸತ್ತು ಬಿದ್ದವನ ರುಂಡ ಕತ್ತರಿಸಿದ್ದರು. ರುಂಡ ಹಾಗೂ ಮುಂಡವನ್ನು ಬೇರೆ-ಬೇರೆ ಚೀಲಕ್ಕೆ ಹಾಕಿ ಎರಡೂ ಚೀಲಕ್ಕೂ ಕಲ್ಲು ತುಂಬಿದ್ದರು. ರುದ್ರಸ್ವಾಮಿ ಬಂದಿದ್ದ ಕಾರಿನ ಡಿಕ್ಕಿಗೆ ರುಂಡ-ಮುಂಡ ಹಾಕಿಕೊಂಡು ಬಂದು, ಚನ್ನಗಿರಿಯಿಂದ 80 ಕಿ.ಮೀ. ದೂರದ ಅಜ್ಜಂಪುರದ ಸಮೀಪದ ಬುಕ್ಕರಾಯನಕೆರೆಗೆ ತಂದು ರುಂಡವನ್ನು ಒಂದೆಡೆ, ಮುಂಡವನ್ನು ಒಂದೆಡೆ ಎಸೆದಿದ್ದಾರೆ. ಕಾರನ್ನು ನೀಲಗಿರಿ ಪ್ಲಾಂಟೇಷನ್‍ನಲ್ಲಿ ಬಿಟ್ಟು ಹೋಗಿದ್ದಾರೆ.

ಮೃತನ ತೋಳಿನ ಮೇಲಿದ್ದ ವಾಣಿ ಮತ್ತು ಐಶ್ವರ್ಯ ಎಂಬ ಹೆಸರು ಕಾರಿನೊಳಗಿದ್ದ ರಕ್ತದಮಯ ಹಾಗೂ ನಂಬರ್ ಪ್ಲೇಟ್‍ನಿಂದ ಮೃತನ ಗುರುತು ಸಿಕ್ಕಿದ್ದು, ಆಶಾ ಸೇರಿದಂತೆ ತಂದೆ-ತಮ್ಮ ಅಂದರ್ ಆಗಿದರೆ, ಅಮ್ಮ ಮಾತ್ರ ನಾಪತ್ತೆಯಾಗಿದ್ದಾಳೆ. ಮೃತ ರುದ್ರಸ್ವಾಮಿ ಹಾಗು ಆಶಾಳಿಗೂ ಸಂಬಂಧವಿತ್ತು. ಆಶಾ ಕುಟುಂಬ ಆರ್ಥಿಕವಾಗಿ ಸಬಲರಾಗಿದ್ದೇ ರುದ್ರಸ್ವಾಮಿಯಿಂದ ಅಂತೆಲ್ಲಾ ಊಹಾಪೋಹಗಳು ಹರಿದಾಡುತ್ತಿವೆ. ಆದರೆ ಯಾವುದಕ್ಕೂ ಸಾಕ್ಷಿ ಇಲ್ಲ. ಆಶಾ ಪೊಲೀಸರ ಬಳಿ ಹೇಳಿರೋ ಹೇಳಿಕೆಗಳು ಸತ್ಯವೋ ಅಥವಾ ಪೊಲೀಸರಿಗೂ ದಾರಿ ತಪ್ಪಿಸಿದ್ದಾಳೋ ಗೊತ್ತಿಲ್ಲ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Comments

Leave a Reply

Your email address will not be published. Required fields are marked *