ಬೆಂಗಳೂರು: ಸಿಗರೇಟ್ ವಿಚಾರಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ವಿಜಯನಗರದ ವಾಟರ್ ಟ್ಯಾಂಕ್ ಬಳಿ ನಡೆದಿದೆ.
ಮಹಾದೇವ್ ಕೊಲೆಯಾದ ದುರ್ದೈವಿ. ವಿಜಯನಗರದ ವಾಟರ್ ಟ್ಯಾಂಕ್ ಬಳಿಯಿರುವ ಫುಡ್‍ಸ್ಟ್ರೀಟ್‍ನಲ್ಲಿ ಬೀಡ ಅಂಗಡಿ ಇಟ್ಟಿದ್ದ ರಾಜ್ ದೀಪ್ ಸಿಂಗ್ ಹಾಗೂ ಮಹದೇವ್ ಊಟಕ್ಕೆ ತೆರಳಿದ್ದರು. ಈ ವೇಳೆ ವಿನಯ್ ಎಂಬಾತ ಅಂಗಡಿಯಲ್ಲಿದ್ದ ಸಿಗರೇಟ್ ತೆಗೆದುಕೊಂಡು, ಹಣ ಕೊಡದೆ ಹಾಗೇ ಹೋಗಿದ್ದ.
ಇದನ್ನು ಪ್ರಶ್ನಿಸಲು ತೆರಳಿದ್ದ ರಾಜ್‍ದೀಪ್ ಸಿಂಗ್ ಹಾಗೂ ಮಹಾದೇವ್, ವಿನಯ್‍ಗೆ ಸಿಗರೇಟಿನ ಹಣವನ್ನು ಪೆಟಿಎಂ ಮೂಲಕ ವರ್ಗಾಯಿಸೆಂದು ಹೇಳಿದ್ದರು. ಈ ವೇಳೆ ಜಗಳಕ್ಕೆ ನಿಂತ ವಿನಯ್ ಏಕಾಏಕಿ ಚಾಕುವಿನಿಂದ ಮಹಾದೇವ್ ಎದೆ ಭಾಗಕ್ಕೆ ಇರಿದು, ವಿಕೆಟ್ ಬ್ಯಾಟ್‍ನಿಂದ ಥಳಿಸಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಮಹದೇವ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕೊಲೆಯನ್ನು ಕಂಡ ಸ್ಥಳೀಯರು ಕೂಡಲೇ ಆರೋಪಿ ವಿನಯ್‍ಗೆ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಘಟನೆ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply