ಒಂದಲ್ಲ, ಎರಡಲ್ಲ 6 ಮಂದಿಯ ಜೊತೆ ವಿವಾಹ – ಪತ್ನಿಯರಿಗೂ ಬಂದಿಲ್ಲ ಅನುಮಾನ, ಕೊನೆಗೆ ಸಿಕ್ಕಿ ಬಿದ್ದ

ಹೈದರಾಬಾದ್: ಒಬ್ಬರಿಗೆ ತಿಳಿಯದೇ ಇನ್ನೊಬ್ಬಳನ್ನು ಮದುವೆಯಾಗುವುದು ಕೇವಲ ಸಿನಿಮಾದಲ್ಲಿ ಮಾತ್ರ ಸಾಧ್ಯ, ನಿಜ ಜೀವನದಲ್ಲಿ ಇದು ಸಾಧ್ಯವೇ ಇಲ್ಲ ಎಂದು ತಿಳಿದುಕೊಂಡಿರುವವರೂ ಈ ಸುದ್ದಿಯನ್ನು ಓದಲೇ ಬೇಕು. ಇಲ್ಲೊಬ್ಬ ಅಸಾಮಿ ಒಂದಲ್ಲ, ಎರಡಲ್ಲ ಆರು ಮದುವೆಯಾಗಿದ್ದು, ಯಾರೊಬ್ಬರಿಗೂ ತಿಳಿಯದಂತೆ ಜೀವನ ನಡೆಸುತ್ತಿದ್ದ ಎಂಬುದನ್ನು ಹೈದರಾಬಾದ್ ಪೊಲೀಸರು ಕಂಡುಹಿಡಿದಿದ್ದಾರೆ.

ತನ್ನ ಹಣದೊಂದಿಗೆ ಪತಿ ಪರಾರಿಯಾಗಿದ್ದಾನೆ ಎಂದು ಹೈದರಾಬಾದ್‍ನ ಪೊಲೀಸರಿಗೆ ಮಹಿಳೆಯೊಬ್ಬಳು ದೂರು ಕೊಟ್ಟಿದ್ದಾಳೆ. ದೂರು ದಾಖಲಿಸಿಕೊಂಡ ಪೊಲೀಸರು ಆತನ ಬಗ್ಗೆ ತನಿಖೆ ಮಾಡಲು ಪ್ರಾರಂಭ ಮಾಡಿದ್ದಾರೆ. ಈ ವೇಳೆ ಪೊಲೀಸರೇ ಆ ವ್ಯಕ್ತಿ ಬಗ್ಗೆ ತಿಳಿದುಕೊಂಡು ಆಶ್ಚರ್ಯಗೊಂಡಿದ್ದಾರೆ.

ಆಂಧ್ರಪ್ರದೇಶದ ಮಂಗಳಗಿರಿ ಮೂಲದ ವ್ಯಕ್ತಿ ಕೇವಲ ದೂರುದಾರರನ್ನು ಮಾತ್ರವಲ್ಲದೆ ಐದು ಮಹಿಳೆಯರನ್ನು ಮದುವೆಯಾಗಿದ್ದಾನೆ. ಆದರೆ ಈ ಬಗ್ಗೆ ಯಾವ ಮಹಿಳೆಗೂ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

MARRIAGE

ಹೈದರಾಬಾದ್‍ನ ಪೊಲೀಸರು ಗುರುವಾರ ಆರೋಪಿ ಅಡಪ ಶಿವ ಶಂಕರ ಬಾಬು(33)ನನ್ನು ವಿಶಾಖಪಟ್ಟಣಂನಿಂದ ಬಂಧಿಸಿ ನಂತರ ಹೈದರಾಬಾದ್‍ಗೆ ಕರೆತಂದಿದ್ದಾರೆ. ಪ್ರಸ್ತುತ ಬಾಬು ವಿರುದ್ಧ ನಂಬಿಕೆ ದ್ರೋಹ ಮತ್ತು ವಂಚನೆ ಆರೋಪಗಳನ್ನು ಆಧಾರ ಮೇಲೆ ದೂರು ದಾಖಲಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಇನ್ನೂ ಬೇರೆ ವ್ಯಕ್ತಿಗಳು ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಇದನ್ನೂ ಓದಿ:  ಭಾರತೀಯರು, ಸಿಖ್ ದೇಶಬಾಂಧವರು ಆಫ್ಘಾನ್‍ಗೆ ಮರಳಿ: ತಾಲಿಬಾನ್

MARRIAGE

ದೂರಿನಲ್ಲಿ ಏನಿತ್ತು?
ಪೊಲೀಸರನ್ನು ಸಂಪರ್ಕಿಸಿದ ಮಹಿಳೆ 2021ರಲ್ಲಿ ಮ್ಯಾಟ್ರಿಮೋನಿಯಲ್ ಸೈಟ್‍ನಲ್ಲಿ ಅವನ ಪ್ರೊಫೈಲ್ ನೋಡಿದ ನಂತರ ಬಾಬುನನ್ನು ಮದುವೆಯಾಗಲು ನಿರ್ಧಾರಿಸಿದ್ದಾಳೆ. ನಂತರ ಒಪ್ಪಿಗೆ ಮೇರೆಗೆ ಅವರಿಬ್ಬರು ಮದುವೆಯಾಗಿದ್ದಾರೆ. ಮದುವೆಯಾದ ಸ್ವಲ್ಪ ದಿನಗಳ ನಂತರ ಆತ ಆಕೆಯ ಚಿನ್ನಾಭರಣಗಳು ಮತ್ತು 20 ಲಕ್ಷ ರೂಪಾಯಿ ಮೌಲ್ಯದ ನಗದು ಹಣದೊಂದಿಗೆ ಪರಾರಿಯಾಗಿದ್ದಾನೆ ಎಂದು ಆರೋಪಿಸಿದ್ದಳು.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *