ಫೋಟೋಗೆ ಅಶ್ಲೀಲ ಪದ ಬಳಸಿ ಫೇಸ್ಬುಕ್ ಗೆ ಪೋಸ್ಟ್- ಲಕ್ಷ ಲಕ್ಷ ಡಿಮ್ಯಾಂಡ್ ಇಟ್ಟಿದ್ದ ವ್ಯಕ್ತಿಗೆ ಸಖತ್ ಗೂಸಾ

ತುಮಕೂರು: ವಿವಾಹಿತ ಮಹಿಳೆಗೆ ಫೇಸ್ಬುಕ್ ನಲ್ಲಿ ಲೈಂಗಿಕ ಕಿರುಕುಳ ನೀಡಿದ್ದ ವ್ಯಕ್ತಿಯೋರ್ವನನ್ನು ಸಾರ್ವಜನಿಕರು ಹಿಡಿದು ಗೂಸಾ ಕೊಟ್ಟ ಘಟನೆ ತುಮಕೂರು ನಗರದ ಭೀಮಸಂದ್ರದಲ್ಲಿ ನಡೆದಿದೆ.

ನೆಲಮಂಗಲ ಮೂಲದ ಮೋಹನ್ ಗೂಸಾ ತಿಂದ ವ್ಯಕ್ತಿ. ಈತ ಫೇಸ್ಬುಕ್ ನಲ್ಲಿ ಭೀಮಸಂದ್ರದ ಮಹಿಳೆಯನ್ನ ಪರಿಚಯ ಮಾಡಿಕೊಂಡು ಬಳಿಕ ಅವರ ಫೋಟೋಗೆ ಅಶ್ಲೀಲ ಪದಗಳನ್ನು ಬಳಸಿ ಪೋಸ್ಟ್ ಮಾಡಿದ್ದಾನೆ. ನಂತರ ಆ ಫೋಟೋ ತೋರಿಸಿ ಬ್ಲಾಕ್ ಮೇಲ್ ಮಾಡಿದ್ದಾನೆ. ಜೊತೆಗೆ ಮಹಿಳೆಯ ಸಹೋದರ ಮಂಜುನಾಥ್ ಮತ್ತು ಕುಟುಂಬದವರಿಗೆ ಕಳೆದ ಆರು ತಿಂಗಳಿನಿಂದ ಕರೆಮಾಡಿ ಮಾನಸಿಕವಾಗಿ ಹಿಂಸೆ ನೀಡಿದ್ದಲ್ಲದೆ, 5 ಲಕ್ಷ, 15 ಲಕ್ಷ ಹಣ ನೀಡುವಂತೆ ಡಿಮ್ಯಾಂಡ್ ಕೂಡ ಮಾಡಿದ್ದಾನೆ ಎಂಬುವುದಾಗಿ ತಿಳಿದುಬಂದಿದೆ.

ಮೋಹನ್ ವರ್ತನೆಯಿಂದ ಬೇಸತ್ತಿದ್ದ ಮಹಿಳೆಯ ಪೋಷಕರು 6-7 ತಿಂಗಳಿನಿಂದ ಮೋಹನನ್ನು ಹಿಡಿಯಲು ಪ್ರಯತ್ನಿಸಿದ್ದಾರೆ. ಆದರೆ ಕಿಲಾಡಿ ಮೋಹನ ಅವರಿಗೆ ಚಳ್ಳೆಹಣ್ಣು ತಿನ್ನಿಸಿ ಓಡಾಡುತ್ತಿದ್ದನು. ಆದ್ರೆ ಇಂದು ಬೆಳಗ್ಗೆ ಮಹಿಳೆಯ ಸಹೋದರ ಮಂಜುನಾಥನ ಕೈಗೆ ಅಚಾನಕ್ಕಾಗಿ ಮೋಹನ್ ಭೀಮಸಂದ್ರದ ಬಳಿ ಯಾವುದೋ ಮದುವೆ ಮನೆಗೆ ಬಂದವನು ಸಿಕ್ಕಿಬಿದ್ದಿದ್ದಾನೆ.

ಕೂಡಲೇ ಮಂಜುನಾಥ್ ಮೋಹನ್ ನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈತ ಕಾರು ಚಾಲಕನ ಕೆಲಸ ಮಾಡುತ್ತಿರೋದಾಗಿ ತಿಳಿದುಬಂದಿದೆ. ಜೊತೆಗೆ ನಾನು ಫೇಸ್ಬುಕ್ ನಲ್ಲಿ ಮಹಿಳೆಯ ಫೋಟೋ ಪೋಸ್ಟ್ ಮಾಡಿದ್ದು ನಿಜ ಎಂಬುದಾಗಿ ಆರೋಪಿ ಮೋಹನ್ ಮಾಧ್ಯಮಗಳ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.

https://www.youtube.com/watch?v=sPePsZEFJ48

 

Comments

Leave a Reply

Your email address will not be published. Required fields are marked *