ಫಸ್ಟ್ ನೈಟ್‍ನಲ್ಲೇ ಅತ್ತಿಗೆ ಮೇಲೆ ಮೈದುನ, ಸ್ನೇಹಿತ ಸೇರಿ ಗ್ಯಾಂಗ್‍ರೇಪ್- ವಿಚಾರ ತಿಳಿದು ಪತಿಯಿಂದ ತಲಾಖ್!

ಲಕ್ನೋ: ಮೊದಲ ರಾತ್ರಿಯಂದೇ ಪತಿಯ ತಮ್ಮ ಮತ್ತು ಆತನ ಸ್ನೇಹಿತ ಸೇರಿ ಅತ್ತಿಗೆಯ ಮೇಲೆ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ಉತ್ತರಪ್ರದೇಶದ ಬುಲಂದ್‍ಶಹರ್‍ನ ಕೊಟ್ಟಾಲಿ ಗ್ರಾಮದಲ್ಲಿ ನಡೆದಿದೆ.

ಮದುವೆಯ ಮೊದಲ ರಾತ್ರಿಯಂದು ಪತಿಯ ಸಹೋದರ ಹಾಗೂ ಆತನ ಗೆಳೆಯ ಸೇರಿ ಅತ್ತಿಗೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಅಷ್ಟೇ ಅಲ್ಲದೇ ಈ ವಿಚಾರವನ್ನು ಯಾರಿಗೂ ಹೇಳಬಾದರು ಎಂದು ಚಾಕು ತೋರಿಸಿ ಜೀವ ಬೆದರಿಕೆ ಹಾಕಿದ್ದಾರೆ.

ಸಂತ್ರಸ್ತೆ ಈ ಎಲ್ಲಾ ವಿಚಾರವನ್ನು ಪತಿಗೆ ತಿಳಿಸಿದ್ದಾರೆ. ಆದರೆ ಪತಿ ಪತ್ನಿಯ ಸಹಾಯಕ್ಕೆ ನಿಲ್ಲದೆ, ಆಕೆಯ ದೂರನ್ನ ನಿರ್ಲಕ್ಷ್ಮದಿಂದ ನೋಡಿದ್ದಾನೆ. ಅಲ್ಲದೆ ಇದಕ್ಕೆ ಪ್ರತಿಯಾಗಿ ತ್ರಿವಳಿ ತಲಾಖ್ ನೀಡಿದ್ದಾನೆ.

ಡಿಸೆಂಬರ್ 1 ರಂದು ನನ್ನ ಮಗಳನ್ನು ಮದುವೆ ಮಾಡಿಕೊಟ್ಟಿದ್ದವು. ಅಂದು ಸಂಜೆ ಪತಿ ಮನೆಗೆ ಕರೆದುಕೊಂಡು ಹೋಗಿದ್ದರು. ಆಗ ಮೈದುನ ಹಾಗೂ ಸ್ನೇಹಿತ ಸೇರಿ ಈಕೆಯೊಂದಿಗೆ ತಪ್ಪು ಕೆಲಸ ಮಾಡಿದ್ದಾರೆ. ಪತಿ ತ್ರಿವಳಿ ತಲಾಖ್ ನೀಡಿದ್ದು, ಮರುದಿನ ಗ್ರಾಮಕ್ಕೆ ತಂದು ಬಿಟ್ಟುಹೋಗಿದ್ದಾರೆ. ಆರೋಪಿಗಳಿಗೆ ಶಿಕ್ಷೆ ಆಗಬೇಕು ಎಂದು ಸಂತ್ರಸ್ತೆಯ ತಂದೆ ಹೇಳಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖೆ ಕೈಗೊಂಡಿರುವುದಾಗಿ ಎಸ್‍ಪಿ ಪ್ರವೀಣ್ ರಂಜನ್ ಸಿಂಗ್ ಹೇಳಿದ್ದಾರೆ.

 

Comments

Leave a Reply

Your email address will not be published. Required fields are marked *