ಗಂಡು ಮಕ್ಕಳಾಗಲಿಲ್ಲವೆಂದು ಕಿರುಕುಳ- ಮೂವರು ಮಕ್ಕಳಿದ್ರೂ ಮತ್ತೊಂದು ಮದ್ವೆಯಾದ ಭೂಪ

ಬೆಳಗಾವಿ: ಮಕ್ಕಳಾಗಲಿ ಎಂದು ಅದೆಷ್ಟೊ ದಂಪತಿ ದೇವರಿಗೆ ಹರಕೆ ಹೊತ್ತು ಆಸ್ಪತ್ರೆಗೆ ಸಾವಿರಾರು ರೂಪಾಯಿ ಸುರಿತಾರೆ. ಆದರೆ ಕೆಲವರು ಗಂಡು ಮಗುವೇ ಬೇಕು. ಮುಂದೆ ಮಗನೇ ನಮಗೆ ಆಸರೆ ಆಗ್ತಾನೆ ಎಂದು ಅಂದುಕೊಳ್ಳೋ ದಂಪತಿಗಳೆಷ್ಟೋ. ಆದರೆ ಇಲ್ಲೊಬ್ಬ ಪಾಪಿ ಅಪ್ಪನಿಂದ ಮಕ್ಕಳೇ ಬೇಸತ್ತಿದ್ದಾರೆ.

ಹೌದು, ಬೆಳಗಾವಿ ತಾಲೂಕಿನ ಕಾಕತಿ ಗ್ರಾಮದ ನಿವಾಸಿ ಬಾಳಗೌಡ ಪಾಟೀಲ್ ಬೆಳೆದು ನಿಂತಿರೋ ತನ್ನ ಇಬ್ಬರು ಹೆಣ್ಣು ಮಕ್ಕಳಿಗೆ ಕೊಡಬಾರದ ಕಷ್ಟ ಕೊಟ್ಟು ಮನೆಯಿಂದ ಹೊರ ಹಾಕಿದ್ದಾನೆ. ಅಷ್ಟಕ್ಕೂ ಈ ಬಾಳಗೌಡ ಹೀಗೆ ಮಾಡೋದಕ್ಕೆ ಗಂಡುಮಕ್ಕಳು ಆಗಿಲ್ಲ ಅನ್ನೋದೆ ಕಾರಣವಂತೆ.


ಕಳೆದ 25 ವರ್ಷಗಳ ಹಿಂದೆ ಬಾಳಗೌಡ ಪಾಟೀಲ್ ಅಕ್ಕಮಹಾದೇವಿ ಎಂಬವರನ್ನು ಮದುವೆಯಾಗಿದ್ದನು. ದಂಪತಿಗೆ 3 ಜನ ಹೆಣ್ಣು ಮಕ್ಕಳು, ಓರ್ವ ಪುತ್ರ ಜನಿಸಿದ್ದನು. ಆದರೆ ಮಗ ಚಿಕ್ಕ ವಯಸಲ್ಲೇ ಮೃತಪಟ್ಟಿದ್ದರಿಂದ ಪತ್ನಿಗೆ ಗಂಡು ಮಗು ಬೇಕು ಅಂತ ಕೊಡಬಾರದ ಕಾಟ ಕೊಟ್ಟಿದ್ದಾನೆ. ಅಕ್ಕಮಹಾದೇವಿ ಅವರು ವೃತ್ತಿಯಲ್ಲಿ ನರ್ಸ್ ಆಗಿದ್ದು ಇಬ್ಬರು ಮಕ್ಕಳ ವಿದ್ಯಾಭ್ಯಾಸ ಹಾಗೂ ಓರ್ವ ಮಗಳ ಮದುವೆ ಮಾಡಿದ್ರು. ಆದ್ರೆ ಹಾಸ್ಟೆಲ್‍ನಲ್ಲಿದ್ದ ಇಬ್ಬರು ಮಕ್ಕಳಿಗೆ ಫೀಸ್ ಕಟ್ಟಿಲ್ಲ. ಮನೆಗೆ ಬಂದ್ರೆ ಅಪ್ಪ ಬೀಗ ಹಾಕಿಕೊಂಡು ಹೋಗಿದ್ದಾನೆ ಎಂದು ನೊಂದ ಇಬ್ಬರು ಮಕ್ಕಳು ಅಪ್ಪನ ವಿರುದ್ಧ ಕಾಕತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ತಂದೆ ಬಾಳಗೌಡ ಪಾಟೀಲ್ ಹೆತ್ತ ಮಕ್ಕಳ ಪಾಲಿಗೆ ವಿಲನ್ ಆಗಿದ್ದು, ಇದೀಗ ಇಬ್ಬರು ಹೆಣ್ಣು ಮಕ್ಕಳು ಬೀದಿ ಪಾಲಾಗಿದ್ದಾರೆ. ಈ ಇಬ್ಬರ ನೆರವಿಗೆ ಕಾಕತಿ ಗ್ರಾಮಸ್ಥರು ಆಗಮಿಸಿದ್ದು, ನ್ಯಾಯ ಕೊಡಿಸುವ ಭರವಸೆ ನೀಡಿದ್ದಾರೆ ಎಂದು ಸ್ಥಳೀಯರಾದ ಪೂರ್ಣಾನಂದ ತಿಳಿಸಿದ್ದಾರೆ.

ಇಬ್ಬರು ಹೆಣ್ಣು ಮಕ್ಕಳನ್ನು ಮನೆಯಿಂದ ಹೊರ ಹಾಕಿ ಬಾಳಗೌಡ ಪಾಟೀಲ್ ಈ ಇಳಿವಯಸ್ಸಿನಲ್ಲಿ ಮದುವೆಯಾಗಿ ಬೆಳಗಾವಿಯಲ್ಲಿ ವಾಸವಿದ್ದಾನೆ. ಒಟ್ಟಿನಲ್ಲಿ ಗಂಡು ಮಗು ಬೇಕು ಎಂದು ಹೆಣ್ಮಕ್ಕಳಿಗೆ ಟಾರ್ಚರ್ ಕೊಡೋದು ಮಾತ್ರವಲ್ಲದೆ ಮತ್ತೊಂದು ಮದುವೆಯಾದ ಭೂಪನಿಗೆ ತಕ್ಕಶಾಸ್ತಿಯಾಗಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *