ಸೆಕ್ಸ್ ಗೆ ಅಂತಾ ಕರೆದ್ರೆ, 10 ಲಕ್ಷ ರೂ. ಮೌಲ್ಯದ ಕಾರನ್ನೇ ಕದ್ದಳು!

ವಾಷಿಂಗ್ಟನ್: ಮನೆಯಲ್ಲಿ ಹೆಂಡತಿ ಇಲ್ಲ ಎಂದು ಮಹಿಳೆಯೊಬ್ಬಳನ್ನು ಸೆಕ್ಸ್ ಗೆ ಕರೆದ್ರೆ, ಚಾಲಾಕಿ ಹೆಣ್ಣು ಆತನ ಕಾರನ್ನು ಕದ್ದು ಎಸ್ಕೇಪ್ ಆಗಿರುವ ಘಟನೆ ಅಮೆರಿಕದ ಓಮಹಾ ನಗರದಲ್ಲಿ ನಡೆದಿದೆ.

ಒಮಹಾ ನಗರದ 40 ವರ್ಷದ ನಿವಾಸಿಯೊಬ್ಬ ಶುಕ್ರವಾರ ರಾತ್ರಿ ಮಹಿಳೆಯೋರ್ವಳನ್ನು ಪಾರ್ಟಿಯಲ್ಲಿ ಭೇಟಿಯಾಗಿದ್ದಾನೆ. ಈ ವೇಳೆ ಆತ ಮಹಿಳೆಯನ್ನು ಸೆಕ್ಸ್ ಗೆ ಆಹ್ವಾನಿಸಿದ್ದಾನೆ. ಮಹಿಳೆಯೂ ಸಹ ಆತನ ಆಹ್ವಾನಕ್ಕೆ ಸಮ್ಮತಿ ನೀಡಿದ್ದಾಳೆ.

ವ್ಯಕ್ತಿ ಹೊರಗೆ ಬಂದು ಬಾಡಿಗೆಗೆ ಒಂದು ಕಾರನ್ನು ಪಡೆದು ಆಕೆಯನ್ನು ಹೋಟೆಲ್‍ವೊಂದರ ಬಳಿ ಪಿಕ್ ಮಾಡಿದ್ದಾನೆ. ಆಕೆಯನ್ನು ಕಾರಿನಲ್ಲಿ ಕರೆದುಕೊಂಡು ರೆಜೆನ್ಸಿ ಏರಿಯಾದ ತನ್ನ ಮನೆಗೆ ಕರೆದುಕೊಂಡು ಹೋಗಿದ್ದಾನೆ.

ಮನೆಯಲ್ಲಿ ಯಾರು ಇಲ್ಲದಿದ್ದರಿಂದ ಇಬ್ಬರು ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾರೆ. ಸೆಕ್ಸ್ ನಂತರ ಸ್ನಾನಕ್ಕಾಗಿ ತೆರಳಿದಾಗ, ಚಾಲಾಕಿ ಹೆಣ್ಣು ಆತ ಬಾಡಿಗೆಗೆ ಪಡೆದಿದ್ದ ಕಾರಿನೊಂದಿಗೆ ಪರಾರಿಯಾಗಿದ್ದಾಳೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಈತ ಹೊರಗೆ ಬಂದು ನೋಡಿದಾಗ ಮಹಿಳೆ ನಾಪತ್ತೆಯಾಗಿದ್ದು ತಿಳಿದಿದೆ. ಕೊನೆಗೆ ಆಕೆಯನ್ನು ಪಿಕ್ ಮಾಡಿದ್ದ ಹೋಟೆಲ್ ಬಳಿ ವಿಚಾರಿಸಿದಗಲೂ ಆಕೆಯ ಸುಳಿವು ಸಿಕ್ಕಿಲ್ಲ. ಮಹಿಳೆ ಸುಮಾರು 40 ವರ್ಷದವಳು ಎಂದು ಹೇಳಲಾಗಿದೆ.

ಕಳ್ಳತನವಾದ ಕಾರು 17 ಸಾವಿರ ಡಾಲರ್ ಅಂದ್ರೆ ಬರೋಬ್ಬರಿ 10 ಲಕ್ಷ 90 ಸಾವಿರ ರೂ. ಮೌಲ್ಯದಾಗಿದೆ.

 

Comments

Leave a Reply

Your email address will not be published. Required fields are marked *