ಹಾಸಿಗೆಯಲ್ಲಿ ಗೆಳೆಯ ಇದ್ದಿದ್ದನ್ನು ಗಂಡ ನೋಡಿದ್ದಕ್ಕೆ ಅತ್ಯಾಚಾರ ಆರೋಪ ಹೊರಿಸಿದ್ಲು!

ಮುಂಬೈ: 30 ವರ್ಷದ ಮಹಿಳೆಯೊಬ್ಬಳು ತನ್ನ ಗೆಳೆಯನೊಂದಿಗೆ ಹಾಸಿಗೆಯಲ್ಲಿದ್ದಾಗ ಆಕೆಯ ಗಂಡ ಆತನನ್ನು ನೋಡಿದ್ದು, ಗೆಳೆಯನ ಮೇಲೆಯೇ ಆ ಮಹಿಳೆ ಅತ್ಯಾಚಾರ ಆರೋಪ ಹೊರಿಸಿದ್ದಾಳೆ.

ಮಹಿಳೆಯು ಮುಂಬೈನ ದಫ್ತರಿ ರೋಡ್‍ನಲ್ಲಿ ತನ್ನ ಗಂಡ, ಇಬ್ಬರು ಗಂಡು ಮಕ್ಕಳು, ಅಣ್ಣ, ಅತ್ತಿಗೆ ತಾಯಿ ಹಾಗೂ ಮಾವನೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದಾಳೆ. ಒಮ್ಮೆ ಮಹಿಳೆಯ ಪತಿ ರಾತ್ರಿ ವೇಳೆ ಹೊರಗಡೆ ಹೋಗಿದ್ದರು. ಮನೆಯಲ್ಲಿ ಏನೋ ಮರೆತು ಹೋಗಿದ್ದು ಅದನ್ನ ತೆಗೆದುಕೊಂಡು ಹೋಗಲು ವಾಪಸ್ ಬಂದಿದ್ದರು. ಈ ವೇಳೆ ಬೆಡ್‍ರೂಮಿನಲ್ಲಿ ಅಪರಿಚಿತ ವ್ಯಕ್ತಿಯೊಬ್ಬನನ್ನ ನೋಡಿದ್ದಾರೆ. ಆಗ ಮಹಿಳೆ ಸಹಾಯಕ್ಕಾಗಿ ಕಿರುಚಿಕೊಂಡಿದ್ದು, ಪತಿ ಆತನನ್ನು ಹಿಡಿದು ಬಾರಿಸಿದ್ದಾರೆ. ಆ ವ್ಯಕ್ತಿ ಕೂಡಲೇ ತನ್ನ ಬಟ್ಟೆಗಳನ್ನ ತೆಗೆದುಕೊಂಡು ಅಲ್ಲಿಂದ ಕಾಲ್ಕಿತ್ತಿದ್ದಾನೆ.

ಈ ಬಗ್ಗೆ ಮಹಿಳೆ ಪೊಲೀಸರಿಗೆ ಹೇಳಿಕೆ ನೀಡಿದ್ದು, ಅಣ್ಣ ಮತ್ತು ಅತ್ತಿಗೆ ಉತ್ತರಪ್ರದೇಶಕ್ಕೆ ಹೋಗಿದ್ದರು. ತಾಯಿ ಹಾಗೂ ಮಾವ ಮತ್ತೊಂದು ಮಹಡಿಯಲ್ಲಿ ನಿದ್ರೆ ಮಾಡುತ್ತಿದ್ದರು. ನನ್ನ ಪತಿ ಬರುತ್ತಾರೆಂದು ಬಾಗಿಲನ್ನ ಮುಚ್ಚದೇ ಹಾಗೇ ಬಿಟ್ಟಿದ್ದೆ. ಈ ವೇಳೆ ಅಪರಿಚಿತ ವ್ಯಕ್ತಿ ಮನೆಗೆ ನುಗ್ಗಿದ್ದಾನೆ ಎಂದಿದ್ದಾಳೆ.

ಮಹಿಳೆಯ ಹೇಳಿಕೆಯ ಆಧಾರದ ಮೇಲೆ ಐಪಿಸಿ ಸೆಕ್ಷನ್ 376 ರಡಿ ಅತ್ಯಾಚಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಆದ್ರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅಕ್ಕಪಕ್ಕದ ಮನೆಯವರ ಹೇಳಿಕೆ ಪಡೆದಿದ್ದು, ಆ ವ್ಯಕ್ತಿ ಆಗಾಗ ಮನೆಗೆ ಬರುತ್ತಿದ್ದ. ಆತ ಮಹಿಳೆಗೆ ಸ್ನೇಹಿತನಾಗಿದ್ದ ಎಂದಿದ್ದಾರೆ. ಆರೋಪಿ ಸದ್ಯ ಪರಾರಿಯಾಗಿದ್ದಾನೆ.

Comments

Leave a Reply

Your email address will not be published. Required fields are marked *