ಪೊಲೀಸ್ ಠಾಣೆಯ ಕುರ್ಚಿಯಲ್ಲೇ ರಾಜಾರೋಷವಾಗಿ ಕುಳಿತು ಮದ್ಯಪಾನ- ವ್ಯಕ್ತಿ ಅರೆಸ್ಟ್

ಲಕ್ನೋ: ಪೊಲೀಸ್ ಠಾಣೆ (Police Station) ಯ ಒಳಗಡೆ ಕುರ್ಚಿಯಲ್ಲಿ ಕುಳಿತು ಮದ್ಯಪಾನ (Alcohol) ಮಾಡಿದ ವ್ಯಕ್ತಿಯನ್ನು ಪೊಲೀಸು ಬಂಧಿಸಿದ ಘಟನೆ ಉತ್ತರಪ್ರದೇಶದ ಸಹರಾನ್ಪುರ್ ನಲ್ಲಿ ನಡೆದಿದೆ.

ಘಟನೆ ಸಂಬಂಧ ಖತಾ ಖೇರಿ ಪೊಲೀಸ್ ಠಾಣೆ (Khata Kheri police station) ಯ ಸಿಬ್ಬಂದಿಯನ್ನು ಕೆಲಸದಿಂದ ವಜಾ ಮಾಡಲಾಗಿದೆ. ವ್ಯಕ್ತಿಯನ್ನು ಇಮ್ರಾನ್ ಎಂದು ಗುರುತಿಸಲಾಗಿದ್ದು, ಸದ್ಯ ಈತನ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಮನೆಯಲ್ಲೇ ಇದ್ದ ಮಗುವಿಗಾಗಿ ಪೊಲೀಸರ ಜೊತೆ ಊರೆಲ್ಲಾ ಹುಡುಕಿದ್ರು ಪೋಷಕರು!

ವೀಡಿಯೋದಲ್ಲೇನಿದೆ..?: ಪೊಲೀಸ್ ಠಾಣೆಯ ಒಳಗೆ ಕುರ್ಚಿಯಲ್ಲಿ ಕುಳಿತ ಇಮ್ರಾನ್ ಬಾಟ್ಲಿಯಿಂದ ಎಣ್ಣೆಯನ್ನು ಗ್ಲಾಸ್‍ಗೆ ಹಾಕಿಕೊಂಡಿದ್ದಾನೆ. ಅಲ್ಲದೆ ಕುಡಿಯುವಾಗ ತಿನ್ನಲು ಕೆಲವೊಂದು ಸ್ನ್ಯಾಕ್ಸ್‍ಗಳು ಹಾಗೂ ನೀರಿನ ಬಾಟ್ಲಿ ಟೇಬಲ್ ಮೇಲೆ ಇರುವುದನ್ನು ಕಾಣಬಹುದಾಗಿದೆ.

ಮಾರ್ಚ್‍ನಲ್ಲಿ ನಡೆದ ಹೋಳಿ ಹಬ್ಬದ ಸಂದರ್ಭದಲ್ಲಿ ಈ ಫೋಟೋ ತೆಗೆಯಲಾಗಿದೆ ಎಂದು ಹೇಳಲಾಗುತ್ತಿದ್ದು, ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಳಿಕ ಸಂಬಂಧಪಟ್ಟ ಪೊಲೀಸ್ ಸಿಬ್ಬಂದಿಯನ್ನು ಕೂಡಲೇ ಕೆಲಸದಿಂದ ವಜಾ ಮಾಡಲಾಗಿದೆ ಎಂದು ಠಾನಾ ಉಸ್ತುವಾರಿ ಸಚಿನ್ ತ್ಯಾಗಿ ತಿಳಿಸಿದ್ದಾರೆ.

ಸದ್ಯ ಇಮ್ರಾನ್ ಬಂಧಿಸಿರುವ ಪೊಲೀಸರು ಆತನನ್ನು ಜೈಲಿಗಟ್ಟಿದ್ದಾರೆ.