ಪ್ರಿಯತಮೆ ತಾಯಿಗಾಗಿ ಕಿಡ್ನಿ ಕೊಟ್ಟ- ಒಂದೇ ಕಿಡ್ನಿಯವ ಬೇಡವೆಂದು ಬೇರೆಯವ್ರ ಕೈ ಹಿಡಿದ್ಳು!

ಪ್ರಿಯತಮೆಯ ತಾಯಿಗಾಗಿ ಪ್ರಿಯಕರನೊಬ್ಬ ತನ್ನ ಕಿಡ್ನಿಯನ್ನೇ ದಾನ ಮಾಡಿದ್ದಾನೆ. ಒಂದೇ ಕಿಡ್ನಿ ಇರುವ ಹುಡುಗ ಬೇಡ ಎಂದು ಯುವತಿ ಬೇರೆಯೊಬ್ಬನನ್ನು ಮದುವೆಯಾಗಿರುವ ಘಟನೆ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ.

ಕ್ಯಾಲಿಫೋರ್ನಿಯಾ ಮೂಲದ ಉಜೈಲ್ ಮಾರ್ಟಿನ್ ತನ್ನ ಪ್ರಿಯತಮೆಯ ತಾಯಿಗಾಗಿ ಕಿಡ್ನಿಯನ್ನು ದಾನ ಮಾಡಿದ್ದಾನೆ. ಪ್ರಿಯತಮೆಯ ತಾಯಿಯನ್ನು ಅನಾರೋಗ್ಯದ ಕಾರಣಕ್ಕಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ವೈದ್ಯರು ಹೊಸ ಕಿಡ್ನಿಯನ್ನು ಜೋಡಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. ಇದನ್ನು ಕೇಳಿದ ಮಾರ್ಟಿನ್ 2 ಕಿಡ್ನಿಯಲ್ಲಿ 1 ಕಿಡ್ನಿಯನ್ನು ತಾನು ಕೊಡುವುದಾಗಿ ಹೇಳಿ ದಾನ ಮಾಡಿದ್ದಾನೆ.

ಕಿಡ್ನಿ ಜೋಡಣೆಯಗಿ ಬರೋಬ್ಬರಿ ಒಂದು ತಿಂಗಳ ನಂತರ ತನ್ನ ಪ್ರಿಯತಮೆ ಬೇರೆಯೊಬ್ಬನ ಕೈ ಹಿಡಿದು ಶಾಕ್ ನೀಡಿದ್ದಾಳೆ. ಒಂದು ಕಿಡ್ನಿ ಇರುವವನನ್ನು ಕಟ್ಟಿಕೊಂಡು ನಾನೇನು ಮಾಡಲಿ? ಆತನೊಂದಿಗೆ ಬದುಕೋಕೆ ಸಾಧ್ಯಾನಾ? ಎಂದು ಆಕೆ ಈ ನಿರ್ಧಾರ ಕೈ ಗೊಂಡಿದ್ದಾಳೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:   ಉದ್ದೇಶಪೂರ್ವಕವಾಗಿಯೇ ಕೋವಿಡ್ ಸೋಂಕು ತಗುಲಿಸಿಕೊಂಡು ಗಾಯಕಿ ನಿಧನ

ಪ್ರೀತಿಗಾಗಿ ಆಕೆಯ ತಾಯಿಗೆ ಕಿಡ್ನಿ ದಾನ ಮಾಡಿ ಪ್ರೀತಿ ಮಧುರ, ತ್ಯಾಗ ಅಮರ ಎಂದಿದ್ದ ಪ್ರೇಮಿಯನ್ನು ಆಕೆ ಬಿಟ್ಟು ಬೇರೆಯೋಬ್ಬನ ಜೊತೆ ವಿವಾಹವಾಗಿದ್ದಾಳೆ. ಈ ಸುದ್ದಿ ತಿಳಿಯುತ್ತಿದ್ದಂತೆ ಮಾರ್ಟಿನ್‍ಗೆ ಶಾಕ್ ಆಗಿದೆ. ಕೆಲ ದಿನಗಳ ನಂತರ ಈ ಸುದ್ದಿ ಟಿಕ್‍ಟಾಕ್ ವೀಡಿಯೋದಲ್ಲಿ ಬಹಿರಂಗವಾಗಿದೆ. ಇದನ್ನೂ ಓದಿ:  ಪತಿ ಕೊಂದು ಕತ್ತರಿಸಿದ ತಲೆ ಠಾಣೆಗೆ ತಂದು ಶರಣಾದಳು

 

ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಪ್ರೇಮಿಯ ಬೆಂಬಲಕ್ಕೆ ನಿಂತಿದ್ದಾರೆ. ಈ ವಿಚಾರವಾಗಿ ಮಾತನಾಡಿದ ಪ್ರೇಮಿ ಮಾರ್ಟಿನ್, ನಾನು ಒಂದು ಕಿಡ್ನಿಯನ್ನು ಮಾತ್ರ ಕಳೆದುಕೊಂಡಿದ್ದೇನೆ. ಆದರೆ ಇನ್ನೊಂದು ಕಿಡ್ನಿಯಲ್ಲಿ ಜೀವಿಸುತ್ತಿದ್ದೇನೆ. ನಾನು ಖುಷಿಯಾಗಿದ್ದೇನೆ. ಬಿಟ್ಟು ಹೋದವರ ಬಗ್ಗೆ ನಾನು ಚಿಂತಿಸುವುದಿಲ್ಲ ಎಂದು ಹೇಳುವ ಮೂಲಕ ಪ್ರಿಯತಮೆಗೆ ತಿರುಗೇಟು ನೀಡಿದ್ದಾನೆ. ಇದನ್ನೂ ಓದಿ:  ಮುಳುಗುತ್ತಿದ್ದ ಕಾರಿನ ಮೇಲೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡ ಮಹಿಳೆ

 

Comments

Leave a Reply

Your email address will not be published. Required fields are marked *