ಕಸ ಸಾಗಿಸೋ ವಾಹನದ ಮೇಲೆ ಹುಚ್ಚಾಟ – ಸಾಹಸ ಮಾಡಿ ಆಸ್ಪತ್ರೆ ಸೇರಿದ ಯುವಕ

ಲಕ್ನೋ: ಇತ್ತೀಚಿನ ದಿನಗಳಲ್ಲಿ ಯುವಕರು ದಿಢೀರ್ ಫೇಮಸ್ ಆಗಬೇಕು ಅಂತಾ ಹುಚ್ಚು ಸಾಹಸಗಳಿಗೆ ಮುಂದಾಗುತ್ತಾರೆ. ಕೊನೆಗೆ ಅನಾಹುತ ಮಾಡಿಕೊಂಡು ಆಸ್ಪತ್ರೆ ಸೇರುತ್ತಾರೆ, ಇಲ್ಲವೇ ಎಲ್ಲರ ಮುಂದೆ ನಗೆಪಾಟಲಾಗುತ್ತಾರೆ. ಅಂತಹದ್ದೇ ಘಟನೆ ಉತ್ತರಪ್ರದೇಶದ ಲಕ್ನೋದಲ್ಲಿ ನಡೆದಿದೆ.

ಅತೀ ವೇಗವಾಗಿ ಚಲಿಸುತ್ತಿದ್ದ ಕಸ ಸಾಗಿಸುವ ಟ್ರಕ್ ಮೇಲೆ ಯುವಕನೊಬ್ಬ ಶಕ್ತಿಮಾನ್‌ನಂತೆ ಸಾಹಸ ಮಾಡಲು ಮುಂದಾಗಿದ್ದಾನೆ. ಟ್ರಕ್ ಮೇಲೆಯೇ ನಿಂತು ಹಲವು ಬಾರಿ ಡಿಪ್ಸ್ ಮಾಡುತ್ತಾ ಕೆಲವೇ ಸೆಕೆಂಡುಗಳಲ್ಲಿ ಕುಸಿದು ಬಿದ್ದು, ಕೆಲ ದಿನಗಳ ಮಟ್ಟಿಗೆ ಎದ್ದು ಓಡಾಡಲೂ ಆಗದ ಪರಿಸ್ಥಿತಿ ತಲುಪಿದ್ದಾನೆ. ಸದ್ಯ ಈ ವೀಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. `ದಯವಿಟ್ಟು ಅಂತಹ ಮಾರಣಾಂತಿಕ ಸಾಹಸಗಳನ್ನು ಮಾಡಬೇಡಿ’ ಎಂದು ಸಲಹೆಯನ್ನೂ ನೀಡಿದ್ದಾರೆ.

ಲಕ್ನೋದ ಗೋಮ್ತಿನಗರದಲ್ಲಿ ಈ ಘಟನೆ ನಡೆದಿದೆ. ಶಕ್ತಿಮಾನ್ ಆಗಲು ಹೊರಟಿದ್ದ ಯುವಕ ಇದೀಗ ಆಸ್ಪತ್ರೆಯಲ್ಲಿದ್ದಾನೆ. ಇದನ್ನೂ ಓದಿ: ‘ಎಕ್ಸ್’ ಜೊತೆ ‘ಸೆಕ್ಸ್’ ಮಾಡುವಿರಾ?: ಆ ಹುಡುಗಿಯರ ಮುಂದೆ ಕರಣ್ ಜೋಹಾರ್ ಪ್ರಶ್ನೆ

ಲಕ್ನೋದ ಹೆಚ್ಚುವರಿ ಡಿಸಿಪಿ ಶ್ವೇತಾ ಶ್ರೀವಾಸ್ತವ ಅವರು, 44 ಸೆಕೆಂಡುಗಳ ವೀಡಿಯೋವನ್ನು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ. ಅಲ್ಲದೆ ಈ ವೀಡಿಯೋ ನೋಡಿದರೆ ವೇಗವಾಗಿ ಚಲಿಸುವ ಟ್ರಕ್ ಮೇಲೆ ನಿಂತು ಯುವಕ ಹೇಗೆ ಡಿಪ್ಸ್ ಮಾಡುತ್ತಿದ್ದಾನೆ ಎಂಬುದು ತಿಳಿಯುತ್ತದೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಆಸ್ಕರ್ ರೇಸ್ ನಲ್ಲಿ ‘ಆರ್.ಆರ್.ಆರ್’ ಹೆಸರು, ‘ಕೆಜಿಎಫ್ 2’ ಯಾಕಿಲ್ಲ ಎಂದ ಅಭಿಮಾನಿಗಳು

ಶಕ್ತಿಮಾನ್ ಸಾಹಸ ತೋರಿದ ಯುವಕ ಕೆಲವೇ ಸೆಕೆಂಡುಗಳಲ್ಲಿ ಟ್ರಕ್‌ನಿಂದ ಬಿದ್ದು ಗಾಯಗೊಂಡಿದ್ದಾನೆ. ದೇಹದ ವಿವಿಧ ಭಾಗಗಳಲ್ಲಿ ದೊಡ್ಡ ಪೆಟ್ಟಾಗಿದೆ. ಬೆನ್ನು, ಸೊಂಟದ ಭಾಗಗಳಿಗೂ ತೀವ್ರ ಪೆಟ್ಟಾಗಿದೆ. ಸದ್ಯ ಹಲವು ದಿನಗಳವರೆಗೆ ಮಲಗಿದ್ದಲ್ಲೇ ಇರಬೇಕಾಗುತ್ತದೆ ಎಂದು ವರದಿಯಾಗಿದೆ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *