ಟ್ರೈನ್ ಟಿಕೆಟ್ ರದ್ದು ಮಾಡಿದ್ದಕ್ಕೆ ದಂಡ ವಿಧಿಸಿದವನನ್ನೇ ಕೊಂದ ಸಹೋದರರು!

– ಸ್ವಿಫ್ಟ್ ಡಿಸೈರ್ ಕಾರು ಹತ್ತಿಸಿ ಬರ್ಬರ ಹತ್ಯೆ

ನೋಯ್ಡಾ: ಟ್ರೈನ್ ಟಿಕೆಟ್ ರದ್ದು ಮಾಡಿದ್ದಕ್ಕೆ ದಂಡ ವಿಧಿಸಿದ ಅಂಗಡಿಯವನನ್ನೇ ಸಹೋದರರು ಕೊಂದಿರುವ ಘಟನೆ ಸೋಮವಾರ ಗ್ರೇಟರ್ ನೋಯ್ಡಾದ ಇಕೋಟೆಕ್ 1 ನಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಒಬ್ಬನನ್ನು ಪೊಲೀಸರು ಬಂಧಿಸಿದ್ದು, ಇನ್ನೊಬ್ಬ ಪರಾರಿಯಾಗಿದ್ದಾನೆ.

ಏನಿದು ಘಟನೆ?
ಘರ್ಬರಾ ಗ್ರಾಮದ ನಿವಾಸಿ ನಕುಲ್ ಸಿಂಗ್ ಮತ್ತು ಕಿರಿಯ ಸಹೋದರ ಅರುಣ್ ಸಿಂಗ್ ಜಮ್ಮುವಿಗೆ ರೈಲು ಟಿಕೆಟ್‍ಗಳನ್ನು ಬುಕ್ ಮಾಡಿದ್ದರು. ಆದರೆ ಭಾನುವಾರ ಟಿಕೆಟ್ ಕ್ಯಾನ್ಸಲ್ ಮಾಡಿದರು. ಈ ಹಿನ್ನೆಲೆ ರೈಲು ಟಿಕೆಟ್ ಕಾಯ್ದಿರಿಸುವಿಕೆ ಅಂಗಡಿಯನ್ನು ನಡೆಸುತ್ತಿದ್ದ ನಿತಿನ್ ಶರ್ಮಾ ಟಿಕೆಟ್ ರದ್ದು ಮಾಡಿದ್ದಕ್ಕೆ ಸಹೋದರಿಗೆ 300 ರೂ. ದಂಡ ವಿಧಿಸಿದ್ದಾರೆ. ಈ ಹಿನ್ನೆಲೆ ಕೋಪಗೊಂಡ ಸಹೋದರರು ನಾವು ಏಕೆ ಹಣಕೊಡಬೇಕು ಎಂದು ಅಂಗಡಿಗೆ ಬಂದು ನಿತಿನ್ ಜೊತೆ ಜಗಳವಾಡಿದರು. ಇದನ್ನೂ ಓದಿ: ಪೊಲೀಸರ ಟಾರ್ಚರ್‌ನಿಂದ ಮಗನ ಸಾವು – ಮರು ಮರಣೋತ್ತರ ಪರೀಕ್ಷೆಗೆ ಆದೇಶ

ನಿತಿನ್ ಅವರು ನೀವು ದಂಡ ಕಟ್ಟಲೇ ಬೇಕು ಎಂದು ವಾದಿಸಿದ್ದು, ಸಿಟ್ಟಿಗೆದ್ದ ಸಹೋದರರು ತಮ್ಮ ಮಾರುತಿ ಸ್ವಿಫ್ಟ್ ಡಿಜೈರ್ ಕಾರನ್ನು ಆತನ ಮೇಲೆ 2-3 ಬಾರಿ ಹತ್ತಿಸಿದ್ದಾರೆ. ಈ ಪರಿಣಾಮ ನಿತಿನ್ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿತಿನ್ ಸಾವನ್ನಪ್ಪಿದರು. ಇದರಿಂದ ಆಕ್ರೋಶಗೊಂಡ ನಿತಿನ್ ತಂದೆ ಸತ್ವೀರ್ ಶರ್ಮಾ ಅವರು ಇಬ್ಬರು ಆರೋಪಿಗಳ ವಿರುದ್ಧ ಸೋಮವಾರ ಇಕೋಟೆಕ್ 1 ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.

ಗ್ರೇಟರ್ ನೋಯ್ಡಾದ ಹೆಚ್ಚುವರಿ ಪೊಲೀಸ್ ಉಪ ಆಯುಕ್ತ(ಎಡಿಸಿಪಿ) ವಿಶಾಲ್ ಪಾಂಡೆ, ನಿತಿನ್ ತಂದೆಯ ದೂರಿನ ಆಧಾರದ ಮೇಲೆ ಇಬ್ಬರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 302(ಕೊಲೆ) ಮತ್ತು ಸೆಕ್ಷನ್ 34(ಸಾಮಾನ್ಯ ಉದ್ದೇಶಕ್ಕಾಗಿ ಹಲವಾರು ವ್ಯಕ್ತಿಗಳು ಸೇರಿ ಮಾಡಿದ ಕೃತ್ಯ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ವೆಡ್ಡಿಂಗ್ ಕೇಕ್ ಬೀಳಿಸಿ ದಂಪತಿಗೆ ಶಾಕ್ ಕೊಟ್ಟ ಸಪ್ಲೈಯರ್

ಮಂಗಳವಾರ, ಘರ್ಬರಾ ಗ್ರಾಮದ ಪುಷ್ಟ ರಸ್ತೆಯಲ್ಲಿ ನಕುಲ್ ಕಾರನ್ನು ಓಡಿಸುತ್ತಿದ್ದಾನೆ ಎಂಬ ಸುಳಿವು ಸಿಕ್ಕ ತಕ್ಷಣ ನಮ್ಮ ತಂಡ ಸ್ಥಳದಲ್ಲಿ ಧಾವಿಸಿತು. ಪ್ರಸ್ತುತ ಅಪರಾಧಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಳ್ಳಲಾದ್ದು, ನಕುಲ್ ಅನ್ನು ಬಂಧಿಸಲಾಗಿದೆ. ಆದರೆ ಇನ್ನೊಬ್ಬ ಆರೋಪಿ ಪರಾರಿಯಾಗಿದ್ದಾನೆ ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *