ಸರ್ಕಾರಿ ಆಸ್ಪತ್ರೆ ಮುಂದೆ ವಿಷಸೇವಿಸಿ ವ್ಯಕ್ತಿ ನರಳಾಡ್ತಿದ್ರೂ ಜನ ಮಾನವೀಯತೆ ಮರೆತ್ರು!

ಬೆಂಗಳೂರು: ಸರ್ಕಾರಿ ಆಸ್ಪತ್ರೆಯ ಬಳಿಯೇ ವ್ಯಕ್ತಿಯೊಬ್ಬ ವಿಷ ಸೇವಿಸಿ ನಾಲ್ಕು ಗಂಟೆ ಕಳೆದರು ಸ್ಥಳದಲ್ಲಿದ್ದವರು ಆತನನ್ನು ಆಸ್ಪತ್ರೆಗೆ ಸೇರಿಸದೆ ಮಾನವೀಯತೆ ಮರೆತ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ನಡೆದಿದೆ.

ಬೈರಲಿಂಗಯ್ಯ(50) ವಿಷ ಸೇವಿಸಿದ ವ್ಯಕ್ತಿ. ಬೈರಲಿಂಗಯ್ಯ ಸುಭಾಷ್‍ನಗರ ನಿವಾಸಿಯಾಗಿದ್ದು, ಆಸ್ಪತ್ರೆ ಮುಂದೆಯೇ ವಿಷ ಸೇವಿಸಿದ್ದಾರೆ. ಅಲ್ಲಿದ್ದ ಜನರು ಪೊಲೀಸರು ಬರುವ ತನಕ ಬೈರಲಿಂಗಯ್ಯನನ್ನು ಆಸ್ಪತ್ರೆಗೆ ಸೇರಿಸುವುದು ಹೇಗೆ ಎಂದು ಕಾಯುತ್ತಿದ್ದರು.

ಈ ಪ್ರಸಂಗ ಮಾನವೀಯತೆ ಮಾಯವಾದಂತೆ ಕಾಣುತ್ತಿದೆ. ಬೈರಲಿಂಗಯ್ಯ ವಿಷ ಸೇವನೆ ಮಾಡಿದ್ದಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಆಸ್ಪತ್ರೆಗೆ ದಾಖಲಿಸುವ ವೇಳೆ ಸ್ಟ್ರಚರ್ ಸಹ ಸಿಗದೆ ನಡೆಸಿಕೊಂಡು ಹೋಗಲಾಗಿದೆ. ಆಸ್ಪತ್ರೆ ಸಿಬ್ಬಂದಿ ಕೂಡ ಈ ಪ್ರಕರಣದಲ್ಲಿ ಸಹಾಯ ಮಾಡದೆ ಅಮಾನವೀಯತೆ ಮೆರೆದಿದ್ದಾರೆ.

ಈ ಬಗ್ಗೆ ನೆಲಮಂಗಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ. ಸದ್ಯ ಬೈರಲಿಂಗಯ್ಯ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಬೆಂಗಳೂರು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Comments

Leave a Reply

Your email address will not be published. Required fields are marked *