ದುಷ್ಕರ್ಮಿಗಳು ಬೆನ್ನಿಗೆ ಚುಚ್ಚಿದ ಚಾಕುವಿನೊಂದಿಗೆ ಆಸ್ಪತ್ರೆಗೆ ಬಂದ ವ್ಯಕ್ತಿ- ಬೆಚ್ಚಿಬಿದ್ದ ಜನ

ರಾಮನಗರ: ಬೆನ್ನಿಗೆ ಚುಚ್ಚಿದ ಚಾಕುವಿನ ಜೊತೆ ವ್ಯಕ್ತಿಯೊಬ್ಬರು ಆಸ್ಪತ್ರೆಗೆ ಬಂದ ಭಯಾನಕ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ನಡೆದಿದೆ.

ಚನ್ನಪಟ್ಟಣದ ಬಿ ಎಲ್ ಸ್ಟ್ರೀಟ್ ನ ಅಬ್ದುಲ್ ವಾಹಿದ್‍ಗೆ ಚಾಕು ಇರಿತಕ್ಕೆ ಒಳಗಾದ ವ್ಯಕ್ತಿ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಚನ್ನಪಟ್ಟಣದ ಸಾತನೂರು ಸರ್ಕಲ್ ಬಳಿ ಬೈಕ್‍ನಲ್ಲಿ ಬಂದ 6 ಜನ ದುಷ್ಕರ್ಮಿಗಳಿಂದ ತಂಡ ಚಾಕು ಹಿರಿದು ಪರಾರಿಯಾಗಿದ್ದಾರೆ. ಬಳಿಕ ಚಾಕುವಿನೊಂದಿಗೆ ವಾಹಿದ್ ಆಸ್ಪತ್ರೆಗೆ ಬಂದಿದ್ದಾರೆ.

ಇವರನ್ನು ಕಂಡ ಸರ್ಕಾರಿ ಆಸ್ಪತ್ರೆಯಲ್ಲದ್ದ ಜನ ಹಾಗೂ ಸಿಬ್ಬಂದಿ ಬೆಚ್ಚಿ ಬಿದ್ದಿದ್ದಾರೆ. ಕೂಡಲೇ ಆಸ್ಪತ್ರೆಯ ವೈದ್ಯರು ಹರಸಾಹಸ ಪಟ್ಟು ಎರಡು ಅಡಿ ಉದ್ದದ ಚಾಕುವನ್ನು ಹೊರತೆಗೆದಿದ್ದಾರೆ. ಟಾಟಾ ಏಸ್‍ನ ಚಾಲಕನಾಗಿರುವ ಅಬ್ದುಲ್ ವಾಹಿದ್ ಈ ಹಿಂದೆ ಕೆಲವು ವ್ಯಕ್ತಿಗಳ ಜೊತೆ ಜಗಳವಾಡಿದ್ದ ಈ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಚಾಕು ಇರಿದಿದ್ದಾರೆ ಎಂದು ಹೇಳಲಾಗುತ್ತಿದೆ.

ಘಟನೆ ಸಂಬಂಧ ಚನ್ನಪಟ್ಟಣ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

https://www.youtube.com/watch?v=vbaX8_Nm89U

Comments

Leave a Reply

Your email address will not be published. Required fields are marked *