ಪತ್ನಿಯನ್ನು ಪೀಸ್ ಪೀಸ್ ಮಾಡಿ ನೀರಿನ ಟ್ಯಾಂಕಿನಲ್ಲಿ ತುಂಬಿಸಿಟ್ಟ!

ರಾಯ್‍ಪುರ: ವ್ಯಕ್ತಿಯೊಬ್ಬ ತನ್ನ ಪತ್ನಿಯ ದೇಹವನ್ನು ಪೀಸ್ ಪೀಸ್ ಮಾಡಿ ಬಳಿಕ ಯಾರಿಗೂ ತಿಳಿಯದಂತೆ ನೀರಿನ ಟ್ಯಾಂಕ್‌ನಲ್ಲಿ  ತುಂಬಿಸಿಟ್ಟ ಘಟನೆ ಛತ್ತೀಸ್ ಗಡದಲ್ಲಿ ನಡೆದಿದೆ.

ಪ್ರಕರಣ ಸಂಬಂಧಿಸಿದಂತೆ ಆರೋಪಿ ಪತಿ ಪವನ್ ಸಿಂಗ್ ಠಾಕೂರ್ ನನ್ನು ಬಿಲಾಸ್ಪುರ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಸತಿ ಸಾಹು ಮೃತ ಪತ್ನಿ.

ಪವನ್ ಹಾಗೂ ಸತಿ ಸಾಹು ಅವರದ್ದು ಲವ್ ಮ್ಯಾರೇಜ್ (Pavan Sati Sahu Love Marriage). ಇವರಿಬ್ಬರ ಪ್ರೀತಿಗೆ ಮನೆಯವರ ವಿರೋಧವಿದ್ದರೂ ಇಬ್ಬರೂ ಮದುವೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸತಿ ಸಾಹು ಮನೆಯವರು ಈಕೆಯೊಂದಿಗಿನ ಎಲ್ಲಾ ಸಂಬಂಧಗಳನ್ನು ಕಡಿದುಕೊಂಡಿದ್ದರು. ಇತ್ತ ನೆರೆಹೊರೆಯವರ ಜೊತೆನೂ ಸತಿ ಅಷ್ಟೊಂದು ಕ್ಲೋಸ್ ಇರಲಿಲ್ಲ. ಹೀಗಾಗಿ 2 ತಿಂಗಳ ಹಿಂದೆಯೇ ಸತಿ ಕೊಲೆಯಾದ್ರೂ ಯಾರೊಬ್ಬರ ಗಮನಕ್ಕೂ ಬಂದಿರಲಿಲ್ಲ. ಆದರೆ ನಕಲಿ ಕರೆನ್ಸಿ ದಂಧೆ (Fake Currency Racket) ಸಂಬಂಧ ತನಿಖೆ ನಡೆಸಲು ಪೊಲೀಸರು ಪವನ್ ಮನೆಗೆ ಬಂದ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.

ಪೊಲೀಸರು ಮನೆಯನ್ನು ಪರಿಶೀಲನೆ ನಡೆಸಿದಾಗ ಹಾಸಿಗೆ ಕೆಳಗೆ, ನೀರು ತುಂಬಿಸುವ ಪ್ಲಾಸ್ಟಿಕ್ ಚೀಲ (Polythin Bags) ಗಳಲ್ಲಿ ತುಂಬಿಸಿಟ್ಟಿರುವುದು ಬಯಲಾಗಿದೆ. ಈ ಸಂಬಂಧ ಪೊಲೀಸರು ಪವನ್ ನನ್ನು ವಿಚಾರಣೆ ನಡೆಸಿದಾಗ, ದಾಂಪತ್ಯ ದ್ರೋಹ ಮಾಡುವ ಶಂಕೆಯಿಂದ ನಮ್ಮಿಬ್ಬರ ಮಧ್ಯೆ ಜಗಳವಾಯಿತು. ಮಾತಿಗೆ ಮಾತು ಬೆಳೆದಿದ್ದರಿಂದ ಸಿಟ್ಟಲ್ಲಿ ಆಕೆಯನ್ನು ಕತ್ತು ಹಿಸುಕಿ ಕೊಲೆ ಮಾಡಿದೆ ಎಂದು ತಿಳಿಸಿದ್ದಾನೆ. ಇದನ್ನೂ ಓದಿ: ಅರ್ಧಂಬರ್ಧ ಸುಟ್ಟ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ

10 ವರ್ಷಗಳ ಹಿಂದೆ ದಂಪತಿ ಮದುವೆಯಾಗಿದ್ದು, ಬಿಲಾಸ್ಪುರದ ಉಸ್ಲಾ ಪ್ರದೇಶದಲ್ಲಿ ವಾಸವಾಗಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದು, ಅವರು ಚಿಕ್ಕಮ್ಮನ ಮನೆಯಲ್ಲಿ ವಾಸವಾಗಿದ್ದಾರೆ. ನಕಲಿ ಕರೆನ್ಸಿ ದಂಧೆ ಸಂಬಂಧ ಮನೆ ಹುಡುಕಾಟ ನಡೆಸಿದಾಗ ಕೋಣೆಯಲ್ಲಿ ನೀರಿನ ಕ್ಯಾನ್ ಪೊಲೀಸರ ಕಣ್ಣಿಗೆ ಬಿದ್ದಿದೆ. ಕೂಡಲೇ ಅವರು ಕ್ಯಾನ್ ಮುಚ್ಚಳ ತೆರೆದು ನೋಡಿದಾಗ ಅದರಿಂದ ಗಬ್ಬು ವಾಸನೆ ಹೊರಬಂದಿದೆ. ಮತ್ತೆ ಮನೆ ಪರಿಶೀಲನೆ ನಡೆಸಿದಾಗ ದೇಹದ ಭಾಗಗಳು ಅಲ್ಲಲ್ಲಿ ಬಿದ್ದಿದ್ದವು. ಜೊತೆಗೆ ಸ್ಕ್ಯಾನರ್, ಪ್ರಿಂಟರ್ ಹಾಗೂ ನಕಲಿ ಕರೆನ್ಸಿ ಕೂಡ ಪತ್ತೆಯಾದವು.

ಪೊಲೀಸರ ಪ್ರಕಾರ, ಜನವರಿ 6 ರಂದು ದಂಪತಿಗಳು ಜಗಳವಾಡಿದರು. ನಂತರ ಅವರು ಕೋಪದ ಭರದಲ್ಲಿ ಆಕೆಯ ಕತ್ತು ಹಿಸುಕಿ ಕೊಂದನು. ಬಳಿಕ ಗ್ರೈಂಡರ್-ಕಟರ್‍ನಿಂದ ಆಕೆಯ ದೇಹವನ್ನು ತುಂಡುಗಳಾಗಿ ಕತ್ತರಿಸಿದನು. ನಂತರ ಹೊರಗೆ ಹೋಗಿ ಟೇಪ್, ಪ್ಲಾಸ್ಟಿಕ್ ಚೀಲಗಳು ಮತ್ತು ನೀರಿನ ಕ್ಯಾನ್ ಖರೀದಿಸಿದ್ದಾನೆ. ದೇಹದ ಭಾಗಗಳನ್ನು ಅದರೊಳಗೆ ತುಂಬಿಸಿ ಟೇಪ್ ಹಾಕಿದ್ದಾನೆ. ಪತ್ನಿಯನ್ನು ಯಾರೂ ಹುಡುಕಲು ಬರಲ್ಲ ಎಂದು ಅವನು ಚೆನ್ನಾಗಿ ತಿಳಿದಿದ್ದನು. ಆದರೆ ಕರೆನ್ಸಿ ಜಾಡು ಪೊಲೀಸರನ್ನು ಅವನ ಬಳಿಗೆ ಕರೆದೊಯ್ಯಿತು.

ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ಆತನನ್ನು ಜೈಲಿಗಟ್ಟಿದ್ದಾರೆ.

Comments

Leave a Reply

Your email address will not be published. Required fields are marked *