ವಾಪಸ್ ಬರ್ತಿನಿ ಅಂತಾ ಹೇಳಿ ಹೋದ ಪತಿ ಎರಡು ತಿಂಗಳಾದ್ರೂ ಬರಲೇ ಇಲ್ಲ!

ತುಮಕೂರು: ಪ್ರೇಮಿಗಳಿಬ್ಬರು ಐದು ವರ್ಷ ಪ್ರೀತಿಸಿ ಮದುವೆಯಾಗಿದ್ದರು ಆದರೆ ವಾಪಸ್ ಬರ್ತಿನಿ ಅಂತಾ ಹೇಳಿ ಹೋದ ಪತಿ ಎರಡು ತಿಂಗಳಾದ್ರೂ ಬರಲೇ ಇಲ್ಲ ಎಂದು ಪತ್ನಿ ಗೋಳಾಡುತ್ತಿದ್ದಾಳೆ.

ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ರುಕ್ಮಿಣಿ ಹಾಗೂ ನೊಣವಿನಕೆರೆಯ ಧನು ಪ್ರೀತಿಸಿ ಮಾದುವೆಯಾದ ಪ್ರೇಮಿಗಳು. ರುಕ್ಮಿಣಿ ತಿಪಟೂರಿನಲ್ಲಿ ಕಾಲೇಜಿಗೆ ಹೋಗಬೇಕಾದ್ರೇ ಧನು ಎನ್ನೋ ಹುಡುಗನ ಪರಿಚಯವಾಗುತ್ತೆ. ವೃತ್ತಿಯಲ್ಲಿ ಡ್ರೈವರ್ ಕೆಲಸ ಮಾಡಿಕೊಂಡಿದ್ದ ಧನು ಈಕೆಯನ್ನ ಪ್ರೊಪೋಸ್ ಮಾಡಿ ಪ್ರೀತಿಸಿ ಒಂದು ವರ್ಷದ ಹಿಂದೆ ಪೋಷಕರ ವಿರೋಧ ನಡುವೆ ಮದುವೆ ಆಗಿದ್ದನು.

ಸತತ ಐದು ವರ್ಷದಿಂದ ಲವ್ ಮಾಡಿ ತಿರುಗಾಡಿ ಆ ಪಾರ್ಕ್, ಈ ಪಾರ್ಕ್ ಅಂತಾ ಹೇಳಿ ಕರ್ನಾಟಕದ ಪ್ರವಾಸಿ ಸ್ಥಳಗಳನ್ನೆಲ್ಲಾ ತಿರುಗಿ ಇಬ್ಬರು ಎಂಜಾಯ್ ಮಾಡಿದ್ದಾರೆ. ಎಂಜಾಯ್‍ಮೆಂಟ್ ಬಳಿಕ ಮದುವೆಯು ಕೂಡ ಆಗಿದ್ದಕ್ಕೆ ಯುವಕನ ಮನೆಯ ಕಡೆಯಿಂದ ಜಾತಿ ವಿಷಯಕ್ಕೆ ವಿರೋಧ ವ್ಯಕ್ತವಾಗಿದೆ. ಇಷ್ಟೆಲ್ಲಾ ಆದ್ರೂ ಧನು ರುಕ್ಮಿಣಿಯನ್ನ ಕಳೆದ ವರ್ಷ ದೇವಾಲಯಯೊಂದರಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದನು. ಮದುವೆಯಾಗಿ ಒಂದು ವರ್ಷ ಯಾವುದೇ ತಂಟೆ ತಕರಾರು ಇಲ್ಲದೇ ಜೀವನ ಸಾಗಿಸುತ್ತಿದ್ದ ಜೋಡಿಗೆ ಯಾರು ಅಡ್ಡಿ ಪಡಿಸಿರಲಿಲ್ಲ. ಆದರೆ ಇದ್ದಕಿದ್ದ ಹಾಗೇ ಧನು ಈಗ ರುಕ್ಮಿಣಿನಾ ಬಿಟ್ಟು ಹೋಗಿದ್ದಾನೆ.

ಅತ್ತ ರುಕ್ಮಿಣಿ ತನ್ನ ಗಂಡ ಬೇರೆಯವರ ಬಳಿ ಕೆಲಸ ಮಾಡಬಾರದು ಅಂತಾ ಅಲ್ಲಿ ಇಲ್ಲಿ ಚೀಟಿ ಹಾಕಿಕೊಂಡಿದ್ದ ಹಣವನ್ನ ಎತ್ತಿಕೊಟ್ಟು ಒಂದು ಟಿಟಿ ವಾಹನವನ್ನ ಕೊಡಿಸಿದ್ದಳು. ಮುಂದೆ ನಾವು ಚೆನ್ನಾಗಿ ಇರ್ತಿವಿ ಅನ್ನೋವಷ್ಟರಲ್ಲಿ ಗಂಡ ಧನು ತನ್ನ ಮನೆಗೆ ಹೋಗಿ ಬರ್ತಿನಿ ಅಂತಾ ಎರಡು ತಿಂಗಳ ಹಿಂದೆ ಹೋದವ ಇದುವರೆಗೂ ತಿರುಗಿ ಬಂದಿಲ್ಲ. ರುಕ್ಮಿಣಿಗೆ ಫೋನ್ ಕೂಡ ಮಾಡಿಲ್ಲ. ಪತಿಗಾಗಿ ಕಂಗೆಟ್ಟ ರುಕ್ಮಿಣಿ ಪರದಾಟ ನೋಡಲಾಗುತ್ತಿಲ್ಲ. ಧನು ಮನೆಯವರು ಅವನನ್ನು ಬೇರೆ ಮದುವೆ ಮಾಡಲು ತೆರೆಮರೆಯ ಕಸರತ್ತು ನಡೆಸುತ್ತಿದ್ದಾರೆ. ಅಲ್ಲದೆ ನೀನು ನನ್ ಮಗನ ಜೊತೆ ಹೇಗೆ ಸಂಸಾರ ಮಾಡ್ತಿಯಾ ಅಂತಾ ನೋಡ್ತಿನಿ ಅಂತಾ ಧನು ತಾಯಿ ಧಮಕಿ ಹಾಕಿದ್ದಾರೆ ಎಂದು ನೊಂದ ರುಕ್ಮಿಣಿ ಹೇಳಿದ್ದಾರೆ.

ಇನ್ನೂ ರುಕ್ಮಿಣಿ ಚಿಕ್ಕನಾಯಕನಹಳ್ಳಿಯ ಖಾಸಗಿ ಶಾಲೆಯಲ್ಲಿ ಟೀಚರ್ ಆಗಿ ಕೆಲಸ ಮಾಡುತ್ತಿದ್ದು, ಸದ್ಯ ಅದರಿಂದಲೇ ಜೀವನ ನಡೆಸಬೇಕಾಗಿದೆ. ತನ್ನ ಮನೆಯಲ್ಲಿ ತಾಯಿ ಹಾಗೂ ತಂಗಿಯನ್ನ ಸಾಕಬೇಕಾಗಿದೆ. ನನ್ನ ಗಂಡ ಹೋದವ ಬರಲಿಲ್ಲ ಅಂತಾ ಚಿಕ್ಕನಾಯಕನಹಳ್ಳಿ ಹಾಗೂ ನೋಣವಿನಕೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ರುಕ್ಮಿಣಿ ತಮ್ಮ ಕಷ್ಟವನ್ನು ತೋಡಿಕೊಂಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *