ಉರ್ದು ಶಾಲೆಯಲ್ಲಿ ಕಾಲಿನಿಂದ ತುಳಿದು ರಾಷ್ಟ್ರ ಧ್ವಜಕ್ಕೆ ಅವಮಾನ

ಬೆಂಗಳೂರು: ಗಣರಾಜ್ಯೋತ್ಸವದ ಆಚರಣೆ ನಂತರ ರಾಷ್ಟ್ರ ಧ್ವಜವನ್ನು ಕಾಲಿನಿಂದ ತುಳಿದು ಅವಮಾನ ಮಾಡಿರುವ ಘಟನೆ ನಗರದ ವರ್ತೂರು ಸರ್ಕಾರಿ ಉರ್ದು ಶಾಲೆಯಲ್ಲಿ ನಡೆದಿದೆ.

69 ನೇ ಗಣರಾಜ್ಯೋತ್ಸವ ಅಂಗವಾಗಿ ಇಂದು ಮುಂಜಾನೆ ಶಾಲೆಯಲ್ಲಿ ರಾಷ್ಟ್ರ ಧ್ವಜವನ್ನು ಹಾರಿಸಲಾಗಿತ್ತು. ಸಂಜೆ 5:30 ಸಮಯದಲ್ಲಿ ಧ್ವಜವನ್ನು ಕೆಳಗಿಳಿಸುವ ಸಂದರ್ಭದಲ್ಲಿ ಸೈಯದ್  ರಾಷ್ಟ್ರ ಧ್ವಜವನ್ನು ನೆಲದ ಮೇಲಿಟ್ಟು ಕಾಲಿನಿಂದ ತುಳಿದು ಬಿಚ್ಚುವ ಮೂಲಕ ಅಪಮಾನ ಮಾಡಿದ್ದಾನೆ ಎಂಬ ಅರೋಪ ಕೇಳಿ ಬಂದಿದೆ.

ಆಗಿದ್ದು ಏನು?
ರಾಷ್ಟ್ರಧ್ವಜವನ್ನು ಇಳಿಸದೇ ನೇರವಾಗಿ ಕಂಬವನ್ನೆ ತೆಗೆದು ಕೊಠಡಿಗೆ ನೆಲದಲ್ಲಿ ಎಳೆದುಕೊಂಡು ಹೋಗಿದ್ದಾನೆ. ರಾಷ್ಟ್ರಧ್ವಜವನ್ನು ನೆಲಕ್ಕೆ ಎಳೆದುಕೊಂಡು ಹೋಗುವುದನ್ನು ಕಾರಿನಲ್ಲಿ ಹೋಗುತ್ತಿದ್ದ ಮಹಿಳೆಯೊಬ್ಬರು ನೋಡಿದ್ದಾರೆ. ಕೂಡಲೇ ಕಾರು ನಿಲ್ಲಿಸಿ ಮಹಿಳೆ ಶಾಲೆಗೆ ಹೋಗಿ ಸೈಯದ್ ನನ್ನು ಪ್ರಶ್ನೆ ಮಾಡಿದ್ದಾರೆ. ಈ ವೇಳೇ ಗಾಬರಿಗೊಂಡ ಆತ ರಾಷ್ಟ್ರಧ್ವಜವನ್ನು ಶಾಲೆಯ ಕೊಠಡಿಯ ಕುರ್ಚಿ ಮೇಲೆ ಇಟ್ಟು ಬಿಡಿಸಲು ಮುಂದಾಗಿದ್ದಾನೆ.

ಮಹಿಳೆಯ ಪ್ರಶ್ನೆಗೆ ಉತ್ತರಿಸದೇ ಕೊನೆಗೆ ಕೊಠಡಿಗೆ ಬೀಗ ಹಾಕಿ ಹೊರಟು ಹೋಗಿದ್ದಾನೆ. ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಹಿನ್ನೆಲೆಯಲ್ಲಿ ವರ್ತೂರ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಸೈಯದ್‍ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

https://www.youtube.com/watch?v=rBjFxhYB2JU

 

Comments

Leave a Reply

Your email address will not be published. Required fields are marked *