ಪತ್ನಿ ಬಿಟ್ಟು ಪ್ರೇಯಸಿಯನ್ನು ಮದುವೆಯಾಗಲು ಹೊರಟಿದ್ದ ಭೂಪ – ಕುಟುಂಬಸ್ಥರಿಂದಲೇ ಬಿತ್ತು ಗೂಸಾ

Bihar

ಪಾಟ್ನಾ: ಮತ್ತೋರ್ವ ಮಹಿಳೆಯನ್ನು ಮದುವೆಯಾಗಲು ಹೊರಟಿದ್ದ ವ್ಯಕ್ತಿಯನ್ನು ಲೈಟ್ ಕಂಬಕ್ಕೆ ಕಟ್ಟಿ ಅತ್ತಿಗೆ ಥಳಿಸಿರುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಕತಿಹಾರ್ ಜಿಲ್ಲೆಯ ಅಜಮ್‍ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಲ್ಲಿಕ್‍ಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮೊಹಮ್ಮದ್ ಅಬಿದ್ ಮಹಿಳೆಯೊಬ್ಬರನ್ನು ಪ್ರೀತಿಸುತ್ತಿದ್ದನು ಮತ್ತು ಆಕೆಯನ್ನು ಮದುವೆಯಾಗಲು ನ್ಯಾಯಾಲಯಕ್ಕೆ ಹೋಗುತ್ತಿರುವುದನ್ನು ತಿಳಿದ ಪತ್ನಿ ಸನಾ ಖಾತೂನ್ ಆತನನ್ನು ತಡೆಯಲು ವಿಫಲವಾದಾಗ ಕುಟುಂಬಸ್ಥರಿಗೆ ತಿಳಿಸಿದ್ದಾಳೆ.

ಮುಂಬೈನಲ್ಲಿ ವಾಸಿಸುತ್ತಿದ್ದ ಅಬಿದ್ ಪಕ್ಕದ ಹಳ್ಳಿಯ ನಿವಾಸಿಯಾಗಿದ್ದ ಮಹಿಳೆಯನ್ನು ಪ್ರೀತಿಸುತ್ತಿದ್ದರಿಂದ ತನಗೆ ಹಣ ಕಳುಹಿಸುವುದನ್ನು ನಿಲ್ಲಿಸಿದ್ದ ಎಂದು ಪತ್ನಿ ಸನಾ ಖಾತೂನ್ ಆರೋಪಿಸಿದ್ದಾರೆ. ಇದನ್ನೂ ಓದಿ: ಭವಿಷ್ಯದ ದಿನಗಳಲ್ಲಿ ವಾಹನ ಚಾಲನೆ ಮಾಡುವಾಗ ಫೋನ್‍ನಲ್ಲಿ ಮಾತಾಡಿದ್ರೆ ಅದು ಅಪರಾಧವಲ್ಲ: ನಿತಿನ್ ಗಡ್ಕರಿ

ಅಬಿದ್ ತನ್ನ ಗೆಳತಿಯನ್ನು ಮದುವೆಯಾಗುವಂತೆ ಮನವೊಲಿಸಿ, ಶನಿವಾರ ಆಕೆಯನ್ನು ಮದುವೆಯಾಗಲು ನ್ಯಾಯಾಲಯಕ್ಕೆ ಹೋಗುತ್ತಿದ್ದನು. ಅಬಿದ್ ನ್ಯಾಯಾಲಯಕ್ಕೆ ತೆರಳುತ್ತಿದ್ದಾಗ ಆತನ ಪತ್ನಿ ಸನಾ ಆತನನ್ನು ತಡೆಯಲು ಪ್ರಯತ್ನಿಸಿದ್ದಾಳೆ. ಆದರೆ ಸಾಧ್ಯವಾಗದ ಕಾರಣ ಕೊನೆಗೆ ಅಬಿದ್ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ನಂತರ ಕೂಡಲೇ ಕುಟುಂಬಸ್ಥರು ಅಬಿದ್ ಹಿಡಿದು ಕಂಬಕ್ಕೆ ಕಟ್ಟಿ ಹಿಗ್ಗಾ ಮುಗ್ಗ ಥಳಿಸಿದ್ದಾರೆ.

ಅಬಿದ್ ಒಪ್ಪಿಗೆ ಮೇರೆಗೆ ಆತನಿಗೆ ಮದುವೆ ಮಾಡಲಾಗಿತ್ತು. ಆದರೀಗ ಪತ್ನಿಯನ್ನು ಬಿಟ್ಟು ಬೇರೆ ಮದುವೆಯಾಗಲು ಮುಂದಾಗಿದ್ದಾನೆ. ಪತ್ನಿಗೆ ದ್ರೋಹ ಬಗೆದಿದ್ದಕ್ಕೆ ತಕ್ಕ ಪಾಠ ಕಲಿಸಬೇಕೆಂದು ಥಳಿಸಿಲಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿ ಆಧುನಿಕ ಜಿನ್ನಾ : ಹಿಮಂತ ಬಿಸ್ವಾ ಶರ್ಮಾ

Comments

Leave a Reply

Your email address will not be published. Required fields are marked *