ಅಬಕಾರಿ ಇಲಾಖೆ ಕಾರ್ಯಾಚರಣೆ-ಕಾಡು ಮೇಡಿನಲ್ಲೂ ಸಿಕ್ತು ಗೋವಾ ಮದ್ಯ!

ಕಾರವಾರ: ಉತ್ತರ ಕನ್ನಡ ಜಿಲ್ಲೆ ಗೋವಾ ಗಡಿಯಲ್ಲಿರುವುದರಿಂದ ಗೋವಾದ ಅಗ್ಗದ ಮದ್ಯಗಳು ಕರ್ನಾಟಕದ ನಾನಾ ಭಾಗಕ್ಕೆ ಕಳ್ಳ ಹಾದಿಯಿಂದ ಸರಬರಾಜಾಗುತ್ತದೆ. ಹೀಗಾಗಿ ಕಳೆದ ಒಂದು ದಿನದಿಂದ ಅಬಕಾರಿ ಇಲಾಖೆ ಅಕ್ರಮ ಮದ್ಯವನ್ನು ವಶಪಡಿಸಿಕೊಳ್ಳಲು ಹುಡುಕಾಟ ನೆಡೆಸುತ್ತಿದ್ದು ಭರ್ಜರಿ ಕಾರ್ಯಾಚರಣೆಗೆ ಇಳಿದಿದೆ.

ನಿನ್ನೆ ರಾತ್ರಿ ಕಾರವಾರ ತಾಲೂಕಿನ ಮುಡಗೇರಿ ಗ್ರಾಮದ ಡ್ಯಾಂ ಹತ್ತಿರದ ಅರಣ್ಯ ಪ್ರದೇಶದಲ್ಲಿ ಗೋವಾ ಮದ್ಯ 126 ಲೀಟರ್, ಗೋವಾ ಫೆನ್ನಿ 279 ಲೀಟರ್ ಮತ್ತು ಗೋವಾ ಬಿಯರ್ 72 ಲೀಟರ್ ಹಾಗೂ ಇವುಗಳೆಲ್ಲವನ್ನೂ ಸಾಗಿಸುವುದಕ್ಕೆ ನಂಬರ್ ಪ್ಲೇಟ್ ಇಲ್ಲದ ಎರಡು ದ್ವಿಚಕ್ರ ವಾಹನ ಪತ್ತೆಮಾಡಿ ವಶಕ್ಕೆ ಪಡೆಯಲಾಗಿದೆ.

ಇಂದು ಕೂಡ ಕಾರ್ಯಾಚರಣೆ ಮುಂದುವರಿಸಿದ್ದು ಹೊನ್ನಾವರದ ಕೆಳಗಿನೂರ್ ಗ್ರಾಮ ಪಂಚಾಯತ್ ವ್ಯಾಪ್ತಿಯ ತಿಮ್ಮಪ್ಪ ಕನ್ಯ ಗೌಡ ಮನೆ ಮೇಲೆ ಅಬಕಾರಿ ದಾಳಿ ನಡೆಸಿದ್ದು ಗೊವಾ ರಾಜ್ಯದ ಹನಿ ಗ್ರೇಡ್ ಬ್ರಾಂಡಿ 180 ಎಂಎಲ್ ನ ಒಟ್ಟು 32 ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ತಿಮ್ಮಪ್ಪ ಕನ್ಯಗೌಡ ಅವರನ್ನು ಕೂಡ ವಶಕ್ಕೆ ಪಡೆಯಲಾಗಿದ್ದು, ಕಾರವಾರ ಹೊನ್ನಾವರ ಸೇರಿ ಒಟ್ಟು ಒಂದು ಲಕ್ಷದಷ್ಟು ಮದ್ಯ ಹಾಗೂ ಅದಕ್ಕೆ ಬಳಸುತ್ತಿದ್ದ ವಾಹನ ವಶಪಡಿಸಿಕೊಳ್ಳಲಾಗಿದೆ.

Comments

Leave a Reply

Your email address will not be published. Required fields are marked *