ಶಾಸಕರಿಗೆ ಜೀವ ಬೆದರಿಕೆ – ಆರೋಪಿ ಅರೆಸ್ಟ್

ಭುವನೇಶ್ವರ: ಒಡಿಶಾದ(Odisha) ಜಾಜ್‍ಪುರ ಜಿಲ್ಲೆಯ ಶಾಸಕ ನಿತ್ಯಾನಂದ ಸಾಹೂ(Nityananda Sahoo) ಅವರಿಗೆ ದೂರವಾಣಿ ಮೂಲಕ ಜೀವ ಬೆದರಿಕೆಯೊಡ್ಡಿದ ಆರೋಪದಡಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.

ಮಂಗಳವಾರ ಬೆಳಗ್ಗೆ 8.30ರ ಸುಮಾರಿಗೆ ಬಾಲಸೋರ್ ಜಿಲ್ಲೆಯ (Balasore District) ಬಸ್ತಾ (Basta) ಶಾಸಕ ಸಾಹೂ ಅವರ ಮೊಬೈಲ್ ಫೋನ್‍ಗೆ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿತ್ತು. ಈ ಬಗ್ಗೆ ತನಿಖೆ ಆರಂಭಿಸಿದ ಬಾಲಸೋರ್ ಪೊಲೀಸರ ಸೈಬರ್ ಸೆಲ್, ಎಸ್‍ಕೆ ಮುಜಾಮಿಲ್(Sk Mujamil) ಎಂಬಾತನನ್ನು ಮಂಗಳಪುರ ಪ್ರದೇಶದಲ್ಲಿ ಬಂಧಿಸಿದೆ. ಇದೀಗ ಆತನ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ವಿಧಾನಸಭೆ ಉಪ ಸಭಾಪತಿ ಆನಂದ ಮಾಮನಿ ಆರೋಗ್ಯದಲ್ಲಿ ಏರುಪೇರು – ಆಸ್ಪತ್ರೆಗೆ ದಾಖಲು

ವಿಚಾರಣೆ ವೇಳೆ ಶಂಕಿತ ಆರೋಪಿ ನಿತ್ಯ ಅಪರಾಧಿ ಎಂದು ತಿಳಿದುಬಂದಿದ್ದು, ಈ ಹಿಂದೆ ಮತ್ತೊಬ್ಬ ಶಾಸಕನಿಗೂ ಇದೇ ರೀತಿ ಕಿರುಕುಳ ನೀಡಿದ್ದನು ಎಂಬ ಸತ್ಯ ತಿಳಿದುಬಂದಿದೆ. ಎಸ್‍ಕೆ ಮುಜಾಮಿಲ್, ನಿತ್ಯಾನಂದ ಸಾಹೂ ಅವರ ದೂರವಾಣಿ ಸಂಖ್ಯೆ ಮತ್ತು ಫೋಟೋಗಳನ್ನು ಸೋಶಿಯಲ್ ಮೀಡಿಯಾದ ಮೂಲಕ ಡೌನ್‍ಲೋಡ್ ಮಾಡಿಕೊಂಡು ಹಣಕ್ಕಾಗಿ ಬೆದರಿಕೆಯೊಡ್ಡುತ್ತಿದ್ದನು ಎಂದು ಪೊಲೀಸ್ ವರಿಷ್ಠಾಧಿಕಾರಿ ಸುಧನ್ಸು ಶೇಖರ್ ಮಿಶ್ರಾ (Sudhansu Sekhar Mishra) ಹೇಳಿದ್ದಾರೆ. ಇದನ್ನೂ ಓದಿ: ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರು ದಲಿತ ಬಾಲಕಿಯರ ಮೃತದೇಹ ಪತ್ತೆ – ಅತ್ಯಾಚಾರ, ಕೊಲೆ ಆರೋಪ

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *