ಫೇಸ್‍ಬುಕ್ ಮೂಲಕ ಪತಿಯ ರಹಸ್ಯ ಬಯಲು

-ವಿಷಯ ತಿಳಿಯುತ್ತಿದ್ದಂತೆ ಅಮೆರಿಕಾದಿಂದ ಬಂದ ಪತ್ನಿ

ಹೈದರಾಬಾದ್: ಮೊದಲ ಪತ್ನಿ ಇರುವಾಗಲೇ ವ್ಯಕ್ತಿಯೊಬ್ಬ ಎರಡನೇ ಮದುವೆಯಾಗಲು ಮುಂದಾಗಿದ್ದು, ಫೇಸ್‍ಬುಕ್ ಮೂಲಕ ಸಿಕ್ಕಿಬಿದ್ದಿರುವ ಘಟನೆ ನಗೋನ್ ನಲ್ಲಿ ನಡೆದಿದೆ.

ಕಿಶೋರ್ ರೆಡ್ಡಿ (30) ಎರಡನೇ ಮದುವೆಯಾಗಲೂ ಹೋಗಿ ಸಿಕ್ಕಿಬಿದ್ದ ಪತಿರಾಯ. ಈತ ಶಬಾದ್ ಮಂಡಲ್ ನ ಆಸ್ಪಲ್ಲಿಗುಡದ ನಿವಾಸಿಯಾಗಿದ್ದು, 2015 ರಲ್ಲಿ ಆರ್ಯ ಸಮಾಜದಲ್ಲಿ ವಿವಾಹವಾಗಿದ್ದನು.

ಮದುವೆಯಾದ ಕೆಲವು ತಿಂಗಳ ನಂತರ ರೆಡ್ಡಿ ಪತ್ನಿ ಕೆಲಸಕ್ಕಾಗಿ ಅಮೆರಿಕಾಗೆ ಹೋಗಿದ್ದರು. ಬಳಿಕ ಪತ್ನಿ ತನ್ನ ಪತಿಯನ್ನು ಯುಎಸ್‍ಗೆ ಕರೆಸಿಕೊಳ್ಳಬೇಕು ಎಂದು ಪ್ರಯತ್ನಿಸಿದ್ದರು. ಆದರೆ ರೆಡ್ಡಿಯ ವೀಸಾ ನಿರಾಕರಣೆಯಾಗಿತ್ತು. ಬಳಿಕ ಪತ್ನಿ ಯುಎಸ್‍ಎ ಯಲ್ಲಿ ಕೆಲಸ ಮಾಡಿಕೊಂಡು ಪತಿಗೆ ಹಣವನ್ನು ಕಳುಹಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತ ಪತ್ನಿ ಕಳುಹಿಸಿದ ಹಣದಲ್ಲಿ ಆರೋಪಿ ರೆಡ್ಡಿ ನ್ಯಾಗೋಲ್ ನಲ್ಲಿ ಫ್ಲಾಟ್ ಖರೀದಿಸಿದ್ದನು. ಅಷ್ಟೇ ಅಲ್ಲದೇ ಕಿಶೋರ್ ಇನ್ನೊಬ್ಬ ಮಹಿಳೆಯೊಂದಿಗೆ ಸಂಬಂಧವನ್ನು ಇಟ್ಟುಕೊಂಡಿದ್ದನು. ದಿನ ಕಳೆದಂತೆ ಮೊದಲ ಹೆಂಡತಿಗೆ ತಿಳಿಯದಂತೆ ಮದುವೆಯಾಗಲು ಯತ್ನಿಸಿದ್ದು, ಆಕೆಯ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದನು. ಆದರೆ ಆರೋಪಿ ನಿಶ್ಚಿತಾರ್ಥದ ಫೋಟೋಗಳನ್ನು ಫೇಸ್‍ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾನೆ.

ಫೇಸ್‍ಬುಕ್ ನಲ್ಲಿ ಪತಿಯ ಎರಡನೇ ಹೆಂಡತಿ ಫೋಟೋಗಳು ಮೊದಲ ಪತ್ನಿ ಗಮನಕ್ಕೆ ಬಂದಿದ್ದು. ತಕ್ಷಣವೇ ಆಕೆ ಭಾರತಕ್ಕೆ ಬಂದು ಪೊಲೀಸರಿಗೆ ದೂರು ಸಲ್ಲಿಸಿದ್ದರು. ಸದ್ಯಕ್ಕೆ ಇನ್ನೊಬ್ಬ ಮಹಿಳೆ ಮದುವೆಯಾಗಲು ಯತ್ನಿಸಿದ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *