ನಡುರಸ್ತೆಯಲ್ಲೇ ಸ್ಕೂಟಿ ಮೇಲೆ ಕುಳಿತು ಸ್ನಾನ ಮಾಡಿದ ಲವರ್ಸ್‌

ಮುಂಬೈ: ಯುವಕ-ಯುವತಿ ಇಬ್ಬರು ನಡುರಸ್ತೆಯಲ್ಲೇ ಸ್ಕೂಟಿ ಮೇಲೆ ಕುಳಿತು ಸ್ನಾನ ಮಾಡುತ್ತಿರುವ ವಿಲಕ್ಷಣ ಘಟನೆಯೊಂದು ಮಹಾರಾಷ್ಟ್ರದ (Maharashtra) ಉಲ್ಹಾಸ್‌ನಗರದಲ್ಲಿ ನಡೆದಿದೆ.

ದೇಶದ ವಿವಿಧ ಭಾಗಗಳಲ್ಲಿ ತಾಪಮಾನ ಏರಿಕೆ ನಡುವೆ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಪ್ರೇಮಿಗಳಿಬ್ಬರು (Lovers) ಸ್ಕೂಟಿ ಮೇಲೆ ಕುಳಿತು ಸ್ನಾನ ಮಾಡುತ್ತಿರುವ ವೀಡಿಯೋ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇವರಿಬ್ಬರ ವಿರುದ್ಧ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

WeDeserveBetterGovt ಎಂಬ ಟ್ವಿಟ್ಟರ್‌ ಖಾತೆಯಲ್ಲಿ ವೀಡಿಯೋ ಹಂಚಿಕೊಂಡಿದ್ದು, ಉಲ್ಲಾಸ್‌ನಗರದ ಸೆಕ್ಟರ್‌ 17ನೇ ಮುಖ್ಯರಸ್ತೆಯಲ್ಲಿ ನಡೆದಿದೆ. ಈ ವೀಡಿಯೋದಲ್ಲಿ ಯುವಕ-ಯುವತಿ ಇಬ್ಬರೂ ಸ್ಕೂಟಿ ಮೇಲೆ ಕುಳಿತು ಬಕೆಟ್‌ ನಲ್ಲಿ ನೀರು ಸುರಿದುಕೊಳ್ಳುತ್ತಿದ್ದಾರೆ. ಇತರ ಸವಾರರು ವೀಕ್ಷಣೆ ಮಾಡುತ್ತಿರುವುದು ಕಂಡುಬಂದಿದೆ. ಇದನ್ನೂ ಓದಿ: ಟೀ ಕುಡಿತಾ ಕುಳಿತಿದ್ದ ವ್ಯಕ್ತಿಯ ಕಿಸೆಯಲ್ಲಿದ್ದ ಮೊಬೈಲ್ ಏಕಾಏಕಿ ಬ್ಲಾಸ್ಟ್- ಮುಂದೇನಾಯ್ತು?

ಈ ವೀಡಿಯೋ ನೋಡಿರುವ ಥಾಣೆ ನಗರ ಪೊಲೀಸರು (Thane City Police) ಸೂಕ್ತ ಕ್ರಮ ಕೈಗೊಳ್ಳುವಂತೆ ಥಾಣೆಯ ಸಂಚಾರ ನಿಯಂತ್ರಣ ಕೊಠಡಿಗೆ ವರದಿ ಮಾಡಿದೆ. ಇದನ್ನೂ ಓದಿ: 15 ಜನ ನಿರಂತರವಾಗಿ ರೇಪ್‌ ಮಾಡಿದ್ರೆ ಹೇಗೆ ಪುರಾವೆ ಕೊಡ್ತೀರಾ – ಅದಾ ಶರ್ಮಾ ಪ್ರಶ್ನೆ