ರಜನಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಮಮ್ಮುಟ್ಟಿ

ಜನಿಕಾಂತ್ (Rajinikanth) ನಟನೆಯ 171ನೇ ಸಿನಿಮಾ ಕುರಿತಂತೆ ಭಾರೀ ಭಾರೀ ಸುದ್ದಿಗಳು ಹೊರ ಬರುತ್ತಿವೆ. ಅದರಲ್ಲೂ ತಾರಾಗಣದ ಕುರಿತಂತೆ ರೋಚಕ ವಿಷಯಗಳು ಕೇಳುತ್ತಿವೆ. ಅವುಗಳು ನಿಜವೋ ಸುಳ್ಳೋ ಗೊತ್ತಿಲ್ಲ. ಒಟ್ಟಿನಲ್ಲಿ ಥ್ರಿಲ್ ಅನುಭವಿಸುತ್ತಿದ್ದಾರೆ ರಜನಿ ಫ್ಯಾನ್ಸ್. ಇದೀಗ ಮತ್ತೊಂದು ಹೊಸ ಸುದ್ದಿ ಹರಿದಾಡುತ್ತಿದ್ದು ರಜನಿ ಜೊತೆ ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿ (Mammootty) ಕೂಡ ಪಾತ್ರ ಮಾಡಲಿದ್ದಾರೆ.

‘ಜೈಲರ್’ (Jailer) ಸಿನಿಮಾದ ಭರ್ಜರಿ ಸಕ್ಸಸ್ ನಂತರ ರಜನಿಕಾಂತ್ ಸಿನಿಮಾ ಆಯ್ಕೆಯಲ್ಲಿ ಮತ್ತಷ್ಟು ಚ್ಯುಸಿಯಾಗಿದ್ದಾರೆ. ಹೀಗಿರುವಾಗ ತಮ್ಮ 171ನೇ ಚಿತ್ರಕ್ಕೆ ಲೋಕೇಶ್ ಕನಗರಾಜ್ ಜೊತೆ ಕೈಜೋಡಿಸಿದ್ದಾರೆ. ತಲೈವಾ ಮುಂದೆ ಅಬ್ಬರಿಸಲು ನಟ ರಾಘವ್ ಲಾರೆನ್ಸ್ ಕೂಡ ಸಜ್ಜಾಗಿದ್ದಾರೆ.

ರಜನಿಕಾಂತ್ ಅವರ 171ನೇ ಚಿತ್ರದಲ್ಲಿ ವಿಲನ್‌ಗೂ ಕೂಡ ತೂಕವಾಗಿರುವಂತಹ ಪಾತ್ರವಿದ್ದು, ತಲೈವಾ ಮುಂದೆ ಅಬ್ಬರಿಸೋಕೆ ರಾಘವ್ ಸೂಕ್ತ ಎಂದೇನಿಸಿ ನಿರ್ದೇಶಕರು ಆಯ್ಕೆ ಮಾಡಿದ್ದಾರೆ. ಹಾಗಾಗಿ ರಾಘವ್ ವಿಶೇಷ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುತ್ತಿವೆ ಮೂಲಗಳು.

ತಲೈವಾ ನಟಿಸಿದ್ದ ಚಂದ್ರಮುಖಿ ಸಿನಿಮಾದ ಮುಂದಿನ ಭಾಗ ಚಂದ್ರಮುಖಿ 2 ಸಿನಿಮಾದಲ್ಲಿ ರಾಘವ್ ಲಾರೆನ್ಸ್ (Raghava Lawrence) ನಾಯಕನಾಗಿ ನಟಿಸಿದ್ದರು. ಮೊದಲ ಚಂದ್ರಮುಖಿ ಸಿನಿಮಾದಲ್ಲಿ ರಜನೀಕಾಂತ್ ನಿರ್ವಹಿಸಿದ್ದ ಪಾತ್ರವನ್ನೇ ರಾಘವ್ ನಿರ್ವಹಿಸಿದ್ದರು.

 

ರಜನಿಕಾಂತ್ 171ನೇ ಸಿನಿಮಾ, ಲೋಕೇಶ್ ಕನಗರಾಜ್ ಅವರ 6ನೇ ಸಿನಿಮಾ ಆಗಲಿದೆ. ರಜನೀಕಾಂತ್‌ಗೆ ನಿರ್ದೇಶಿಸಲಿರುವ ಮೊದಲ ಸಿನಿಮಾ ಇದಾಗಿದ್ದು, ರಾಘವ್ ಲಾರೆನ್ಸ್-ತಲೈವಾ ಮೊದಲ ಬಾರಿಗೆ ಜೊತೆಯಾಗಿ ನಟಿಸಲಿದ್ದಾರೆ. ಸಿನಿಮಾದ ಚಿತ್ರೀಕರಣ ಮುಂದಿನ ವರ್ಷ ಮಾರ್ಚ್ ತಿಂಗಳಲ್ಲಿ ಪ್ರಾರಂಭ ಆಗಲಿದೆ.