ಕನ್ನಡದ ವಿಷ್ಣು ವಿಜಯದಲ್ಲಿ ನಟಿಸಿದ್ದ ಮಮತಾ ಕುಲಕರ್ಣಿ ಈಗ ಸನ್ಯಾಸಿನಿ

ಪ್ರಯಾಗರಾಜ್: ಬಾಲಿವುಡ್ ಹಾಗೂ ದಕ್ಷಿಣ ಸಿನಿಮಾದಲ್ಲಿ ನಟಿಸಿ ಖ್ಯಾತಿ ಪಡೆದಿದ್ದ ನಟಿ ಮಮತಾ ಕುಲಕರ್ಣಿ (Mamata Kulkarni) ಇದೀಗ ಲೌಕಿಕ ಜಗತ್ತನ್ನು ತೊರೆದು ಆಧ್ಯಾತ್ಮಿಕ ಜಗತ್ತಿಗೆ ಇಳಿದಿದ್ದಾರೆ.

90ರ ದಶಕದಲ್ಲಿ ಬಾಲಿವುಡ್ ಸೇರಿದಂತೆ ಕನ್ನಡ ಸಿನಿಮಾದಲ್ಲಿ ನಟಿಸಿರುವ ಮಮತಾ, ಇದೀಗ ಕಿನ್ನರ ಅಖಾಡಕ್ಕಿಳಿಯುವ ಮೂಲಕ ಮಹಾಮಂಡಲೇಶ್ವರಿಯಾಗಿದ್ದಾರೆ. ಮಮತಾ ಕುಲಕರ್ಣಿ ಹೆಸರನ್ನು ಬದಲಿಸಿಕೊಂಡು `ಮಾಯಿ ಮಮತಾ ನಂದಗಿರಿ’ ಎಂದು ನಾಮಕರಣ ಮಾಡಿಕೊಂಡಿದ್ದಾರೆ.ಇದನ್ನೂ ಓದಿ: ಡಿಕೆಶಿ ಕ್ಷೇತ್ರದಲ್ಲಿ ಗ್ರಾಮವನ್ನೇ ಖರೀದಿಸಿದ್ರಾ ಕಾಂಗ್ರೆಸ್‌ ಶಾಸಕ?

ಮಹಾಕುಂಭಮೇಳದಲ್ಲಿ ಬಾಗಿಯಾಗಿರುವ ನಟಿ, ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು. ಬಳಿಕ ತಮ್ಮ ಸ್ವಂತ ಪಿಂಡ ಪ್ರದಾನಮಾಡುವ ಮೂಲಕ ಜೂನಾ ಅಖಾ ಡದ ಅಡಿ ಕಾರ್ಯನಿರ್ವಹಿಸುವ ಕಿನ್ನರ ಅಖಾಡಕ್ಕೆ ಸೇರಿಕೊಂಡಿದ್ದು, ಮಹಾಮಂಡಲೇಶ್ವರರಾಗಿದ್ದಾರೆ. ಇವರಿಗೆ ಕಿನ್ನರ ಅಖಾಡದ ಆಚಾರ್ಯ ಮಹಾಮಂಡಲೇಶ್ವರ ಲಕ್ಷ್ಮಿ ನಾರಾಯಣ ತ್ರಿಪಾಠಿ ದೀಕ್ಷೆ ನೀಡಿದರು.

ಕಳೆದ 2 ವರ್ಷಗಳಿಂದ ಜೂನಾ ಅಖಾಡದೊಂದಿಗೆ ಸಂಪರ್ಕದಲ್ಲಿದ್ದ ಮಮತಾ, 2-3 ತಿಂಗಳಿಂದ ಕಿನ್ನರ ಅಖಾಡದೊಂದಿಗೆ ನಿಕಟ ಸಂಪರ್ಕ ಬೆಳೆಸಿಕೊಂಡಿದ್ದರು. ಇದೀಗ ಅದೇ ಅಖಾಡದ ಭಾಗವಾಗಲು ನಿರ್ಧರಿಸಿದ್ದಾರೆ. ಸದ್ಯ ಜ29ರಂದು ಮೌನಿ ಅಮಾವಾಸ್ಯೆಯ ಪವಿತ್ರ ಸ್ನಾನಕ್ಕಾಗಿ ಪ್ರಯಾಗರಾಜ್‌ನಲ್ಲಿದ್ದಾರೆ.

ನಟಿ ಕನ್ನಡದ ವಿಷ್ಣು ವಿಜಯ ಸಿನಿಮಾದಲ್ಲಿ ನಟಿಸಿದ್ದು, ವಕ್ತ ಹಮಾರಾ ಹೈ, ಕ್ರಾಂತಿವೀರ, ಸಬ್ಸೆ ಬಡಾ ಕಿಲಾಡಿ ಇನ್ನಿತರ ಬಾಲಿವುಡ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.ಇದನ್ನೂ ಓದಿ: ದಿನ ಭವಿಷ್ಯ 25-01-2025