ಮಲ್ಪೆ ಸರ್ವಋತು ಮೀನುಗಾರಿಕಾ ಬಂದರು – ಸಿಸಿಟಿವಿ, ಸರಿಯಾದ ಸೆಕ್ಯೂರಿಟಿ ಇಲ್ಲ

ಉಡುಪಿ: ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಕಳ್ಳತನ ಆದ ನಂತರ ಬಂದರಿನ ಭದ್ರತೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ.

ಬಂದರು ಒಳಗಡೆ ಎಲ್ಲೂ ಸಿಸಿಟಿವಿ ಅಳವಡಿಕೆ ಆಗಿಲ್ಲ. ಬಂದರು ನಿರ್ವಹಣೆಯ ಅವಧಿ ಕೂಡ ಮುಗಿದಿದ್ದು, ಹೊಸ ಟೆಂಡರ್ ಕರೆದಿಲ್ಲ ಎಂಬ ಆರೋಪಗಳಿವೆ.

ಸಾವಿರಾರು ಕೋಟಿ ರೂಪಾಯಿ ವ್ಯವಹಾರ ನಡೆಯುವ ಮಲ್ಪೆ ಮೀನುಗಾರಿಕಾ ಬಂದರಿಗೆ ಸರ್ಕಾರ ಮೀನುಗಾರಿಕಾ ಇಲಾಖೆ ಸೂಕ್ತ ಭದ್ರತೆಗಳನ್ನು ಕೊಡಬೇಕು. ಸೆಕ್ಯೂರಿಟಿಗಳನ್ನು ಪೊಲೀಸರನ್ನು ನೇಮಿಸಬೇಕು ಎಂದು ಒತ್ತಾಯ ಕೇಳಿ ಬಂದಿದೆ.