ಯುಪಿಎ ಅವಧಿಯಲ್ಲೂ ಹಲವು ಉಪಗ್ರಹಗಳನ್ನು ಹಾರಿಸಲಾಗಿದೆ: ಮೋದಿಗೆ ಖರ್ಗೆ ತಿರುಗೇಟು

ಕಲಬುರಗಿ: ಜನರಿಗೆ ತೋರಿಸುವ ಉದ್ದೇಶದಿಂದ ಮಿಶನ್ ಶಕ್ತಿ ಪ್ರಯೋಗ ಮಾಡಲಾಗಿದೆ. ದೇಶದಲ್ಲಿ ಇಂತಹ ಪ್ರಯೋಗಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಆದರೆ ಯಾರೋ ಒಬ್ಬರು ಕ್ರೆಡಿಟ್ ತೆಗೆದುಕೊಳ್ಳುವುದು ತಪ್ಪು ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

2012ರಲ್ಲಿಯೇ ಪ್ರಯೋಗಿಸಲಾಗಿರುವ ಸ್ಯಾಟ್‍ಲೈಟ್ ತಯಾರಾಗಿತ್ತು. ಇದರಿಂದ ಬೇರೆ ದೇಶದ ಉಪಗ್ರಹಗಳಿಗೆ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಪ್ರಯೋಗಿಸಿರಲಿಲ್ಲ. ಇಂದು ಜನರಿಗೆ ತೋರಿಸುವ ಉದ್ದೇಶಕ್ಕಾಗಿ ಪ್ರಯೋಗ ಮಾಡಿ ಪ್ರಚಾರ ತೆಗೆದುಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ. ದೇಶದ ಹಿತದೃಷ್ಟಿಯಿಂದಲೇ ಡಿಆರ್‍ಡಿಓ ಸಂಸ್ಥೆಯನ್ನು ಕಟ್ಟಲಾಗಿದೆ. ಯುಪಿಎ ಅವಧಿಯಲ್ಲಿ ಹಲವಾರು ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಬಿಡಲಾಗಿದೆ. ಎಲ್ಲವನ್ನು ದೇಶದ ಹಿತದೃಷ್ಟಿಯಿಂದಲೇ ಮಾಡಲಾಗಿದೆ. ಆದರೆ ಇಂದು ಬಂದು ನಾನೇ ಮಾಡಿದ್ದೇನೆ ಎಂದು ಹೇಳುತ್ತಾರೆ ಎಂದು ಪ್ರಧಾನಿ ಮೋದಿ ವಿರುದ್ಧ ಗರಂ ಆದರು. ಇದನ್ನೂ ಓದಿ: ಏನಿದು ಉಪಗ್ರಹ ವಿರೋಧಿ ಅಸ್ತ್ರ? ಭಾರತದ ಸಾಧನೆ ಏನು?

ಕ್ಷಿಪಣಿ ಮೂಲಕ ಉಪಗ್ರಹವನ್ನು ಹೊಡೆದು ಉರುಳಿಸುವ ಸಾಮಥ್ರ್ಯವನ್ನು ಹೊಂದುವ ಮೂಲಕ ವಿಶ್ವದ ಇತಿಹಾಸದಲ್ಲಿ ಭಾರತ ವಿಶೇಷ ಸಾಧನೆ ಮಾಡಿದೆ. ಅಮೆರಿಕ, ರಷ್ಯಾ, ಚೀನಾದ ಬಳಿಕ ಉಪಗ್ರಹ ವಿರೋಧಿ ಅಸ್ತ್ರಗಳನ್ನು (ಆಂಟಿ-ಸ್ಯಾಟೆಲೈಟ್ ವೆಪನ್) ಹೊಂದಿದ 4ನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಈ ಮೂಲಕ ವಿಶ್ವದ ಸ್ಪೇಸ್ ಸೂಪರ್ ಪವರ್ ದೇಶವಾಗಿ ಭಾರತ ಈಗ ಹೊರಹೊಮ್ಮಿದೆ.

https://www.youtube.com/watch?v=F7KwqUg_uqA

Comments

Leave a Reply

Your email address will not be published. Required fields are marked *