ಮೋದಿ ನೇಣಿಗೇರಲು ಸಿದ್ಧವಾದ್ರೆ ರಸ್ತೆ ರೆಡಿ ಮಾಡಿ ಕೊಡ್ತೀವಿ: ಪ್ರಿಯಾಂಕ್ ಖರ್ಗೆ

ಕಲಬುರಗಿ: ಮೋದಿ ನೇಣಿಗೇರಲು ಸಿದ್ಧವಾದ್ರೆ ರಸ್ತೆ ರೆಡಿ ಮಾಡಿಕೊಡುತ್ತೇವೆ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಚಿಂಚೋಳಿ ಕ್ಷೇತ್ರದ ಶಾದಿಪುರ ಗ್ರಾಮದಲ್ಲಿ ಮಾತನಾಡಿದ ಅವರು, ನೋಟ್ ಬ್ಯಾನ್ ಪರಿಣಾಮ 50 ದಿನದಲ್ಲಿ ಸರಿಯಾಗದಿದ್ದರೆ ನಡು ರಸ್ತೆಯಲ್ಲಿ ನೇಣು ಹಾಕಿ ಅಂತ ಮೋದಿ ಹೇಳಿದ್ದರು. ಈಗಲೂ ಜನರ ಪರದಾಟ ತಪ್ಪಿಲ್ಲ. ನಾವು ರಸ್ತೆ ರೆಡಿ ಮಾಡಿಕೊಡಲು ಸಿದ್ದರಿದ್ದೇವೆ. ಮೋದಿ ಬರುತ್ತಾರಾ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಕ್ಷಮೆಗೆ ಆಗ್ರಹಿಸುವ ಮುನ್ನ ಮೋದಿ ಸೇರಿ ಬಿಜೆಪಿ ನಾಯಕರು ಕ್ಷಮೆ ಕೇಳಲಿ. ಸೋನಿಯಾಗಾಂಧಿ, ರಾಹುಲ್ ಗಾಂಧಿ ಬಗ್ಗೆ ನಿತ್ಯ ಕೀಳಾಗಿ ನಂದಿಸುವವರು ಯಾರು ಎಂದು ಪ್ರಿಯಾಂಕ್ ಬಿಜೆಪಿ ನಾಯಕರನ್ನು ಪ್ರಶ್ನಿಸಿದ್ದಾರೆ.

ಭಾನುವಾರ ಚಿಂಚೋಳಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಕಾರ್ಯದಲ್ಲಿ ಕಾಂಗ್ರೆಸ್ ಮಹತ್ವದ ಪಾತ್ರವಹಿಸಿದೆ. ಸ್ವಾತಂತ್ರ್ಯ ಬರುವ ಸಂದರ್ಭದಲ್ಲಿ ಮೋದಿ ಹುಟ್ಟಿರಲೇ ಇಲ್ಲ. ಅಂತಹ ವ್ಯಕ್ತಿ ಕಾಂಗ್ರೆಸ್ ಪಕ್ಷ ಏನು ಮಾಡಿದೆ ಎಂದು ಪ್ರಶ್ನೆ ಮಾಡುತ್ತಾನೆ. ಮೋದಿ ನನಗಿಂತ 6 ವರ್ಷ ಸಣ್ಣವ. ಪ್ರಚಾರ ಕಾರ್ಯದಲ್ಲಿ ದೇಶದ ಎಲ್ಲೇ ಹೋದರೂ ಕಾಂಗ್ರೆಸ್ 40 ಸೀಟು ಗೆಲ್ಲುವುದಿಲ್ಲ ಎಂದು ಹೇಳುತ್ತಾರೆ. ಆದರೆ 40 ಸೀಟು ಬಂದರೆ ದೆಹಲಿಯ ವಿಜಯ್ ಚೌಕ್ ನಲ್ಲಿ ಮೋದಿ ನೇಣು ಹಾಕಿಕೊಳ್ಳುತ್ತಾನಾ ಎಂದು ಏಕವಚನದಲ್ಲಿ ಪ್ರಶ್ನಿಸಿ ವಾಗ್ದಾಳಿ ನಡೆಸಿದ್ದರು.

Comments

Leave a Reply

Your email address will not be published. Required fields are marked *