ವಿದ್ಯಾರ್ಥಿನಿಯರು ಹಾಜರಾಗದಿದ್ರೆ ನಮಗೂ ಉನ್ನತ ಶಿಕ್ಷಣ ಬೇಡ – ತಾಲಿಬಾನ್‌ಗೆ ವಿದ್ಯಾರ್ಥಿಗಳಿಂದ ಎಚ್ಚರಿಕೆ

ಕಾಬೂಲ್: ಅಫ್ಘಾನಿಸ್ತಾನದಲ್ಲಿರುವ (Afghan) ತಾಲಿಬಾನ್ ಸರ್ಕಾರ (Taliban Government) ವಿದ್ಯಾರ್ಥಿನಿಯರಿಗೆ (Afghan Students) ವಿಶ್ವವಿದ್ಯಾಲಯ ಶಿಕ್ಷಣವನ್ನು ನಿಷೇಧಿಸಿದ ಬೆನ್ನಲ್ಲೇ ವಿದ್ಯಾರ್ಥಿಗಳು ತಮ್ಮ ತರಗತಿಗೆ ಗೈರಾಗಿದ್ದಾರೆ. ವಿದ್ಯಾರ್ಥಿನಿಯರು ತರಗತಿಗಳಿಗೆ ಹಾಜರಾಗುವವರೆಗೂ ತಾವೂ ಕಾಲೇಜು ಪ್ರವೇಶ ಮಾಡುವುದಿಲ್ಲವೆಂದು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ನಾವು ನಮ್ಮ ಪ್ರತಿಭಟನೆಯನ್ನು (Protest) ಮುಂದುವರಿಸುತ್ತೇವೆ. ಮಹಿಳಾ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗದಿದ್ರೆ, ನಾವೂ ನಮ್ಮ ಪಾಠ ಪ್ರವಚನಗಳನ್ನ ಬಹಿಷ್ಕರಿಸುತ್ತೇವೆ. ಶಿಕ್ಷಣವನ್ನು ಮುಂದುವರಿಸೋದಿಲ್ಲ ಎಂದು ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಹಿಜಬ್ ಸೂಚನೆ ಕಡೆಗಣನೆ, ಮಹಿಳೆಯರು ಮದುವೆಗೆ ಹೋಗುವ ಉಡುಪು ಧರಿಸುತ್ತಾರೆ: ತಾಲಿಬಾನ್ ಸಮರ್ಥನೆ

ನಮ್ಮ ಸಹೋದರಿಯರಿಗೆ ವಿಶ್ವವಿದ್ಯಾನಿಲಯಗಳು (Universities) ಮುಚ್ಚಲ್ಪಟ್ಟಿವೆ. ಹಾಗಾಗಿ ನಮಗೂ ವಿಶ್ವವಿದ್ಯಾಲಯಕ್ಕೆ ಹೋಗಲು ಇಷ್ಟವಿಲ್ಲ ಎಂದು ವಿದ್ಯಾರ್ಥಿ ನವೀದುಲ್ಲಾ ಹೇಳಿಕೊಂಡಿದ್ದಾರೆ. ಇದರಿಂದ ಕಾಬೂಲ್ ವಿಶ್ವವಿದ್ಯಾಲಯದ ಉಪನ್ಯಾಸಕರು ತಮ್ಮ ನಿರ್ಧಾರ ಮರುಪರಿಶೀಲಿಸುವಂತೆ ತಾಲಿಬಾನ್‌ಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಮೂಗಿನ ಮೂಲಕ ತೆಗೆದುಕೊಳ್ಳುವ ಲಸಿಕೆಯ ತುರ್ತು ಬಳಕೆಗೆ ಕೇಂದ್ರ ಸರ್ಕಾರ ಅನುಮತಿ

ಅಫ್ಘಾನಿಸ್ತಾನ ಸರ್ಕಾರವು ಇತ್ತೀಚೆಗೆ ಮಹಿಳಾ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ನಿರ್ಬಂಧ ವಿಧಿಸಿತು. ಈ ನಿರ್ಧಾರ ವಿದ್ಯಾರ್ಥಿಗಳ ವ್ಯಾಪಕ ಪ್ರತಿಭಟನೆ ಮತ್ತು ಜಾಗತಿಕ ಖಂಡನೆಗೆ ಕಾರಣವಾಯಿತು. ಮಹಿಳಾ ವಿದ್ಯಾರ್ಥಿಗಳು ಶಿಕ್ಷಣ ನಿಷೇಧಿಸುವುದಕ್ಕಿಂತ ನಮ್ಮ ಶಿರಚ್ಛೇದನ ಮಾಡುವುದೇ ಉತ್ತಮ ಎಂದು ಬೀದಿಗಿಳಿದು ಹೋರಾಟ ನಡೆಸಲು ಮುಂದಾದರು. ಈ ಬೆನ್ನಲ್ಲೇ ಪುರುಷ ಅಭ್ಯರ್ಥಿಗಳೂ ಉನ್ನತ ಶಿಕ್ಷಣವನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *