ಕೌಲಾಲಂಪುರ: ದಿನದಲ್ಲಿ ಹೆಚ್ಚು ಸಮಯವನ್ನು ವಿಡಿಯೋ ಗೇಮ್ ಆಡುವುದರಲ್ಲಿ ಕಳೆಯುತ್ತಿರುವ ಹಿನ್ನೆಲೆಯಲ್ಲಿ ಮಧ್ಯಾಹ್ನ 12 ರಿಂದ ಬೆಳಗ್ಗೆ 6 ಗಂಟೆಯವರೆಗೆ ಮಕ್ಕಳ ಇಂಟರ್ನೆಟ್ ಬಳಕೆಗೆ ನಿಷೇಧ ಹೇರಲು ಮಲೇಷ್ಯಾ ಸರ್ಕಾರ ಸಿದ್ಧತೆ ನಡೆಸಿದೆ.
ಉತ್ತರ ಕೊರಿಯಾ ಹಾಗೂ ಜಪಾನ್ ಮಾದರಿಯನ್ನು ಅಳವಡಿಸಿಕೊಳ್ಳಲು ಮಲೇಷ್ಯಾ ಸರ್ಕಾರ ಮುಂದಾಗಿದೆ. ಈ ಕುರಿತು ಸೋಮವಾರ ಸಂಸತ್ ಕಲಾಪದಲ್ಲಿ ಉಪ ಆರೋಗ್ಯ ಸಚಿವ ಡಾ.ಲೀ ಬೂನ್ ಚೈ ಇಂಟರ್ ನೆಟ್ ನಿಷೇಧ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದಾರೆ.
ಹೆಚ್ಚು ಇಂಟರ್ ನೆಟ್ ಬಳಕೆ ಮಕ್ಕಳ ಮಾನಸಿಕ ಆರೋಗ್ಯವನ್ನು ಹಾಳು ಮಾಡುತ್ತಿದ್ದು, ಯುವಜನರ ಆರೋಗ್ಯದ ದೃಷ್ಟಿಯಿಂದ ಇಂಟರ್ನೆಟ್ ನಿಷೇಧಕ್ಕೆ ಮುಂದಾಗಿರುವುದಾಗಿ ತಿಳಿಸಿದರು.
ಆರೋಗ್ಯ ಮತ್ತು ಅಸ್ವಸ್ಥತೆ ಅಧ್ಯಯನದ ಪ್ರಕಾರ, ಕಳೆದ ವರ್ಷ ಮಲೇಷ್ಯಾದ 13 ರಿಂದ 17 ವರ್ಷದ ಮಕ್ಕಳಲ್ಲಿ ಶೇಕಡಾ 34.9 ರಷ್ಟು ಮಕ್ಕಳು ಇಂಟರ್ ನೆಂಟ್ ಬಳಕೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಅವರು ಒಂದು ದಿನದಲ್ಲಿ 4 ಗಂಟೆಗಳ ಕಾಲವನ್ನು ಅದಕ್ಕಾಗಿಯೇ ಮೀಸಲಿಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಅಧ್ಯಯನವೊಂದರ ಪ್ರಕಾರ ಮಲೇಶಿಯಾದ ಶೇಕಡಾ 80 ರಷ್ಟು ಜನ ಇಂಟರ್ನೆಟ್ ಬಳಕೆ ಮಾಡುತ್ತಿದ್ದು, ಸರಾಸರಿ ದಿನದ 4 ಗಂಟೆಯನ್ನು ಅದಕ್ಕಾಗಿಯೇ ಕಳೆಯುತ್ತಿದ್ದಾರೆ. ಇದು ಅವರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಡಾ.ಲೀ ಬೂನ್ ಚೈ ವಿವರಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

Leave a Reply