ದಾರಿ ತಪ್ಪಿದ ಸಂಸದ ಡಿಕೆ ಸುರೇಶ್‌: ಸುರೇಶ್‌ ಕುಮಾರ್‌ ತಿರುಗೇಟು

ಬೆಂಗಳೂರು: ರಾಜ್ಯ ಸರ್ಕಾರವನ್ನು ಟೀಕಿಸುವ ಭರದಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಸುರೇಶ್‌ ಕುಮಾರ್‌ ಎಡವಟ್ಟು ಮಾಡಿಕೊಂಡಿದ್ದಾರೆ.

ರಾಜ್ಯದ ತರಗತಿಯೊಂದರ  ಪುಸ್ತಕದಲ್ಲಿ ʼಅಂಚೆಯಣ್ಣʼ ಎಂಬ ಶೀರ್ಷಿಕೆಗೆ ಮಲೆಯಾಳಂ ಚಲನಚಿತ್ರ ನಟರ ಫೋಟೋ ಹಾಕಿರುವುದನ್ನು ಬಿಜೆಪಿ ಸರ್ಕಾರದ ಕಾರ್ಯ ಎಂದು ಬಣ್ಣಿಸಿ ಇದು ಯಾರ ನಿರ್ದೇಶನದಲ್ಲಿ ಮಾಡಿರುವುದು ಎಂದು ಕೇಳಿರುವ ಸಂಸದ ಡಿ.ಕೆ.ಸುರೇಶ್ ಅವರ ಅವಸರದ  ಆರೋಪದಲ್ಲಿ ಯಾವುದೇ ಸತ್ಯವಿಲ್ಲ ಎಂದು ಮಾಜಿ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.

ಡಿಕೆ ಸುರೇಶ್ ರವರೇ, ಅಷ್ಟು ಧಾವಂತ ಬೇಡ. ಅವಸರ ವಿವೇಚನೆ ಕಸಿದುಕೊಳ್ಳುತ್ತದೆ. ನಿಮ್ಮ ಗ್ರಹಿಕೆ ಸಂಪೂರ್ಣವಾಗಿ ತಪ್ಪು.ಇದು ಖಂಡಿತ ನಮ್ಮ ರಾಜ್ಯದ  ಶಿಕ್ಷಣ ಇಲಾಖೆ ಪ್ರಕಟಿಸಿರುವ ಅಧಿಕೃತ ಪಠ್ಯ ಪುಸ್ತಕವಲ್ಲ. ಇದೊಂದು ಖಾಸಗಿ ಪ್ರಕಾಶಿತ ಪುಸ್ತಕ. ರಾಜ್ಯ ಪಠ್ಯಕ್ರಮಕ್ಕೆ ಯಾವುದೇ ಸಂಬಂಧವಿಲ್ಲದ‌, ಯಾವುದೋ ಖಾಸಗಿ ಸಂಸ್ಥೆಯವರು  ಮುದ್ರಿಸಿದ ಪುಸ್ತಕವೊಂದರಲ್ಲಿ ಮಲೆಯಾಳಿ ನಟನ ಭಾವಚಿತ್ರವನ್ನು ತೋರಿಸಿ ಅದನ್ನೂ ಸಹ  ಬಿಜೆಪಿ ಸರ್ಕಾರದ ಶಾಲಾ ಪಠ್ಯದ ಕೇಸರೀಕರಣ ವೆಂದು ಬಣ್ಣಿಸುವ ನಿಮ್ಮ ಪ್ರಯತ್ನಕ್ಕೆ‌ ಅರ್ಥವಿಲ್ಲ. ದಾರಿ ತಪ್ಪಿಸುವ ಕೆಲಸವೆಂದರೆ‌ ಇದೇ ಇರಬೇಕು. ಅಥವಾ ನೀವೇ ದಾರಿ ತಪ್ಪಿರಬೇಕು ಎಂದು ಟೀಕಿಸಿದ್ದಾರೆ.

ಡಿಕೆ ಸುರೇಶ್‌ ಹೇಳಿದ್ದೇನು?
ಶಾಲಾ ಪಠ್ಯಪುಸ್ತಕದಲ್ಲಿ ಮಲೆಯಾಳಿ ಚಿತ್ರ ನಟ ಕುಂಚಾಕೋ ಬಾಬನ್ ಅವರ ಚಿತ್ರವನ್ನು ಅಂಚೆಯಣ್ಣನ ಶೀರ್ಷಿಕೆ ಜತೆ ಪ್ರಕಟಿಸಿದ್ದಕ್ಕೆ ಸಂಸದ ಡಿಕೆ ಸುರೇಶ್‌ ಆಕ್ರೋಶ ವ್ಯಕ್ತಪಡಿಸಿದ್ದರು.

ಅಂದಹಾಗೆ ಶಾಲಾ ಪಠ್ಯಕ್ರಮದಲ್ಲಿರುವ ಚಿತ್ರಗಳನ್ನು ಮತ್ತು ಪಠ್ಯಗಳನ್ನು ಶಿಕ್ಷಣ ಇಲಾಖೆಯಲ್ಲಿ ಸಿದ್ದಪಡಿಸಲಾಗುತ್ತಿದೆಯೋ ಅಥವಾ ಕೇಶವಕೃಪದಲ್ಲೋ ಎಂಬುದನ್ನು ಬಿಸಿ ನಾಗೇಶ್‌ ಮತ್ತು ಸುರೇಶ್‌ ಕುಮಾರ್‌ ಸ್ಪಷ್ಟಪಡಿಸಬೇಕು. ಈ ಮೂಲಕ ಬಿಜೆಪಿ ಅವ್ಯವಸ್ಥೆಯಿಂದ ಇಡೀ ದೇಶದ ಎದುರು ರಾಜ್ಯ ತಲೆತಗ್ಗಿಸುವಂತಾಗಿದೆ.

 

View this post on Instagram

 

A post shared by Kunchacko Boban (@kunchacks)


ಬಿಜೆಪಿ ಆಡಳಿತದ ಶಾಲಾ ಪಠ್ಯಕ್ರಮದಲ್ಲಿ ಶಿಕ್ಷಣದ ಗುಣಮಟ್ಟ ಸಂಪೂರ್ಣವಾಗಿ ಕುಸಿಯುತ್ತಿದೆ. ವಿದ್ಯಾರ್ಥಿಗಳು ಈಗಾಗಲೇ ಕಡಿಮೆ ಪಠ್ಯಕ್ರಮಗಳನ್ನು ಹೊಂದಿದ್ದಾರೆ. ಜೊತೆಗೆ ಬೋಧನೆಗೆ ಸಂಬಂಧಿಸಿದಂತೆ ಸರ್ಕಾರದ ಮೇಲ್ವಿಚಾರಣೆ ಕೂಡಾ ಇಲ್ಲ. ಸದ್ಯದ ಪಠ್ಯಪುಸ್ತಕದಲ್ಲಿನ ಚಿತ್ರಗಳು ಸಮಿತಿಯಿಂದ ಸಂಶೋಧಿಸದೇ ಅಂತರ್ಜಾಲದಲ್ಲಿ ತಗೆದ ಚಿತ್ರಗಳಾಗಿವೆ.

ತಮ್ಮ ಚಿತ್ರ ಇರುವ ಪಠ್ಯ ಪುಸ್ತಕದ ಪುಟವನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿರುವ ನಟ ಬಾಬನ್‌, ‘ಕೊನೆಗೂ ನನಗೆ ಸರ್ಕಾರಿ ಕೆಲಸ ಸಿಕ್ಕಿತು’ ಎಂದು ವ್ಯಂಗ್ಯವಾಡಿದ್ದರು.

Comments

Leave a Reply

Your email address will not be published. Required fields are marked *