ಸಾವಿರಾರು ದೇವಸ್ಥಾನಗಳನ್ನು ಒಡೆದು ಮಸೀದಿ ಕಟ್ಟಿರುವುದು ವಾಸ್ತವ – ಟಿಪ್ಪು ಸುಲ್ತಾನ್ ನಿಜ ಬಣ್ಣ ಬಯಲಾಗುತ್ತಿದೆ: ಸಿ.ಟಿ ರವಿ

ನವದೆಹಲಿ: ಸಾವಿರಾರು ದೇವಸ್ಥಾನಗಳನ್ನು ಒಡೆದು ಮಸೀದಿ ಕಟ್ಟಿರುವುದು ವಾಸ್ತವ ಸತ್ಯ. ನಾನು ಈಗಲೂ ಸವಾಲು ಹಾಕುತ್ತೇನೆ, ಶ್ರೀರಂಗಪಟ್ಟಣ ಜಾಮೀಯ ಮಸೀದಿಯ ಬಗ್ಗೆ ಅಧ್ಯಯನ ನಡೆಸಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಕಿಡಿಕಾರಿದ್ದಾರೆ.

ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಂಗಳೂರಿನ ಮಳಲಿ ಮಸೀದಿಯಂತೆ ಸಾವಿರಾರು ದೇವಸ್ಥಾನಗಳನ್ನು ಒಡೆದು ಮಸೀದಿ ಕಟ್ಟಿರುವುದು ವಾಸ್ತವ ಸತ್ಯ. ನಾನು ಈಗಲೂ ಸವಾಲು ಹಾಕುತ್ತೇನೆ, ಶ್ರೀರಂಗಪಟ್ಟಣ ಜಾಮೀಯ ಮಸೀದಿಯ ಬಗ್ಗೆ ಅಧ್ಯಯನ ನಡೆಸಲಿ. ಪುರಾತತ್ವ ಇಲಾಖೆಯಿಂದ ಅಧ್ಯಯನ ಮಾಡಿಸಲಿ. ಇದೀಗ ಟಿಪ್ಪು ಸುಲ್ತಾನ್ ನಿಜ ಬಣ್ಣ ಬಯಲಾಗುತ್ತಿದೆ. ಈ ನೆಲದ ಕಾನೂನು ಅಂತಿಮ. ಆದರೆ ತಾಂಬೂಲ ಪ್ರಶ್ನೆ ನಂಬಿಕೆ ಇರುವವರು ಕೇಳಿದ್ದಾರೆ. ನಂಬಿಕೆ ಪ್ರಶ್ನೆ ಮಾಡಲು ಸಾಧ್ಯವಿಲ್ಲ. ಅಂತಿಮವಾಗಿ ಕಾನೂನು ಅಡಿಯಲ್ಲಿ ವಿವಾದ ಇತ್ಯರ್ಥವಾಗಲಿದೆ. ಕೆಲವರು ಹಿಡಿಯಾಗಿ ಸಿಗುವ ವೋಟಿಗಾಗಿ ಜೊಲ್ಲು ಸುರಿಸಿಕೊಂಡು ಹೋಗ್ತಾರೆ. ಸತ್ಯ ಗೊತ್ತಿದ್ದರೂ ವೋಟಿಗಾಗಿ ರಾಜಕೀಯ ಮಾಡುತ್ತಾರೆ. ನಾವು ವೋಟಿಗಾಗಿ ರಾಜಕೀಯ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಮಳಲಿಯಲ್ಲಿರುವುದು ದರ್ಗಾವಲ್ಲ, ಶಿವ ಸಾನಿಧ್ಯ- ತಾಂಬೂಲ ಪ್ರಶ್ನೆ ಸುಳಿವು

ಬಿ.ವೈ ವಿಜಯೇಂದ್ರಗೆ ಪರಿಷತ್ ಟಿಕೆಟ್ ಮಿಸ್ ಕುರಿತಾಗಿ ಪ್ರತಿಕ್ರಿಯೆ ನೀಡಿ, ವಿಜಯೇಂದ್ರ ನಮ್ಮ ಪಕ್ಷದ ಯುವ ನಾಯಕ. ಬೆಳೆಯುತ್ತಿರುವ ನಾಯಕ ಹೀಗಾಗಿ ಉಪಾಧ್ಯಕ್ಷ ಸ್ಥಾನ ನೀಡಿದೆ. ಎರಡು ಮೂರು ಕ್ಷೇತ್ರಗಳಲ್ಲಿ ನಿಂತು ಗೆಲ್ಲುವ ಸಾಮರ್ಥ್ಯ ಇರುವ ನಾಯಕ. ವಿಜಯೇಂದ್ರ ಜೊತೆಗೆ ನಿನ್ನೆ ಮಾತನಾಡಿದ್ದೇನೆ. ನಾಲ್ಕು ತಲೆ ಮಾರು ಇದೇ ವಿಚಾರಗಳ ಮೇಲೆ ಹೋರಾಟ ಮಾಡಿದ್ದೇವೆ ಎಂದರು. ಇದನ್ನೂ ಓದಿ: ಮೈಕ್ ವಾರ್ ಗಡುವು ಇಂದು ಅಂತ್ಯ- ಅವಧಿ ವಿಸ್ತರಣೆಗೆ ಮುಸ್ಲಿಂ ಮುಖಂಡರ ಆಗ್ರಹ

ಪಠ್ಯದಿಂದ ಸಾಹಿತಿಗಳ ಬರಹ ಹಿಂಪಡೆಯುವ ವಿಚಾರವಾಗಿ ಮಾತನಾಡಿ, ದೇವನೂರು ಮಹಾದೇವ ಪಠ್ಯ ಬೇಕೆ ಬೇಕು ಎಂಬ ಒತ್ತಾಯವಿಲ್ಲ. ಬೇಡ ಎನ್ನುವ ಅವರ ಅಭಿಪ್ರಾಯವನ್ನು ಸಮಿತಿ ಗೌರವಿಸವೇಕು. ಪೂರ್ವಾಗ್ರಹ ಪೀಡಿತ ಮನಸ್ಸುಗಳು ಹೀಗೆ ಮಾಡುತ್ತಿವೆ. ಕಂಟೆಂಟ್ ಮೇಲೆ ಕಾಮೆಂಟ್ ಮಾಡಬೇಕು. ಪಠ್ಯ ಬರುವುದಕ್ಕೆ ಮುಂಚೆ ಜನಿವಾರವೋ, ಉಡುದಾರವೋ ಎಂದು ನೋಡುವುದು ತಪ್ಪು. ಜಾತಿಗಳನ್ನು ಎತ್ತಿಕಟ್ಟುವ ಹುನ್ನಾರ ನಡೆಯುತ್ತಿದೆ. ಮೊಘಲರನ್ನು ವೈಭವೀಕರಣ ಮಾಡುವ ಕೆಲಸ ಮಾಡಿದ್ರು. ಶಿವಾಜಿಯ ವಿಷಯನ್ನು ಹೆಚ್ಚು ಹೇಳಲಿಲ್ಲ. ಭಾರತೀಯತೆಯನ್ನು ಎತ್ತಿಹಿಡಿಯುವ ಕೆಲಸ ಮಾಡಿರಲಿಲ್ಲ. 70 ವರ್ಷದ ಆಡಳಿತಕ್ಕೆ ಪೆಟ್ಟು ಬಿದಿದ್ದೆ, ಹೀಗಾಗಿ ವಿಲ ವಿಲ ಎಂದು ಒದ್ದಾಡುತ್ತಿದ್ದಾರೆ. ಕೆಲವರು ಮೊಘಲ್ ಆಸ್ಥಾನದಲ್ಲಿದ್ದೇವೆ ಎಂಬ ಮನಸ್ಥಿತಿಯಲ್ಲಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ವಿಲ ವಿಲ ಎಂದು ಒದ್ದಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

Comments

Leave a Reply

Your email address will not be published. Required fields are marked *