ಮಳಲಿ ದರ್ಗಾ ವಕ್ಫ್ ಆಸ್ತಿ ವಿಚಾರಣೆ ನಡೆಸುವಂತಿಲ್ಲ- ಮಂಗಳೂರು ಕೋರ್ಟಿನಲ್ಲಿ ಹೀಗೊಂದು ವಾದ

ಮಂಗಳೂರು: ಮಳಲಿ ಮಸೀದಿ ವಿವಾದ ಕುರಿತ ಅರ್ಜಿ ವಿಚಾರಣೆಯನ್ನು ಮಂಗಳೂರು ಕೋರ್ಟ್ ಜೂನ್ 6ಕ್ಕೆ ಮುಂದೂಡಿದೆ.

ಇಂದಿನ ವಿಚಾರಣೆ ವೇಳೆ ವಾದ ಮಂಡಿಸಿದ ವಿಹೆಚ್‍ಪಿ ಪರ ವಕೀಲರು, ಇಸ್ಲಾಂ ಪ್ರಕಾರ ಎಲ್ಲಿ ಬೇಕಿದ್ರೂ ನಮಾಜ್ ಮಾಡಬಹುದು. ಮಳಲಿ ಮಸೀದಿಯ ವೀಡಿಯೋ ಸಮೀಕ್ಷೆಗೆ ಕೋರ್ಟ್ ಆದೇಶ ನೀಡಬೇಕು ಎಂದು ನ್ಯಾಯಾಧೀಶರನ್ನು ಕೋರಿದ್ರು. ಆದರೆ ಮಸೀದಿ ಪರ ವಕೀಲರು ಇದಕ್ಕೆ ಆಕ್ಷೇಪಿಸಿದ್ರು. ಇದು ದರ್ಗಾ ಅನ್ನೋದ್ರಲ್ಲಿ ಯಾವ ಸಂದೇಹವೂ ಇಲ್ಲ. ಇದಕ್ಕೂ ಜ್ಞಾನವಾಪಿಗೂ ಹೋಲಿಕೆ ಸರಿಯಲ್ಲ. ಇದು ವಕ್ಫ್ ಬೋರ್ಡ್ ಜಮೀನು ಆಗಿರುವ ಕಾರಣ ಕೋರ್ಟ್‍ಗೆ ಈ ವಿಚಾರಣೆ ನಡೆಸುವ ಅಧಿಕಾರ ಇಲ್ಲ. ಹಿಂದೂಗಳ ಅರ್ಜಿಯನ್ನು ಪರಿಗಣಿಸಬಾರದು ಎಂದು ವಾದ ಮಂಡಿಸಿದ್ರು.

ಅತ್ತ ಜೂನ್ ನಾಲ್ಕರಂದು ಹಿಂದೂ ಸಂಘಟನೆಗಳು ಚಲೋ ಶ್ರೀರಂಗಪಟ್ಟಣಕ್ಕೆ ಕರೆ ನೀಡಿವೆ. ಸಾವಿರಾರು ಮಂದಿ ಹನುಮ ಭಕ್ತರು ಪಾಲ್ಗೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಜೂನ್ 3, 4 ರಂದು ಜಾಮಿಯಾ ಮಸೀದಿ ಸುತ್ತಮುತ್ತ ನಿಷೇಧಾಜ್ಞೆ ಜಾರಿ ಮಾಡಲು ಜಿಲ್ಲಾಡಳಿತ ಚಿಂತನೆ ನಡೆಸಿದೆ. ಬೆಳಗಾವಿಯ ಬಾಪಟ್‍ಗಲ್ಲಿ ಮಸೀದಿ ಈ ಹಿಂದೆ ದೇಗುಲವಾಗಿತ್ತು ಎಂದಿದ್ದ ಶಾಸಕ ಅಭಯ್ ಪಾಟೀಲ್ ವಿರುದ್ಧ ಮುಸ್ಲಿಮರು ಸಿಡಿದಿದ್ದಾರೆ. ಇದನ್ನೂ ಓದಿ:  ದಯವಿಟ್ಟು ನನ್ನ ಹೆಂಡತಿಯನ್ನು ನನಗೆ ಕೊಡಿ- ಕಣ್ಣೀರು ಹಾಕಿದ ವರ

2011ರಲ್ಲಿ ಅಭಯ್ ಪಾಟೀಲ್ ಬೆಳಗಾವಿಯಲ್ಲಿ ಸಾಯಿ ಮಂದಿರ ತೆರವುಗೊಳಿಸಿದ್ದ ಬಗ್ಗೆ ಉತ್ತರಿಸಬೇಕು ಎಂದು ಆಗ್ರಹಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿದ ಅಭಯ್ ಪಾಟೀಲ್, ಅಲ್ಲಿಯ ಜನರ ಮನವೊಲಿಸಿ ಸಾಯಿ ಮಂದಿರ ತೆರವು ಮಾಡಲಾಗಿದೆ. ಇದು ವಿವಾದವೇ ಅಲ್ಲ ಎಂದಿದ್ದಾರೆ.

Comments

Leave a Reply

Your email address will not be published. Required fields are marked *