ಹಿಜಬ್, ಶಿಕ್ಷಣ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವಂತೆ ಕಾಲೇಜು ಬಲವಂತ ಮಾಡುತ್ತಿದೆ: ಮಲಾಲಾ ಯೂಸುಫ್

ನವದೆಹಲಿ: ಹಿಜಬ್, ಶಿಕ್ಷಣ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವಂತೆ ಕಾಲೇಜು ಬಲವಂತ ಮಾಡುತ್ತಿದೆ. ಕ್ಲಾಸ್ ಒಳಗೆ ಬಿಡದೆ ಇರುವುದು ನಿಜಕ್ಕೂ ಭಯಾನಕವಾಗಿದೆ. ಹೆಣ್ಣು ಮಕ್ಕಳ ಶಿಕ್ಷಣ ಹೋರಾಟಗಾರ್ತಿ, ನೊಬೆಲ್ ಪ್ರಶಸ್ತಿ ಪುರಸ್ಕೃತೆ ಪಾಕಿಸ್ತಾನದ ಮಲಾಲಾ ಯೂಸುಫ್ ಝಾಯಿ ಕರ್ನಾಟಕದ ಹಿಜಾಬ್ ವಿವಾದದ ಬಗ್ಗೆ ಮಾತನಾಡಿದ್ದಾರೆ.

ಟ್ವೀಟ್‍ನಲ್ಲಿ ಏನಿದೆ?: ಹಿಜಾಬ್​ ಅಥವಾ ಶಿಕ್ಷಣ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವಂತೆ ಕಾಲೇಜು ಬಲವಂತ ಮಾಡುತ್ತಿದೆ. ಹಿಜಾಬ್ ಧರಿಸಿಬಂದಿದ್ದಾರೆ ಎಂಬ ಕಾರಣಕ್ಕೆ ಹೆಣ್ಣುಮಕ್ಕಳನ್ನು ಕ್ಲಾಸ್​ ಒಳಗೆ ಬಿಡದೆ ಇರುವುದು ನಿಜಕ್ಕೂ ಭಯಾನಕ. ಹುಡುಗಿಯರು ಹೆಚ್ಚು ಬಟ್ಟೆ ಧರಿಸುವುದಕ್ಕೆ ಮತ್ತು ಕಡಿಮೆ ಬಟ್ಟೆ ಧರಿಸುವುದಕ್ಕೆ ಆಕ್ಷೇಪಣೆ ವ್ಯಕ್ತಪಡಿಸುವುದು ಯಾವಾಗಿನಿಂದಲೂ ಇದ್ದೇಇದೆ. ಆದರೆ ಹಿಜಾಬ್​​ ಧರಿಸಿ ಬರುತ್ತಾರೆಂದು ಮುಸ್ಲಿಂ ಮಹಿಳೆಯರನ್ನು ತುಚ್ಛವಾಗಿ ಕಾಣಬಾರದು ಎಂದು ಹೇಳಿದ್ದಾರೆ. ಇದನ್ನೂ ಓದಿ: UPಯಲ್ಲಿ ಲವ್ ಜಿಹಾದ್‍ಗೆ 10 ವರ್ಷ ಜೈಲು, 1 ಲಕ್ಷ ದಂಡ

ಕರ್ನಾಟಕದಲ್ಲಿ ಹಿಜಬ್ ಧರಿಸಿ ಕಾಲೇಜು ಕ್ಯಾಂಪಸ್ ಒಳಗೆ, ಕ್ಲಾಸ್‍ರೂಮ್‍ನೊಳಗೆ ಬರಬೇಡಿ ಎಂದು ಹೇಳಿದ್ದಕ್ಕೆ ಮುಸ್ಲಿಂ ಹುಡುಗಿಯರು ಪ್ರತಿಭಟನೆ ಶುರುವಿಟ್ಟುಕೊಂಡಿದ್ದಾರೆ. ಅದಕ್ಕೆ ಪ್ರತಿಯಾಗಿ ಹಿಂದೂ ಸಮುದಾಯದವರು ಕೇಸರಿಶಾಲು ಹಾಕಿಕೊಂಡು ಬರುತ್ತಿದ್ದಾರೆ. ಅವರು ಕ್ಲಾಸ್‌ರೂಮ್‌ನಲ್ಲಿ ಧರ್ಮಾಚರಣೆ ಮಾಡುತ್ತಾರೆ ಎಂದಾದರೆ, ನಾವೂ ನಮ್ಮ ಧರ್ಮಾಚರಣೆ ಮಾಡುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ. ಒಟ್ಟಿನಲ್ಲಿ ಇದೀಗ ರಾಷ್ಟ್ರ-ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಹಿಜಾಬ್-ಕೇಸರಿಶಾಲು ವಿವಾದ ತಾರಕಕ್ಕೇರಿದ ಪರಿಣಾಮ ಕರ್ನಾಟಕದಲ್ಲಿ ಇಂದಿನಿಂದ ಮೂರು ದಿನ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

Comments

Leave a Reply

Your email address will not be published. Required fields are marked *