ಕೇವಲ 3 ಪದಾರ್ಥಗಳನ್ನು ಬಳಸಿ ನೀವು ಕೂಡಾ ಕುಕೀಸ್ ಮಾಡಬಹುದು ಎಂಬುದು ನಿಮಗೆ ಗೊತ್ತಾ? ಟೀ ಟೈಮ್‌ನಲ್ಲಿ ಸವಿಯಲು ಪರ್ಫೆಕ್ ಆದ ಪೀನಟ್ ಬಟರ್ ಕುಕೀಸ್ ಎಷ್ಟು ರುಚಿಕರವೋ ಮಾಡುವುದು ಕೂಡಾ ಅಷ್ಟೇ ಸುಲಭ. ಕೇವಲ ಅರ್ಧ ಗಂಟೆಯಲ್ಲಿ ಮಾಡಬಹುದಾದ ಪೀನಟ್ ಬಟರ್ ಕುಕೀಸ್ ರೆಸಿಪಿ ನೋಡಿ ನೀವು ಕೂಡಾ ಮನೆಯಲ್ಲಿ ಒಮ್ಮೆ ಟ್ರೈ ಮಾಡಿ.

ಬೇಕಾಗುವ ಪದಾರ್ಥಗಳು:
ಪೀನಟ್ ಬಟರ್ – 1 ಕಪ್
ಸಕ್ಕರೆ ಪುಡಿ – ಅರ್ಧ ಕಪ್(ರೋಲಿಂಗ್‌ಗೆ ಇನ್ನಷ್ಟು ಬೇಕಾಗಬಹುದು)
ಮೊಟ್ಟೆ – 1

ಮಾಡುವ ವಿಧಾನ:
* ಓವನ್ ಅನ್ನು ಮೊದಲೇ 350 ಡಿಗ್ರಿಯಲ್ಲಿ ಕಾಯಿಸಿ. ಬೇಕಿಂಗ್ ಶೀಟ್ ಅನ್ನು ಟ್ರೇಗೆ ಜೋಡಿಸಿ ಪಕ್ಕಕ್ಕಿಡಿ.
* ಒಂದು ಪಾತ್ರೆ ತೆಗೆದುಕೊಂಡು ಅದಕ್ಕೆ ಪೀನಟ್ ಬಟರ್, ಸಕ್ಕರೆ ಪುಡಿ ಹಾಗೂ ಮೊಟ್ಟೆ ಒಡೆದು ಹಾಕಿ, ಚೆನ್ನಾಗಿ ಮಿಶ್ರಣ ಮಾಡಿ.
* ಹಿಟ್ಟು ಸ್ವಲ್ಪ ಗಟ್ಟಿಯಾಗಬೇಕು ಎನಿಸಿದರೆ, 10-20 ನಿಮಿಷಗಳ ಕಾಲ ಫ್ರಿಡ್ಜ್ನಲ್ಲಿಡಬಹುದು.
* ಬಳಿಕ ಹಿಟ್ಟನ್ನು ಸಣ್ಣನೆಯ ಉಂಡೆಗಳಾಗಿ ಮಾಡಿ, ಸಕ್ಕರೆ ಪುಡಿಯಲ್ಲಿ ಅದ್ದಿ, ಕುಕೀಸ್ ಶೇಪ್‌ನಲ್ಲಿ ರೋಲ್ ಮಾಡಿ. ಬೇಕೆಂದರೆ ಫೋರ್ಕ್ ಬಳಸಿ ಅವುಗಳ ಮೇಲೆ ವಿನ್ಯಾಸ ರಚಿಸಬಹುದು.
* ಬಳಿಕ ಅವುಗಳನ್ನು ಟ್ರೇಗೆ ಜೋಡಿಸಿದ ಬೇಕಿಂಗ್ ಶೀಟ್‌ನಲ್ಲಿಟ್ಟು, ಓವನ್‌ನಲ್ಲಿ ಬೇಯಿಸಿ.
* 8-10 ನಿಮಿಷಗಳ ಬಳಿಕ ಕುಕೀಸ್ ತಳಭಾಗ ಸ್ವಲ್ಪ ಕಂದು ಬಣ್ಣಕ್ಕೆ ತಿರುಗುತ್ತದೆ. ಬಳಿಕ ಅದನ್ನು ಓವನ್‌ನಿಂದ ತೆಗೆದು 2 ನಿಮಿಷಗಳ ಕಾಲ ಆರಲು ಬಿಡಿ.
* ಪೀನಟ್ ಬಟರ್ ಕುಕೀಸ್ ಇದೀಗ ತಯಾರಾಗಿದ್ದು, ಟೀ ಯೊಂದಿಗೆ ಸವಿಯಿರಿ.

Leave a Reply