ಮೇಜರ್ ಆದಿತ್ಯ ಕುಮಾರ್, ರೈಫಲ್‍ಮ್ಯಾನ್ ಔರಂಗಜೇಬ್‍ಗೆ ಶೌರ್ಯ ಚಕ್ರ ಪುರಸ್ಕಾರ

ನವದೆಹಲಿ: ಬುಧವಾರ ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮ ಭಾಗವಾಗಿ ನೀಡುವ ಮರಣೋತ್ತರ ಶೌರ್ಯ ಪ್ರಶಸ್ತಿಯ ಗೌರವಕ್ಕೆ ಮೇಜರ್ ಆದಿತ್ಯ ಕುಮಾರ್, ರೈಫಲ್‍ಮ್ಯಾನ್ ಔರಂಗಜೇಬ್ ಪಾತ್ರರಾಗಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಸೇವೆಗೆ ನಿಯೋಜನೆಗೊಂಡು ಅಪ್ರತಿಮ ಸಾಧನೆ ತೋರಿದ ಹಿನ್ನೆಲೆಯಲ್ಲಿ ಇವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಜನವರಿ 27 ರಂದು ನಡೆದ ಕಲ್ಲು ತೂರಾಟ ಘಟನೆಯಲ್ಲಿ ಮೂವರು ನಾಗರಿಕರು ಸಾವನ್ನಪ್ಪಿದ್ದರು. ಈ ವೇಳೆ ಮೇಜರ್ ಆದಿತ್ಯನಾಥ್ ಅವರು ಆರೋಪ ಎದುರಿಸಿದ್ದರು. ಬಳಿಕ ಅವರ ಹೆಸರು ಎಫ್‍ಐಆರ್ ನಲ್ಲಿ ಇಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿತ್ತು.

ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ರೈಫಲ್ ಮ್ಯಾನ್ ಔರಂಗಜೇಬ್‍ರನ್ನು ಉಗ್ರರು ಅಪರಹಣ ಮಾಡಿ ಹತ್ಯೆ ಮಾಡಿದ್ದರು. ರಂಜಾನ್ ಹಬ್ಬಕ್ಕೆ ರಜೆಗೆ ತೆರಳಿದ್ದ ವೇಳೆ ಔರಂಗಜೇಬ್‍ರನ್ನು ಅಪರಹಣ ಮಾಡಲಾಗಿತ್ತು.

ಔರಂಗಜೇಬ್ ಅವರು ಲೈಟ್ ಇನ್‍ಫ್ಯಾಂಟ್ರಿನ್ ನಾಲ್ಕನೇ ಪಡೆಗೆ ಸೇರಿದ್ದರು. ಈ ಪಡೆಯನ್ನು ಕಾಶ್ಮೀರದ ಶೋಪಿಯಾನ್ ಶಾದಿಮಾರ್ಗ್ ನಲ್ಲಿ ನೀಯೋಜಿಸಲಾಗಿತ್ತು. ಅಲ್ಲದೇ ಈ ಪಡೆಯಲ್ಲಿ ಮೇಜರ್ ರೋಹಿತ್ ಶುಕ್ಲಾ ಇದ್ದು, ಹಿಜ್ಜುಲ್ ಮಜಾಹಿದೀನ್ ಉಗ್ರ ಸಮೀರ್ ಟೈಗರ್ ನನ್ನು ಎನ್‍ಕೌಂಟರ್ ಮಾಡಿತ್ತು. ಈ ದಾಳಿಯ ಪ್ರತಿಕಾರವಾಗಿಯೇ ಅಪಾರ ಶಸ್ತ್ರ ಹೊಂದಿದ್ದ ಉಗ್ರ ತಂಡ ಔರಂಗಬೇಜ್‍ರನ್ನು ಅಪಹರಣ ಮಾಡಿ ಚಿತ್ರಹಿಂಸೆ ನೀಡಿ ಹತ್ಯೆ ಮಾಡಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *