ಮುಂಬೈ: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಟೆಸ್ಟ್ ಪಂದ್ಯಾಟದಲ್ಲಿ ಪದೆ ಪದೇ ಅಂಪೈರ್ ಎಡವಟ್ಟನ್ನು ಕಂಡು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ನೀವು ಇಲ್ಲಿಗೆ ಬಂದು ಫೀಲ್ಡಿಂಗ್ ಮಾಡಿ ನಾನು ಅಲ್ಲಿಗೆ ಬಂದು ಅಂಪೈರಿಂಗ್ ಮಾಡುತ್ತೇನೆ ಎಂದು ಕಾಲೆಳೆದಿದ್ದಾರೆ.

ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್ ಬೌಲರ್ ಅಜಾದ್ ಪಟೇಲ್ ಎಸೆತದಲ್ಲಿ ವಿರಾಟ್ ಕೊಹ್ಲಿ ಎಲ್‍ಬಿಡಬ್ಲ್ಯೂ ಬಲೆಗೆ ಬಿದ್ದರು. ಇದನ್ನು ಆನ್‍ಫೀಲ್ಡ್ ಅಂಪೈರ್ ಔಟ್ ಎಂದು ಘೋಷಿಸಿದರು. ಕೊಹ್ಲಿ ಡಿಆರ್‌ಎಸ್ ತೆಗೆದುಕೊಂಡರೂ ಕೂಡ ಮೂರನೇ ಅಂಪೈರ್ ಆನ್‍ಫೀಲ್ಡ್ ಅಂಪೈರ್ ತೀರ್ಮಾನವನ್ನು ಎತ್ತಿಹಿಡಿದು ಔಟ್ ಎಂದು ನಿರ್ಧಾರ ಪ್ರಕಟಿಸಿದರು. ಆದರೆ ಚೆಂಡು ಮೊದಲು ಬ್ಯಾಟ್‍ಗೆ ತಾಗಿ ನಂತರ ಪ್ಯಾಡ್‍ಗೆ ಬಡಿದಿತ್ತು. ಹಾಗಾಗಿ ಇದು ವಿವಾದಾತ್ಮಕ ತಿರುವು ಪಡೆದುಕೊಂಡಿತ್ತು. ಇದನ್ನೂ ಓದಿ: 372 ರನ್ ಗಳ ಭರ್ಜರಿ ಜಯ – ಸರಣಿ ಜಯಿಸಿದ ಭಾರತ

ಆ ಬಳಿಕ ನ್ಯೂಜಿಲೆಂಡ್ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಭಾರತದ ಬೌಲರ್ ಅಕ್ಷರ್ ಪಟೇಲ್ ಎಸೆತವನ್ನು ಎದುರಿದ ರಾಸ್ ಟೇಲರ್ ಬ್ಯಾಟ್ ತಾಗದೆ ಕೀಪರ್ ವೃದ್ಧಿಮಾನ್ ಸಹಾ ಅವರನ್ನು ತಪ್ಪಿಸಿ ಬಾಲ್ ಬೌಂಡರಿ ಸೇರಿತ್ತು. ಆಗ ಅಂಪೈರ್ ಬೈ ರನ್ ನೀಡುವ ಬದಲು ಟೇಲರ್ ಬ್ಯಾಟ್‍ಗೆ ಎಡ್ಜ್ ಮಾಡಿದ್ದಾರೆ ಎಂದು ಟೇಲರ್ಗೆ ರನ್ ನೀಡಿದರು. ಆಗ ಆಕ್ರೋಶಗೊಂಡ ಕೊಹ್ಲಿ ಅಂಪೈರ್‌ಗೆ ‘ಯೇ ಕ್ಯಾ ಕರ್ತೇ ಹೈಂ ಯಾರ್ ಯೇ ಲೋಗ್ ಯಾರ್.. ಮೇನ್ ಉಧರ್ ಆಜಾತಾ ಹು, ತುಮ್ ಇಧರ್ ಆಜಾವೋ (ಹೇ ನೀವು ಏನು ಮಾಡುತ್ತಿದ್ದೀರಿ. ನಾನು ಅಲ್ಲಿಗೆ ಬರುತ್ತೇನೆ ನೀವು ಇಲ್ಲಿಗೆ ಬನ್ನಿ) ಎಂದು ತಮಾಷೆಯಾಗಿ ತರಾಟೆಗೆ ತೆಗೆದುಕೊಂಡರು. ಈ ಆಡಿಯೋ ಸ್ಟಂಪ್ ಮೈಕ್‍ನಲ್ಲಿ ರೇಕಾರ್ಡ್ ಆಗಿದೆ. ಇದನ್ನೂ ಓದಿ: ತಂಡಕ್ಕೆ ಗೆಲುವಿನ ಶ್ರೇಯಸ್ಸು ದೊರೆಯಬೇಕು: ರಾಹುಲ್ ದ್ರಾವಿಡ್
https://twitter.com/SarimQh/status/1466806596529319939
ಈ ಎಲ್ಲದರ ನಡುವೆ ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ 372 ರನ್‍ಗಳ ಭರ್ಜರಿ ಜಯದೊಂದಿಗೆ 1-0 ಅಂತರದಲ್ಲಿ ಸರಣಿ ಕೈವಶ ಮಾಡಿಕೊಂಡಿದೆ.

Leave a Reply