Guntur Kaaram: ಮಹೇಶ್ ಬಾಬು ಆ್ಯಕ್ಷನ್, ಶ್ರೀಲೀಲಾ ಗ್ಲ್ಯಾಮರ್‌ ಟ್ರೈಲರ್‌ ಸೂಪರ್

ನ್ನಡದ ಬ್ಯೂಟಿ ಶ್ರೀಲೀಲಾ (Sreeleela) ಸದ್ಯ ತೆಲುಗಿನಲ್ಲಿ ಹವಾ ಕ್ರಿಯೆಟ್ ಮಾಡುತ್ತಿದ್ದಾರೆ. ‘ಗುಂಟೂರು ಖಾರಂ’ ಚಿತ್ರದ ಮೂಲಕ ಸಕ್ಸಸ್‌ಗಾಗಿ ಎದುರು ನೋಡ್ತಿದ್ದಾರೆ. ಮಹೇಶ್ ಬಾಬು (Mahesh Babu) ಆ್ಯಕ್ಷನ್, ಶ್ರೀಲೀಲಾ ಗ್ಲ್ಯಾಮರ್‌ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಗುಂಟೂರು ಖಾರಂ ಚಿತ್ರದ ಟ್ರೈಲರ್‌ ಪ್ರಿನ್ಸ್ ಅಭಿಮಾನಿಗಳು ಮೆಚ್ಚುಗೆಗೆ ಕಾರಣವಾಗಿದೆ.

ಪವರ್ ಪ್ಯಾಕ್ಡ್ ಟ್ರೈಲರ್‌ನಲ್ಲಿ ಮಹೇಶ್ ಬಾಬು ಸಖತ್ ಮಾಸ್ ಆಗಿ ಎನರ್ಜಿಟಿಕ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಪ್ರಕಾಶ್ ರಾಜ್, ರಮ್ಯಾ ಕೃಷ್ಣ (Ramya Krishna), ಜಯರಾಂ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಇದನ್ನೂ ಓದಿ:ರವಿ ಬಸ್ರೂರ್ ಪುತ್ರನ ಚಿತ್ರಕ್ಕೆ ಇಂಜಿನಿಯರ್ ಶಶಿಕಿರಣ್ ಡೈರೆಕ್ಟರ್

ಹೀರೋ ರಮಣ್ ಅಂದರೆ, ಮಹೇಶ್ ಬಾಬು ತಾಯಿ ಪಾತ್ರದಲ್ಲಿ ರಮ್ಯಾ ಕೃಷ್ಣ ನಟಿಸಿದ್ದಾರೆ. ರಾಜಕಾರಣಿ ಆಗಿ ಪ್ರಕಾಶ್‌ ರಾಜ್‌ ಅಭಿನಯಿಸಿದ್ದಾರೆ. ಲವ್, ರೊಮ್ಯಾನ್ಸ್, ತಾಯಿಯ ಸೆಂಟಿಮೆಂಟ್ ಹೊಂದಿರುವ ಕಥೆ ಇದಾಗಿದೆ.

ನಟಿ ಶ್ರೀಲೀಲಾ ಟ್ರೆಡಿಷನಲ್ ಮತ್ತು ವೆಸ್ಟರ್ನ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಮಹೇಶ್ ಬಾಬು- ಶ್ರೀಲೀಲಾ ಕೆಮಿಸ್ಟ್ರಿ ಟ್ರೈಲರ್‌ನಲ್ಲಿ ಮೋಡಿ ಮಾಡ್ತಿದೆ. ಅದರಲ್ಲೂ ಇಬ್ಬರ ಡ್ಯಾನ್ಸ್ ಮಸ್ತ್ ಆಗಿ ಮೂಡಿ ಬಂದಿದೆ. ಸಿನಿಮಾ ಇದೇ ಜನವರಿ 12ಕ್ಕೆ ರಿಲೀಸ್ ಆಗುತ್ತಿದೆ.

ಆದಿಕೇಶವ, ಸ್ಕಂದ ಚಿತ್ರದ ಸೋಲಿನ ಸುಳಿಯಲ್ಲಿರೋ ಶ್ರೀಲೀಲಾಗೆ ‘ಗುಂಟೂರು ಖಾರಂ’ (Guntur Kaaram) ಸೂಪರ್ ಸಕ್ಸಸ್ ಕೊಡುತ್ತಾ ಕಾಯಬೇಕಿದೆ.