ಲಾಕ್‍ಡೌನ್ ಮಧ್ಯೆ ಮಗನೊಂದಿಗೆ ಟೆನ್ನಿಸ್ ಆಡಿದ ಮಹೇಶ್ ಬಾಬು

ಹೈದರಾಬಾದ್: ಟಾಲಿವುಡ್‍ನ ಖ್ಯಾತ ನಟ ಪ್ರಿನ್ಸ್ ಮಹೇಶ್ ಬಾಬು ಅವರು ಲಾಕ್‍ಡೌನ್‍ನಲ್ಲಿ ಮನೆಮಂದಿ ಜೊತೆ ಮನೆಯಲ್ಲಿಯೇ ಕಾಲಕಳೆಯುತ್ತಿದ್ದು, ತಮ್ಮ ಇಬ್ಬರು ಮಕ್ಕಳ ಜೊತೆ ಮೋಜು ಮಸ್ತಿ ಮಾಡೋದ್ರಲ್ಲಿ ಬ್ಯುಸಿಯಾಗಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಮಹೇಶ್ ಬಾಬು ಹೆಚ್ಚು ಸಕ್ರಿಯವಾಗಿದ್ದರೂ ತಮ್ಮ ವೈಯಕ್ತಿಕ ವಿಷಯಗಳ ಬಗ್ಗೆ ಹಂಚಿಕೊಳ್ಳೋದು ಕಡಿಮೆ. ಹೆಚ್ಚಾಗಿ ಪ್ರಿನ್ಸ್ ತಮ್ಮ ಸಿನಿಮಾಕ್ಕೆ ಸಂಬಂಧಿಸಿದ ಪೋಸ್ಟ್ ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಆದರೆ ಮಹೇಶ್ ಅವರ ಪತ್ನಿ ನಮ್ರತಾ ಶಿರೋಡ್ಕರ್ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮಕ್ಕಳು, ಪತಿ ಬಗ್ಗೆ ಪೋಸ್ಟ್ ಹಾಕುತ್ತಿರುತ್ತಾರೆ. ಕುಟುಂಬದ ಜೊತೆಗೆ ಕಳೆದ ಸಿಹಿ ಕ್ಷಣಗಳನ್ನು ಶೇರ್ ಮಾಡುತ್ತಿರುತ್ತಾರೆ.

https://www.instagram.com/p/B_DACFwDS5y/?utm_source=ig_embed

ಈಗ ಕೊರೊನಾ ಲಾಕ್‍ಡೌನ್ ಜಾರಿಯಲ್ಲಿರುವುದರಿಂದ ಮಹೇಶ್ ಅವರು ಸಿನಿಮಾದಿಂದ ಬ್ರೇಕ್ ಪಡೆದು ಮನೆಯಲ್ಲಿಯೇ ಇದ್ದಾರೆ. ಹೀಗಾಗಿ ನಮ್ರತಾ ತಂದೆ, ಮಕ್ಕಳ ಮೋಜು ಮಸ್ತಿಯ ಸಾಕಷ್ಟು ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ತಮ್ಮ ಮಗಳು ಹಾಗೂ ಮಗನ ಹಳೇ ವಿಡಿಯೋಗಳನ್ನೂ ಶೇರ್ ಮಾಡುತ್ತಿದ್ದಾರೆ.

https://www.instagram.com/p/B–NUZzjLN4/?utm_source=ig_embed

ಸದ್ಯ ಲಾಕ್‍ಡೌನ್ ಅನ್ನು ಮಹೇಶ್ ಮನೆಯಲ್ಲಿ ಹೇಗೆ ಕಳೆಯುತ್ತಿದ್ದಾರೆ? ಏನು ಮಾಡುತ್ತಿದ್ದಾರೆ? ಮಕ್ಕಳ ಜೊತೆ ಮಸ್ತಿ ಮಾಡುತ್ತಿದ್ದಾರೆ ಎನ್ನುವ ಬಗ್ಗೆ ಕೂಡ ನಮ್ರತಾ ಅಭಿಮಾನಿಗಳಿಗೆ ಪೋಸ್ಟ್ ಗಳ ಮೂಲಕ ಅಪ್ಡೇಟ್ ಕೊಡುತ್ತಿದ್ದಾರೆ. ಜೊತೆಗೆ ಮನೆಯಲ್ಲಿಯೇ ಇರಿ ಹುಷಾರಾಗಿರಿ ಎಂದು ಪ್ರಿನ್ಸ್ ಜೋಡಿ ಅಭಿಮಾನಿಗಳಿಗೆ ಸಂದೇಶವನ್ನೂ ನೀಡಿದ್ದಾರೆ. ಅದರಲ್ಲಿ ಮಹೇಶ್ ಮಗ ಗೌತಮ್ ಜೊತೆ ಆನ್‍ಲೈನ್‍ನಲ್ಲಿ ಟೆನ್ನೀಸ್ ಆಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಅಬಿಮಾನಿಗಳು ವಿಡಿಯೋಗೆ ಫಿದಾ ಆಗಿದ್ದಾರೆ.

ಮನೆಯಲ್ಲಿ ಮಕ್ಕಳಿಗೆ ಜೋಕ್ ಹೇಳಿ ನಗಿಸುತ್ತಾ, ಅವರೊಂದಿಗೆ ಆಟವಾಡುತ್ತಾ ಕಾಲ ಕಳೆಯುತ್ತಿರುವ ಮಹೇಶ್ ಬಾಬು ಅವರ ವಿಡಿಯೋ, ಫೋಟೋಗಳು ಅಭಿಮಾನಿಗಳ ಮನಗೆದ್ದಿದ್ದು, ಎಲ್ಲೆಡೆ ಸಖತ್ ವೈರಲ್ ಆಗುತ್ತಿದೆ.

Comments

Leave a Reply

Your email address will not be published. Required fields are marked *