ಶಾಸಕರು ಆಯ್ತು ಈಗ ಶಿವಸೇನೆ ಸಂಸದರಿಂದಲೂ ಬಂಡಾಯ

ಮುಂಬೈ: ಶಾಸಕರ ಬಂಡಾಯದ ಬೆನ್ನಲ್ಲೇ ಈಗ ಶಿವಸೇನೆಯ ಸಂಸದರು ಬಂಡಾಯ ಏಳುವ ಸಾಧ್ಯತೆಯಿದೆ.

18 ಲೋಕಸಭಾ ಸದಸ್ಯರನ್ನು ಹೊಂದಿರುವ ಶಿವಸೇನೆಯ ಪೈಕಿ ಹಲವು ನಾಯಕರು ಏಕನಾಥ ಶಿಂಧೆ ನಾಯಕತ್ವಕ್ಕೆ ಬೆಂಬಲ ನೀಡಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ.

ಥಾಣೆ ಲೋಕಸಭಾ ಸಂಸದ ರಾಜನ್ ವಿಚಾರೆ, ವಾಶಿಮ್ ಕ್ಷೇತ್ರದ ಸಂಸದ ಭಾವನಾ ಗಾವ್ಲಿ, ರಾಮ್‌ಟೆಕ್ ಸಂಸದ ಕೃಪಾಲ್ ತುಮಾನೆ , ಕಲ್ಯಾಣ್ ಲೋಕಸಭಾ ಸಂಸದ ಶ್ರೀಕಾಂತ್ ಶಿಂಧೆ ಬಂಡಾಯ ಏಳುವ ಸಾಧ್ಯತೆಯಿದೆ.

ಏಕನಾಥ್ ಶಿಂಧೆಯ ಪುತ್ರ ಶ್ರೀಕಾಂತ್ ಶಿಂಧೆ ಈಗಾಗಲೇ ತಂದೆಯ ಜೊತೆ ಗುರುತಿಸಿಕೊಂಡಿದ್ದಾರೆ. ದಿನದಿಂದ ದಿನಕ್ಕೆ ಏಕನಾಥ್‌ ಶಿಂಧೆಯ ಜೊತೆ ಶಾಸಕರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈಗ ಸಂಸದರು ಬಂಡಾಯ ಏಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಯಾರು ಸ್ತ್ರೀಯರಿಗೆ ಅಪಮಾನ ಮಾಡುತ್ತಾರೋ ಅವರ ಪತನ ನಿಶ್ಚಿತ – ಕಂಗನಾ ಹಳೇ ವೀಡಿಯೋ ವೈರಲ್

ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನೆ ಮೈತ್ರಿ ಮಾಡಿಕೊಂಡಿತ್ತು. ಫಲಿತಾಂಶ ಪ್ರಕಟವಾದ ಬಳಿಕ ಶಿವಸೇನೆ ಮುಖ್ಯಮಂತ್ರಿ ಸ್ಥಾನಕ್ಕೆ ಪಟ್ಟು ಹಿಡಿದಿತ್ತು. ಬಿಜೆಪಿ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡದ ಹಿನ್ನೆಲೆಯಲ್ಲಿ ಎನ್‌ಸಿಪಿ, ಕಾಂಗ್ರೆಸ್‌ ಜೊತೆ ಸೇರಿ ಮೈತ್ರಿ ಮಾಡಿಕೊಂಡಿತ್ತು. ಸೈದ್ಧಾಂತಿಕ ವಿರೋಧಿಗಳ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿರುವುದು ಹಲವು ಶಿವಸೇನೆ ನಾಯಕರ ಅಸಮಾಧಾನಕ್ಕೆ ಕಾರಣವಾಗಿತ್ತು.

ಉದ್ಧವ್‌ ಠಾಕ್ರೆಯ ಪುತ್ರ ಮೋಹ, ಹಿರಿಯ ನಾಯಕರು ಮತ್ತು ಶಾಸಕರನ್ನು ಕಡೆಗಣಿಸಿದ್ದಕ್ಕೆ ಈಗ ಏಕನಾಥ್‌ ಶಿಂಧೆ ನೇತೃತ್ವದಲ್ಲಿ ಶಿವಸೇನೆ ನಾಯಕರು ಬಂಡಾಯ ಎದ್ದು ಸರ್ಕಾರವನ್ನೇ ಬೀಳಿಸಲು ಮುಂದಾಗಿದ್ದಾರೆ.

Live Tv

Comments

Leave a Reply

Your email address will not be published. Required fields are marked *