ಮಹಾರಾಷ್ಟ್ರ ನಗರ ಪಂಚಾಯತ್‌ ಚುನಾವಣಾ ಫಲಿತಾಂಶ – ಬಿಜೆಪಿ ಅತಿ ದೊಡ್ಡ ಪಕ್ಷ

ಮುಂಬೈ: ಮಹಾರಾಷ್ಟ್ರದ 106 ನಗರ ಪಂಚಾಯತ್‌ಗಳಿಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ಬಿಜೆಪಿ 384, ಎನ್‌ಸಿಪಿ 344, ಕಾಂಗ್ರೆಸ್‌ 316, ಶಿವಸೇನಾ 284, ಎಂಎನ್‌ಎಸ್‌ 4 ಸ್ಥಾನಗಳನ್ನು ಗೆದ್ದುಕೊಂಡಿದೆ. ಮಹಾ ವಿಕಾಸ್‌ ಅಘಾಡಿ ಸರ್ಕಾರ ಇರುವ ಕಾರಣ ಎನ್‌ಸಿಪಿ, ಕಾಂಗ್ರೆಸ್‌, ಶಿವಸೇನೆ ಕೆಲವು ಕೇತ್ರಗಳಲ್ಲಿ ಮೈತ್ರಿ ಮಾಡಿಕೊಂಡಿದ್ದರೆ ಕೆಲವು ಕಡೆ ಮೂರು ಏಕಾಂಗಿಯಾಗಿ ಸ್ಪರ್ಧಿಸಿತ್ತು. ಮೈತ್ರಿ ಪಕ್ಷ 57 ಅರೆನಗರಗಳ ಸ್ಥಳೀಯ ಸಂಸ್ಥೆಗಳನ್ನು ಗೆದ್ದಿದ್ದರೆ ಬಿಜೆಪಿ 24 ಸ್ಥಾನಗಳನ್ನು ಗೆದ್ದಿದೆ. ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಎಣ್ಣೆ ದರ ಭಾರೀ ಇಳಿಕೆ – ಮನೆಯಲ್ಲೇ ಮಿನಿಬಾರ್‌ಗೆ ಅನುಮತಿ

ಮಾಜಿ ಸಿಎಂ ದೇವೇಂದ್ರ ಫಡ್ನಾವಿಸ್‌ ಆಡಳಿತ ಪಕ್ಷದ ನೀತಿಗಳನ್ನು ತಿರಸ್ಕರಿಸಿದ್ದಕ್ಕಾಗಿ ನಾನು ಮತದಾರರಿಗೆ ಧನ್ಯವಾದ ಹೇಳುತ್ತೇನೆ. ಈ ಜನಾದೇಶದೊಂದಿಗೆ, ಮಹಾರಾಷ್ಟ್ರದ ಜನರು ಪ್ರಧಾನಿ ಮೋದಿಯವರ ಸಮರ್ಥ ಮತ್ತು ಬಲವಾದ ನಾಯಕತ್ವವನ್ನು ಮಾತ್ರ ನಂಬುತ್ತಾರೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ ಎಂದು ಹೇಳಿದ್ದಾರೆ.

ಆಡಳಿತ ಪಕ್ಷ ಹಣ ಬಲ ಸರ್ಕಾರಿ ಬಲದ ದುರುಪಯೋಗದ ಹೊರತಾಗಿಯೂ, ಮಹಾರಾಷ್ಟ್ರದ ಜನರು ಮುನ್ಸಿಪಲ್ ಕೌನ್ಸಿಲ್ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ದೃಢವಾಗಿ ನಿಂತಿದ್ದಾರೆ. ನಾವು ಸುಮಾರು 30 ಕಡೆ ಅಧಿಕಾರ ಹಿಡಿದಿದ್ದೇವೆ. 415ಕ್ಕೂ ಹೆಚ್ಚು ಮಂದಿ ಚುನಾಯಿತರಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತೊಮ್ಮೆ ನಂ.1 ಪಕ್ಷವಾಗಿದೆ ಎಂದು ಟ್ವೀಟ್‌ ಮಾಡಿದ್ದಾರೆ. ಇದನ್ನೂ ಓದಿ:  ಅಮೆರಿಕದಿಂದಲೇ ಕಾನ್ಪುರದಲ್ಲಿ ನಡೆಯುತ್ತಿದ್ದ ಕಳ್ಳತನವನ್ನು ತಡೆದ ಮನೆಯವರು

Comments

Leave a Reply

Your email address will not be published. Required fields are marked *