ಸುಳ್ಳು ದಾಳಿ ಸೃಷ್ಟಿಸಿದ ಶಿವಸೇನಾ ನಾಯಕನ ಬಂಧನ

ಮುಂಬೈ: ರಿವಾಲ್ವರ್ ಪಡೆಯಲು ಐದು ತಿಂಗಳ ಹಿಂದೆ ಸುಳ್ಳು ದಾಳಿಯನ್ನು ಸೃಷ್ಟಿಸಿದ ಆರೋಪದ ಮೇಲೆ ಶಿವಸೇನಾ ನಾಯಕನನ್ನು ಪೊಲೀಸರು ಬಂಧಿಸಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಶಿವಸೇನಾ ನಾಯಕ ಬಾಲಾ ಅಲಿಯಾಸ್ ರಾಜೇಶ್ ಗುಡೆ ಆರೋಪಿ. ಇವರು ಶಿವ ಸೇನೆಯ ಪಾಲ್ಘರ್ ಜಿಲ್ಲಾ ಘಟಕದ ಸದಸ್ಯರಾಗಿದ್ದಾರೆ. ರಾಜೇಶ್ ಗುಡೆ ರಿವಾಲ್ವರ್‌ಗೆ ಪರವಾನಗಿ ಪಡೆಯಲು ಈ ರೀತಿ ಮಾಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಡೆದಿದ್ದೇನು?: ಕೆಲವು ಅಪರಿಚಿತ ವ್ಯಕ್ತಿಗಳು ತಮ್ಮ ಕಾರಿಗೆ ರಿವಾಲ್ವರ್‌ನಿಂದ ಗುಂಡು ಹಾರಿಸಿದ್ದಾರೆ. ತಮಗೆ ಭದ್ರತೆ ಬೇಕು. ಇದರಿಂದಾಗಿ ರಿವಾಲ್ವರ್ ಇಟ್ಟುಕೊಳ್ಳಲು ಪರವಾನಗಿ ನೀಡಿ ಎಂದು ರಾಜೇಶ್ ಗುಡೆ ಅವರು ಜೂನ್ 28 ರಂದು ಪೊಲೀಸರಿಗೆ ದೂರು ನೀಡಿದ್ದರು. ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿ ಕೋವಿಡ್-19 ಟೆಸ್ಟಿಂಗ್ ಹೆಚ್ಚಳ

ಪೊಲೀಸರು ಈ ಪ್ರಕರಣವನ್ನು ಕೈಗೆತ್ತುಕೊಂಡು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಹೆಚ್ಚಿನ ತನಿಖೆಯಲ್ಲಿ ರಿವಾಲ್ವರ್ ಇಟ್ಟುಕೊಳ್ಳಲು ಪರವಾನಗಿ ಪಡೆಯಲು ಕಾರಿಗೆ ಗುಂಡು ಹಾರಿಸಿದ ಘಟನೆಯನ್ನು ಸೃಷ್ಟಿಸಿದ್ದಾರೆ ಎನ್ನುವುದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ರಾಜೇಶ್ ಗುಡೆ ಜೊತೆಗೆ ಅಪರಾಧದಲ್ಲಿ ಭಾಗಿಯಾಗಿದ್ದ ಇಬ್ಬರು ಸಹಚರರನ್ನು ಬಂಧಿಸಲಾಗಿದ್ದು, ರಿವಾಲ್ವರ್‌ನ್ನು ಹಿಂಪಡೆಯಲಾಗಿದೆ. ಇದನ್ನೂ ಓದಿ: 3ನೇ ಅಲೆ ತೀವ್ರತೆ ಹೆಚ್ಚಾಗಬಹುದು – ಐಎಂಎ ವಾರ್ನಿಂಗ್

Comments

Leave a Reply

Your email address will not be published. Required fields are marked *