ವಿಜಯ್ ಸೇತುಪತಿ ನಟನೆಯ 50ನೇ ಚಿತ್ರ ‘ಮಹಾರಾಜ’ ಪೋಸ್ಟರ್ ಔಟ್

‘ಜವಾನ್’ (Jawan) ಸಿನಿಮಾದಲ್ಲಿ ಶಾರುಖ್ ಖಾನ್ (Sharukh Khan) ಎದುರು ವಿಜಯ್ ಸೇತುಪತಿ (Vijay Sethupathi) ವಿಲನ್ ಆಗಿ ಅಬ್ಬರಿಸಿದ ಬೆನ್ನಲ್ಲೇ ತಮ್ಮ ನಟನೆಯ 50ನೇ ಸಿನಿಮಾ ಬಗ್ಗೆ ವಿಜಯ್ ಸೇತುಪತಿ ಗುಡ್ ನ್ಯೂಸ್ ನೀಡಿದ್ದಾರೆ. ಮಹಾರಾಜನಾಗಿ ವಿಜಯ್ ಎಂಟ್ರಿ ಕೊಡ್ತಿದ್ದಾರೆ.

ಸೆ.10ರಂದು ಚೆನ್ನೈನಲ್ಲಿ ಚಿತ್ರದ ಅದ್ದೂರಿ ಕಾರ್ಯಕ್ರಮ ನಡೆದಿದೆ. ‘ಮಹಾರಾಜ’ (Maharaja) ಸಿನಿಮಾ ಅನೌನ್ಸ್ ಮಾಡಿದ್ದು, ವಿಜಯ್ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಪೊಲೀಸ್ ಠಾಣೆಯಲ್ಲಿ ಕೈಯಲ್ಲಿ ಕತ್ತಿ ಹಿಡಿದು ಚೇರ್‌ನಲ್ಲಿ ಕುಳಿತು ರಕ್ತ ಸಿಕ್ತವಾಗಿ ಕುಳಿರುವ ಪೋಸ್ಟರ್ ರಿಲೀಸ್ ಆಗಿದೆ. ಚಿತ್ರಕ್ಕೆ ನಿಥಿಲನ್ ನಿರ್ದೇಶನ ಮಾಡುತ್ತಿದ್ದಾರೆ. ಇದನ್ನೂ ಓದಿ:‘ಮುಟ್ಟಿ’ನ ಯೋಜನೆಗೆ ‘ಕಾಂತಾರ’ ನಟಿ ಸಪ್ತಮಿ ರಾಯಭಾರಿ

ವಿಜಯ್ ನಟನೆಯ 50ನೇ ಸಿನಿಮಾ ಆಗಿರುವ ಕಾರಣ, ಹಿಂದಿನ ಸಿನಿಮಾಗಿಂತ ಈ ಚಿತ್ರ ವಿಭಿನ್ನವಾಗಿರಲಿದೆ. ಎಂದೂ ನಟಿಸಿರದ ಡಿಫರೆಂಟ್ ರೋಲ್‌ನಲ್ಲಿ ವಿಜಯ್ ಸೇತುಪತಿ ನಟಿಸಿದ್ದಾರೆ.

ಚಿತ್ರದಲ್ಲಿ ಮೊತ್ತೊಂದು ವಿಶೇಷ ಅಂದರೆ, ವಿಜಯ್ ಜೊತೆ ಬಾಲಿವುಡ್ ಡೈರೆಕ್ಟರ್ ಅನುರಾಗ್ ಕಶ್ಯಪ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯದಲ್ಲೇ ಚಿತ್ರದ ರಿಲೀಸ್ ಬಗ್ಗೆ ಅಪ್‌ಡೇಟ್ ಸಿಗಲಿದೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]