– ಅನಕ್ಷರಸ್ಥರ ಗುಂಪು ದೇಶಕ್ಕೆ ಅಪಾಯ ಎಂದ ಮಂತ್ರಿ
ಇಸ್ಲಾಮಾಬಾದ್: ತೆಹ್ರಿಕ್-ಎ-ಲೆಬ್ಬೈಕ್ ಸಂಘಟನೆಗೆ ಸೇರಿದ ಯುವಕನೋರ್ವ ಲಾಹೋರಿನಲ್ಲಿ ಪ್ರತಿಷ್ಠಾಪಿಸಲಾಗಿದ್ದ ಮಹಾರಾಜ ರಣ್‍ಜಿತ್ ಸಿಂಗ್ ಅವರ ಪ್ರತಿಮೆಯನ್ನು ಧ್ವಂಸಗೊಳಿಸಿದ್ದಾನೆ.
ಈ ಘಟನೆಯನ್ನು ಪಾಕಿಸ್ತಾನದ ಸಚಿವ ಫವಾನ್ ಚೌಧರಿ ಹುಸೈನ್ ಖಂಡಿಸಿದ್ದಾರೆ. ಈ ರೀತಿಯ ಅನಕ್ಷರಸ್ಥರ ಗುಂಪು ದೇಶದ ಬೆಳವಣಿಗೆಗೆ ಮತ್ತು ವಿಶ್ವಕ್ಕೆ ಅಪಾಯಾಕಾರಿ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಮೂರ್ತಿಯನ್ನು ಕೆಡವುತ್ತಿರುವ ವೀಡಿಯೋ ವೈರಲ್ ಆಗಿದೆ. ಪ್ರತಿಮೆ ನಿಲ್ಲಿಸಿದ್ದ ಸರ್ಕಲ್ ನಲ್ಲಿ ನುಗ್ಗುವ ಯುವಕ ಧ್ವಂಸಗೊಳಿಸಲು ಮುಂದಾಗುತ್ತಿದ್ದಂತೆ ಸ್ಥಳೀಯರು ಅದನ್ನೆಲ್ಲ ಮಾಡೋದು ಬೇಡ, ಹೊರಗಡೆ ಬಾ ಎಂದು ಹೇಳಿದ್ದಾರೆ. ಆದರೂ ಯುವಕ ಪ್ರತಿಮೆಯ ಕೈಗಳನ್ನು ಕಿತ್ತಿದ್ದಾನೆ. ಅಷ್ಟರಲ್ಲಿ ಮತ್ತೋರ್ವ ಯುವಕನನ್ನು ತಡೆಯಲು ಮುಂದಾಗುತ್ತಾನೆ.

ಪ್ರತಿಮೆ ಕೆಡವಿದ ಬಳಿಕ ಪಾಕಿಸ್ತಾನದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಈ ಸಂಬಧ ಪ್ರತಿಕ್ರಿಯಿಸಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಆಪ್ತ ಸಹಾಯಕ ಡಾ.ಶಹಬಾಜ್ ಗಿಲ್, ವಿದ್ವಂಸಕರಿಗೆ ಇದೊಂದು ಮಾನಸಿಕ ರೋಗದ ಲಕ್ಷಣವಾಗಿದ್ದು, ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಇಂತಹ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ. ಆರೋಪಿಯನ್ನು ರಿಜ್ವಾನ್ ಎಂದು ಗುರುತಿಸಲಾಗಿದೆ. ಇದನ್ನೂ ಓದಿ:ಅಫ್ಘಾನಿಸ್ತಾನದಲ್ಲಿ ಶಾಲೆ, ಕಾಲೇಜು ಬಂದ್ – ಬುರ್ಖಾ ಅಂಗಡಿ ಓಪನ್
https://twitter.com/AU_Qasmi/status/1427516195331354707
ಪಾಕಿಸ್ತಾನದ ಲಾಹೋರ್ ನಗರದ ಕೋಟೆ ಬಳಿ ಸಿಖ್ ಸಮುದಾಯದ ನಾಯಕ ರಣ್‍ಜಿತ್ ಸಿಂಗ್ ಅವರ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿತ್ತು. 19ನೇ ಶತಮಾನದ ಈ ಮೂರ್ತಿಯನ್ನು ತೆಗೆಯಲು ಇದಕ್ಕೂ ಹಲವು ಪ್ರಯತ್ನಗಳು ನಡೆದಿದ್ದವು. ಈ ಮೊದಲು ಸಹ ರಣ್‍ಜಿತ್ ಸಿಂಗ್ ಮೂರ್ತಿಯನ್ನು ಧ್ವಂಸಗೊಳಿಸಲಾಗಿತ್ತು. ಇದನ್ನೂ ಓದಿ: ಉಗ್ರರಿಗೆ ಆಟ, ಮಹಿಳೆಯರಿಗೆ ಪ್ರಾಣ ಸಂಕಟ – ಷರಿಯತ್ ಏನು ಹೇಳುತ್ತದೆ? ತಾಲಿಬಾನ್ ಕಾನೂನು ಏನು?

Leave a Reply