ರೈಲು ಕಾಯ್ತಿದ್ದ ಯುವತಿ ಮೇಲೆ ಗ್ಯಾಂಗ್ ರೇಪ್ – 4 ದಿನಗಳ ನಂತ್ರ ಸಂತ್ರಸ್ತೆಗೆ ಪ್ರಜ್ಞೆ

-ಗೆಳೆಯ ಕರೆದಿದ್ದಕ್ಕೆ ಬಂದಾಗ ರೇಪ್

ಲಕ್ನೋ: ಮಹರಗಂಜ್ ರೈಲ್ವೇ ನಿಲ್ದಾಣದಲ್ಲಿ ರೈಲು ಕಾಯುತ್ತಿದ್ದ ಯುವತಿ ಮೇಲೆ ಗ್ಯಾಂಗ್ ರೇಪ್ ನಡೆದಿದ್ದು, ನಾಲ್ಕು ದಿನಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

ಯುವತಿಗೆ ನಶೆ ಪದಾರ್ಥ ತಿನ್ನಿಸಿ, ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ರಾತ್ರಿ ನಿರಂತರವಾಗಿ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. ಸುಮಾರು ಆರು ಜನರು ಅತ್ಯಾಚಾರ ಎಸಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಇಬ್ಬರನ್ನು ಬಂಧಿಸಿದ್ದು, ಓರ್ವನ ವಶಕ್ಕೆ ಪಡೆದು ಘಟನೆ ಸಂಬಂಧ ಮಾಹಿತಿ ಕಲೆ ಹಾಕುತ್ತಿದ್ದಾರೆ. ಪೊಲೀಸರು ಸಂತ್ರಸ್ತೆ ಗೆಳೆಯನನನ್ನು ಭೇಟಿಯಾಗಲು ಬಂದಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

  

ಫೆಬ್ರವರಿ 20ರಂದು ಅತ್ಯಾಚಾರ ನಡೆದಿದ್ದು, ಅಂದು ಸಂಜೆ ಯುವತಿಯನ್ನು ಆಕೆಯ ತಂದೆ ಸಿಸವಾ ಬಜಾರ್ ರೈಲ್ವೇ ನಿಲ್ದಾಣಕ್ಕೆ ಕರೆದುಕೊಂಡು ಬಂದಿದ್ದಾರೆ. ರೈಲು ಬರೋದಕ್ಕೂ ಮೊದಲೇ ಯುವತಿ ತಂದೆ ಹಿಂದಿರುಗಿದ್ದರು. ಹಾಗಾಗಿ ಯುವತಿ ತಾನೊಬ್ಬಳೇ ಸಂಬಂಧಿ ಮನೆಗೆ ಹೋಗಲು ರೈಲು ಕಾಯುತ್ತಿದ್ದಳು. ಈ ವೇಳೆ ರೈಲಿನಲ್ಲಿ ತಿಂಡಿ ಮಾರುವ ಬಂದಿದ್ದಾರೆ.

ಯುವತಿ ಜೊತೆ ಮಾತನಾಡುತ್ತಾ ಬಲವಂತವಾಗಿ ನಶೆ ಪದಾರ್ಥ ಮಿಶ್ರಿತ ಆಹಾರ ನೀಡಿದ್ದಾರೆ. ಕೊನೆಗೆ ಅವರು ನೀಡಿದ ಚಹಾ ಕುಡಿದ ಯುವತಿ ಪ್ರಜ್ಞೆ ತಪ್ಪಿದ್ದಾಳೆ. ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ರಾತ್ರಿ ಇಡೀ ಅತ್ಯಾಚಾರ ಎಸಗಿ ಪರಾರರಿಯಾಗಿದ್ದಾರೆ.

ಯುವತಿ ರಾತ್ರಿಯೆಲ್ಲ ರೈಲ್ವೇ ನಿಲ್ದಾಣ ಬಳಿಯ ನಿರ್ಜನ ಪ್ರದೇಶದಲ್ಲಿ ಪ್ರಜ್ಞೆಹೀನಾ ಸ್ಥಿತಿಯಲ್ಲಿದ್ದಳು. ಬೆಳಗ್ಗೆ ಸ್ಥಳೀಯರು ಯುವತಿಯನ್ನು ಗಮನಿಸಿದಾಗ ಆಕೆಯ ತಂದೆಗೆ ವಿಷಯ ತಿಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ತಂದೆ ಮಗಳನ್ನು ಎಚ್ಚರಿಸಿ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಮನೆಗೆ ಹೋಗ್ತಿದ್ದಂತೆ ಯುವತಿ ಮತ್ತೆ ಪ್ರಜ್ಞೆ ಕಳೆದುಕೊಂಡಿದ್ದಾಳೆ. ಫೆಬ್ರವರಿ 24ರಂದು ಯುವತಿಗೆ ಪ್ರಜ್ಞೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.

ಮಗಳನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋದ ತಂದೆ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಂತ್ರಸ್ತೆ ಹೇಳಿದ ಮೂವರಲ್ಲಿ ಇಬ್ಬರನ್ನು ಬಂಧಿಸಿದ್ದಾರೆ. ಓರ್ವನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ. ಆದ್ರೆ ಪೊಲೀಸರ ಪ್ರಕಾರ ಪ್ರಕರಣದಲ್ಲಿ ಸುಮಾರು ಆರು ಜನರು ಶಾಮೀಲಾಗಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿ ಅಶುತೋಷ್ ಶುಕ್ಲಾ, ರಾಮಸನೇಹಿ ಅಲಿಯಾಸ್ ಸನೇಹಿ, ಬುವಾರ ಅಲಿಯಾಸ್ ಅನಿಲ್ ಮತ್ತು ಲಾಲಾ ಅಲಿಯಾಸ್ ರಾಹುಲ್ ಶ್ರೀವಾತ್ಸವ್ ಮೇಲೆ ಪ್ರಕರಣ ದಾಖಲಿಕೊಳ್ಳಲಾಗಿದೆ. ರೈಲ್ವೇ ನಿಲ್ದಾಣದಲ್ಲಿ ಕೆಲಸ ಮಾಡ್ತಿದ್ದ ಯುವಕನನ್ನು ಭೇಟಿಯಾಗಲು ಬಂದಿದ್ದಳು. ಈ ವೇಳೆ ತನ್ನ ಸ್ನೇಹಿತರೊಂದಿಗೆ ಸೇರಿ ಯುವಕ ಅತ್ಯಾಚಾರ ಎಸಗಿದ್ದಾನೆ ಎಂದು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *