ನೇಣುಬಿಗಿದ ಸ್ಥಿತಿಯಲ್ಲಿ ಪ್ರಯಾಗರಾಜ್ ಸಂತ ನರೇಂದ್ರಗಿರಿ ಪತ್ತೆ

ಅಲಹಾಬಾದ್: ಪ್ರಯಾಗರಾಜ್ (ಅಲಹಾಬಾದ್)ಅಖಾಡ ಪರಿಷತ್ ಅಧ್ಯಕ್ಷ ಮಹಾಂತ ನರೇಂದ್ರ ಗಿರಿ ಮಹಾರಾಜ್ ಸೋಮವಾರ ನಿಧನರಾಗಿದ್ದಾರೆ.

ಪ್ರಯಾಗರಾಜ್‍ನ ಬಘಂಬರಿ ಮಠದ ಕೊಠಡಿಯ ಸೀಲಿಂಗ್ ಫ್ಯಾನ್‍ಗೆ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದೆ. ಕೋಣೆಯಿಂದ ಆತ್ಮಹತ್ಯೆ ಪತ್ರ ಕೂಡ ಪತ್ತೆಯಾಗಿದೆ.

ವಿಷಯದ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು, ವಿಧಿವಿಜ್ಞಾನ ತಂಡ ಮತ್ತು ಶ್ವಾನದಳವನ್ನು ಸಹ ತನಿಖೆ ಮಾಡಲಾಯಿತು. ಆತ್ಮಹತ್ಯೆ ಟಿಪ್ಪಣಿಯಲ್ಲಿ ಮಠದ ಶಿಷ್ಯ ಆನಂದ್ ಗಿರಿಯೊಂದಿಗೆ ಅಸಮಾಧಾನಗೊಂಡ ಬಗ್ಗೆ ಬರೆಯಲಾಗಿದೆ.

ಆನಂದ್ ಗಿರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವರ ಭಕ್ತರು ಅನುಯಾಯಿಗಳ ಪಟ್ಟಿ ಯಲ್ಲಿ ಪ್ರಭಾವಿ ಶಾಲಿ ರಾಜಕಾರಣಿಗಳು, ಉದ್ಯಮಿಗಳು ಇದ್ದಾರೆ. ಆತ್ಮಹತ್ಯೆ ಪತ್ರದ ಕುರಿತಂತೆ ವಿಧಿವಿಜ್ಞಾನ ಇಲಾಖೆ ತನಿಖೆ ನಡೆಸಲಿದೆ ಎಂದು ಪೊಲೀಸರು ತಿಸಿದ್ದಾರೆ.

ಅನುಮಾನಾಸ್ಪದ ಸನ್ನಿವೇಶಗಳನ್ನು ಗಮನದಲ್ಲಿಟ್ಟುಕೊಂಡು, ಮರಣೋತ್ತರ ಪರೀಕ್ಷೆಯ ಬಗ್ಗೆ ಆಡಳಿತವು ಆಲೋಚಿಸುತ್ತಿದೆ. ನರೇಂದ್ರ ಗಿರಿ ಸಾವಿನ ಸುದ್ದಿ ಬಂದ ತಕ್ಷಣ ಸಂತ ಸಮಾಜದಲ್ಲಿ ಶೋಕದ ಅಲೆ ಎದ್ದಿತು. ಸಂತರು ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದ್ದಾರೆ. ಪ್ರಕರಣವನ್ನು ಕೊಲೆ ಎಂದು ಕೆಲವರು ಆರೋಪಿಸುತ್ತಾರೆ. ನರೇಂದ್ರ ಗಿರಿ ಸಾವಿನ ಸುದ್ದಿ ಬಂದ ತಕ್ಷಣ ಪ್ರಧಾನಿ ಮೋದಿ, ಸಿಎಂ ಯೋಗಿ ಸೇರಿದಂತೆ ಬಹುತೇಕರು ಸಂತಾಪ ಸೂಚಿಸಿದರು ಮತ್ತು ಶ್ರದ್ಧಾಂಜಲಿ ಸಲ್ಲಿಸಿದರು.

ಸಿಎಂ ಭೇಟಿ: ಉತ್ತರಪ್ರದೇಶ ದ ಮುಖ್ಯಮಂತ್ರಿ ಯೋಗಿ ಆಡಿತ್ಯನಾಥ್ ಮತ್ತು ಸಚಿವ ಸಂಪುಟದ ಬಹುತೇಕ ಸದಸ್ಯರು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಂಜೆ ಐದರ ಸುಮಾರಿಗೆ ಪ್ರಕರಣ ಬೆಳಕಿಗೆ ಬಂದಿದೆ.

 

ನಿತ್ಯ ಮಧ್ಯಾಹ್ನ ಮೂರರ ಸುಮಾರಿಗೆ ವಿಶ್ರಾಂತಿಗೆ ತೆರಳುತ್ತಿದ್ದ ಗಿರಿ ನಾಲ್ಕು ಮೂವತ್ತರ ವೇಳೆಗೆ ವಿಶ್ರಾಂತಿ ಕೊಠಡಿಯಿಂದ ಹೊರಗೆ ಬಂದು ಭಕ್ತರ ಭೇಟಿ ನಂತರ ಐದರ ಸುಮಾರಿಗೆ ಸ್ನಾನಕ್ಕೆ ತೆರಳಿ ಆರರ ವೇಳೆಗೆ ಪೂಜೆ ಕಾರ್ಯದಲ್ಲಿ ಪಾಲ್ಗೊಳ್ಳುವ ಸಂಪ್ರದಾಯ ಇತ್ತು. ಇದನ್ನೂ ಓದಿ: ಧಾರ್ಮಿಕ ಕಟ್ಟಡಗಳ ಸಂರಕ್ಷಣೆ ಮುಂದಾದ ಸರ್ಕಾರ – ಮಸೂದೆಯಲ್ಲಿ ಏನಿದೆ?

ಐದು ಗಂಟೆ ಆದರೂ ಕೊಠಡಿ ಬಾಗಿಲು ತೆರೆಯದೇ ಇದ್ದುದರಿಂದ ಕಿರಿಯ ಸ್ವಾಮಿಗಳು ಬಾಗಿಲು ಮುರಿದು ಒಳ ಹೊಕ್ಕು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಇವರ ನೇತೃತ್ವದಲ್ಲಿ ಸಾಧು ಸನ್ಯಾಸಿಗಳ ಹದಿನೆಂಟು ಅಖಾಡಗಳು ಇದ್ದು ಇವರ ಮಾರ್ಗದರ್ಶನದಲ್ಲಿ ಕುಂಭಮೇಳ ನಡೆಯುತ್ತಿತ್ತು.

Comments

Leave a Reply

Your email address will not be published. Required fields are marked *