ನಟಿ ಮಹಾಲಕ್ಷ್ಮಿಯನ್ನು ಮದುವೆಯಾಗಲು ನಿರ್ಮಾಪಕ ರವೀಂದರ್ ಚಂದ್ರಶೇಖರನ್ (Ravinder Chandrasekaran) ದುಬಾರಿ ಗಿಫ್ಟ್ ಗಳನ್ನೇ ನೀಡಿದ್ದಾರಂತೆ. ಮದುವೆಗೆ ಏನೆಲ್ಲ ಉಡುಗೊರೆ ನೀಡಿದ್ದಾರೆ ಎನ್ನುವ ಕುರಿತು ತಮಿಳು ಸುದ್ದಿ ಮಾಧ್ಯಮಗಳು ರಸವತ್ತಾಗಿ ಸುದ್ದಿಗಳನ್ನು ಬಿತ್ತರಿಸುತ್ತಿವೆ. ಮದುವೆಗೂ ಮುನ್ನ ಮಹಾಲಕ್ಷ್ಮಿ (Mahalakshmi) ಇಂತಹ ಉಡುಗೊರೆಗಳನ್ನು ಆಫರ್ ಮಾಡಿದ್ದರಾ ಅಥವಾ ಇಷ್ಟಪಟ್ಟು ರವೀಂದರ್ ಅವರೇ ಅವುಗಳನ್ನು ನೀಡಿದ್ದಾರಾ ಎನ್ನುವ ಪ್ರಶ್ನೆಯನ್ನೂ ಹುಟ್ಟುಹಾಕಿವೆ.

ಮಹಾಲಕ್ಷ್ಮಿ ಮಲಗಲು ಬಂಗಾರದ ಲೇಪನವಿರುವ ಮಂಚವನ್ನು ರವೀಂದರ್ ಉಡುಗೊರೆಯಾಗಿ ನೀಡಿದ್ದಾರಂತೆ. ಅಲ್ಲದೇ, ಬರೋಬ್ಬರಿ ಮುನ್ನೂರು ರೇಷ್ಮೆ ಸೀರೆಗಳನ್ನು ಖರೀಸಿದ್ದಾರಂತೆ. ದುಬಾರಿಯ ಫ್ಲ್ಯಾಟ್ ವೊಂದನ್ನು ಹೆಂಡತಿಗೆ ಕೊಡಲು ತಯಾರಿ ಕೂಡ ಮಾಡಿಕೊಂಡಿದ್ದಾರಂತೆ. ಕೋಟಿ ಕೋಟಿ ಬೆಲೆಬಾಳುವ ಬಂಗಾರದ ಒಡವೆಗಳನ್ನು ಈಗಾಗಲೇ ಮದುವೆ ಸಂದರ್ಭದಲ್ಲಿ ರವೀಂದರ್ ನೀಡಿದ್ದಾರಂತೆ. ಅಲ್ಲದೇ, ಹೆಂಡತಿ ಬಯಸುವ ಮತ್ತಷ್ಟು ಉಡುಗೊರೆಗಳನ್ನೂ ಕೊಡುವುದಾಗಿ ಅವರು ಹೇಳಿದ್ದಾರಂತೆ. ಇದನ್ನೂ ಓದಿ:ಪಾಕಿಸ್ತಾನಿ ಬೌಲರ್ ನಸೀಮ್ ಶಾಗೆ ಬೋಲ್ಡ್ ಆದ `ಐರಾವತ’ ನಟಿ

ಈ ನಡುವೆ ಮತ್ತೊಂದು ಸ್ಪೂಟಕ ಸುದ್ದಿ ಹೊರ ಬಂದಿದ್ದು, ಮಹಾಲಕ್ಷ್ಮಿಗೆ ಈ ಮೊದಲೇ ಮದುವೆ ಆಗಿತ್ತು. ಎರಡು ಮಕ್ಕಳು ಕೂಡ ಇವೆ. ಮೊದಲ ಗಂಡನಿಂದ ಡಿವೋರ್ಸ್ ಪಡೆದ ನಂತರ ತಮ್ಮೊಂದಿಗೆ ನಟಿಸುತ್ತಿದ್ದ ಸಹ ನಟ ಈಶ್ವರ್ ಎನ್ನುವವರ ಜತೆ ಅಫೇರ್ ಇಟ್ಟುಕೊಂಡಿದ್ದರು ಎಂದು ಸ್ವತಃ ಈಶ್ವರ್ ಅವರ ಪತ್ನಿಯೇ ಆರೋಪ ಮಾಡಿದ್ದಾರೆ. ನನ್ನ ಗಂಡನ ಜೊತೆ ಮಹಾಲಕ್ಷ್ಮಿ ದಿನ ರಾತ್ರಿಯೂ ವಿಡಿಯೋ ಕಾಲ್ ಮಾಡಿ ಮಾತನಾಡುತ್ತಿದ್ದಳು. ಅದಕ್ಕೆ ಬೇಕಾದ ಸಾಕ್ಷಿ ನನ್ನ ಬಳಿ ಇದೆ ಎಂದು ಈಶ್ವರ್ ಪತ್ನಿ ಜಯಶ್ರೀ (Jayashree) ಆರೋಪ ಮಾಡಿದ್ದರು.

ರವೀಂದರ್ ಚಂದ್ರಶೇಖರನ್ ಜೊತೆ ಮಹಾಲಕ್ಷ್ಮಿ ಮದುವೆ ಆಗುತ್ತಿದ್ದಂತೆಯೇ ಈ ವಿಷಯ ತಮಿಳು ಮಾಧ್ಯಮದಲ್ಲಿ ಮತ್ತೆ ಪ್ರಮುಖ ಸುದ್ದಿಯಾಗಿದೆ. ಮಹಾಲಕ್ಷ್ಮಿ ಮತ್ತು ಈಶ್ವರ್ ಲವ್ವಿ ಡವ್ವಿ ವಿಚಾರ ರವೀಂದರ್ ಅವರಿಗೂ ಗೊತ್ತಿತ್ತು ಎಂದು ವರದಿಯಾಗಿದೆ. ಎಲ್ಲ ಗೊತ್ತಿದ್ದರೂ ಮಹಾಲಕ್ಷ್ಮಿಯನ್ನು ರವೀಂದರ್ ಮದುವೆ ಆಗಿದ್ದಾರೆ ಎಂದು ವರದಿಗಳಲ್ಲಿ ಉಲ್ಲೇಖಿಸಲಾಗುತ್ತಿದೆ. ಮದುವೆ ಅವರ ಸ್ವಂತ ವಿಚಾರ. ಅಷ್ಟಕ್ಕೂ ಇಬ್ಬರೂ ಕಾನೂನು ಬದ್ಧವಾಗಿಯೇ ಮದುವೆಯಾಗಿದ್ದಾರೆ. ಆದರೂ, ಜಯಶ್ರೀ ಆರೋಪ ಇದೀಗ ಮುನ್ನೆಲೆಗೆ ಬಂದಿದೆ.

ರವೀಂದರ್ ಮತ್ತು ಮಹಾಲಕ್ಷ್ಮಿ ಮದುವೆ (marriage) ವಿಚಾರ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದರೂ, ಈ ಜೋಡಿ ಇದೀಗ ಹನಿಮೂನ್ ಗೆ ಹೊಗಲು ಸಿದ್ಧತೆ ಮಾಡಿಕೊಂಡಿದೆ. ಪರಸ್ಪರ ಇಬ್ಬರೂ ಗೌರವದ ಮಾತುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡು ಹೊಸ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ.

Leave a Reply